ಗುಲ್ ಪನಾಗ್ ನಟನೆಯ ವಿಲಕ್ಷಣ (ನಿಗೂಢ) ಸಂಚಿನ ಕಿರುಚಿತ್ರ “ಮನೋರಂಜನ್” ಪ್ರದರ್ಶಿಸಿದ ರಾಯಲ್ ಸ್ಟ್ಯಾಗ್ ಬ್ಯಾರೆಲ್ ಸೆಲೆಕ್ಟ್ ಲಾರ್ಜ್ ಶಾರ್ಟ್ ಫಿಲಮ್ಸ್

ಗುಲ ಪನಾಗ್ ನಟಿಸಿರುವ ಮತ್ತು ನಟ/ಲೇಖಕ ಸುಖಮನಿ ಸಾದನ ಬರೆದಿರುವ ಹಾಗೂ ಸುಹೈಲ್ ತಾತಾರಿಯವರ ನಿರ್ದೇಶನದ ಅತ್ಯಂತ ನಿರೀಕ್ಷಿತ ಕಿರುಚಿತ್ರವು ಆಸಕ್ತಿಪೂರ್ಣ ಮನೋವೈಜ್ಞಾನಿಕ ಚಲನಚಿತ್ರವಾಗಿದೆ.

ಬೆಂಗಳೂರು (hairamanagara.in) : ರಾಯಲ್ ಸ್ಟ್ಯಾಗ್ ಬ್ಯಾರೆಲ್ ಸೆಲೆಕ್ಟ್ ಲಾರ್ಜ್ ಶಾರ್ಟ್ ಫಿಲಮ್ಸ್ ಇಂದು “ಮನೋರಂಜನ್” ಚಿತ್ರದ ಪ್ರೀಮಿಯರ್ ಪ್ರದರ್ಶನ ಏರ್ಪಡಿಸಿತ್ತು. ಕಿರುಚಿತ್ರದಲ್ಲಿ ತಮ್ಮ ನಟನೆಗಾಗಿ ಪ್ರಸಿದ್ಧರಾದ ಗುಲ್ ಪನಾಗ್ ಅವರು ಇದ್ದು, ಅವರೇ ಈ ಕಿರುಚಿತ್ರದ ನಿರ್ಮಾಪಕರೂ ಆಗಿದ್ದಾರೆ. ಮನೋವೈಜ್ಞಾನಿಕವಾದ ಈ ನಿಗೂಢ ಚಿತ್ರದ ಸೆರೆಹಿಡಿಯುವ ಕಥಾನಕವಿರುವ ಈ ಕಿರುಚಿತ್ರದಲ್ಲಿ ಅವರು ಸರಳವಾದ “ಲಲಿತ” ಎಂಬ ಗೃಹಿಣಿಯ ಪಾತ್ರ ನಿರ್ವಹಿಸಿದ್ದಾರೆ. ಅಂಕುರ್ ಅರೋರಾ ಮರ್ಡರ್ ಕೇಸ್ ಮತ್ತು ಸಮ್ಮರ್ 2007ನಂತಹ ವಿಮರ್ಶಾತ್ಮಕವಾಗಿ ಪ್ರಸಿದ್ಧವಾದ ಚಿತ್ರಗಳನ್ನು ನಿರ್ದೇಶಿಸಿದ್ದ ಸುಹೈಲ್ ತಾತಾರಿ ರಾಜಸ್ಥಾನದ ಒಂದು ಸಣ್ಣ ಹಳ್ಳಿಯಲ್ಲಿ ಸರಿಸುಮಾರು ಸಾಧಾರಣ ಜೀವನ ನಡೆಸಿತ್ತಿರುವ ಲಲಿತಾಳ ಕಥೆಯನ್ನು ಹೇಳುತ್ತಾರೆ. ಚಿತ್ರದಲ್ಲಿ, ಅನಿರೀಕ್ಷಿತ ಅಥಿತಿಯ ಆಗಮನವು ಕುಟುಂಬದ ಪ್ರವಾಸ ಯೋಜನೆಯನ್ನು ಪಲ್ಲಟಗೊಳಿಸುವುದಲ್ಲದೆ, ಹಲವಾರು ನಿಗೂಢ(ಭಯಬೀತಗೊಳಿಸುವ) ಘಟನೆಗಳು ಏರ್ಪಟ್ಟು ಪ್ರೇಕ್ಷಕರು ಪ್ರತಿ ಹೆಜ್ಜೆಯಲ್ಲೂ ಉತ್ತರಗಳನ್ನು ಬೇಡುವಂತೆ ಮಾಡುತ್ತದೆ.

ಈ ಚಿತ್ರದ ಮುಖ್ಯಾಂಶವೆಂದರೆ, ಏಕಾಂಗಿಯಾಗಿ ಎಲ್ಲಾ ವೇಳೆಗಳಲ್ಲೂ ಪ್ರೇಕ್ಷಕರನ್ನು ತುದಿಗಾಲಮೇಲೆ ನಿಲ್ಲಿಸುವ ಕಥಾನಾಯಕಿ ಲಲಿತಾಳ ಪಾತ್ರಚಿತ್ರಣ. ಯಾವುದೇ ರೀತಿಯ “ಹಾರಿಬಿದ್ದು ದಿಗಿಲುಗೊಳ್ಳುವ’ ಅಗತ್ಯವಿಲ್ಲದೆ, ಚಲನಚಿತ್ರವು ನಿಗೂಢತೆ ಮತ್ತು ಭಯದ ಭಾವವನ್ನು ಯಶಸ್ವಿಯಾಗಿ ಹೊರತರುತ್ತದೆ. ಇದರ ಕೀರ್ತಿ ಈ ಕಿರುಚಿತ್ರದ ಲೇಖಕ, ನಟ-ಲೇಖಕ, ಸುಖಮನಿ ಸಾದನಾ ಅವರಿಗೆ ಸಲ್ಲುತ್ತದೆ. ಸುಖಮನಿ ಅವರು ಬಾಲಿವುಡ್ ಚಲನಚಿತ್ರಗಳು, ಓಟಿಟಿ ವೇದಿಕೆಗಳಿಗೆ ಕಥಾಚಿತ್ರಗಳನ್ನು ಬರೆದಿರುವುದರ ಜೊತೆಗೆ, ಈ ಮೊದಲು ಹಲವಾರು ಸುಪ್ರಸಿದ್ಧ ವೆಬ್ ಸೀರೀಸ್‍ಗಳಲ್ಲೂ ನಟಿಸಿದ್ದಾರೆ. ರೈಲ್ವೆ ಸ್ಟೇಶನ್ ಮಾಸ್ಟರ್ ಆಗಿರುವ ಪತಿ ಸತ್ಯನಾರಾಯಣ ಅವರೊಂದಿಗೆ ಲಲಿತಾಳ ಸಹಜ ಸಂಬಂಧದಿಂದ ಹಿಡಿದು, 19-ವರ್ಷದ ಮನೆಯ ಅತಿಥಿ ಚಿರಾಗ್‍ನೊಂದಿಗಿನ ಆಕೆಯ ಆತ್ಮವಿಶ್ವಾಸದ ವಿಧದವರೆಗೆ ಕಿರುಚಿತ್ರ ಮನೋರಂಜನ್, ಒಂದು ರೀತಿಯ ನಿಗೂಢತೆಯನ್ನು ಕಾಪಾಡಿಕೊಳ್ಳುತ್ತಲೇ ಲಲಿತಾಳ ವೈವಿಧ್ಯಮಯ ಸಂಬಂಧಗಳ ಮೂಲಕ ಯಶಸ್ವಿಯಾಗಿ ಹಾದುಹೋಗುತ್ತದೆ.

ಈ ಚಿತ್ರದ ಬಗ್ಗೆ ಮಾತನಾಡುತ್ತಾ, ನಟಿ ಗುಲ್ ಪನಾಗ್, “ರಾಯಲ್ ಸ್ಟ್ಯಾಗ್ ಬ್ಯಾರೆಲ್ ಸೆಲೆಕ್ಟ್ ಲಾರ್ಜ್ ಶಾರ್ಟ್ ಫಿಲಮ್ಸ್‍ನಂತಹ ವೇದಿಕೆಯು, ಇಂತಹ ತತ್ಕಾಲೀನ ಕಥೆಗಳು ಬೆಳಕಿಗೆ ಬರುವಂತೆ ಮಾಡುತ್ತಿರುವುದನ್ನು ನನಗೆ ಸಂತೋಷವಾಗುತ್ತಿದೆ. ಈ ಚಿತ್ರವು ಕೊನೆಯ ಫ್ರೇಮ್‍ವರೆಗೂ ಪ್ರೇಕ್ಷಕರ ಆಸಕ್ತಿಯನ್ನು ಕೌತುಕತೆಯನ್ನು ಹಿಡಿದಿಡುವಂತಹ ನಿಗೂಢತೆ ಹೊಂದಿದೆ. ಭಯಹುಟ್ಟಿಸುವ ಚಿತ್ರಗಳಲ್ಲಿ ಖಂಡಿತವಾಗಿಯೂ ಇದೊಂದು ತಾಜಾ ಸೇರ್ಪಡೆಯಾಗಿದ್ದು, ಪ್ರೇಕ್ಷಕರು ಈ ಚಿತ್ರದ ಪ್ರತಿಯೊಂದು ಕ್ಷಣವನ್ನೂ ಆನಂದಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ರಾಯಲ್ ಸ್ಟ್ಯಾಗ್ ಬ್ಯಾರೆಲ್ ಸೆಲೆಕ್ಟ್ ಲಾರ್ಜ್ ಶಾರ್ಟ್ ಫಿಲಮ್ಸ್ ಅವರೊಂದಿಗೆ ಇದು ನನ್ನ ಎರಡನೆಯ ಚಿತ್ರವಾಗಿದ್ದು ನನ್ನ ಹಿಂದಿನ ಚಿತ್ರದ ಯಶಸ್ಸು ಮತ್ತು ಅದಕ್ಕೆ ದೊರೆತ ಪ್ರತಿಕ್ರಿಯೆಯಿಂದಾಗಿ ನನ್ನ ಕಡೆಯಿಂದ ‘ಮನೋರಂಜನ್’ಗಾಗಿ ಮತ್ತೊಮ್ಮೆ ವೇದಿಕೆಯೊಡನೆ ಸಹಯೋಗ ಏರ್ಪಡಿಸಿಕೊಳ್ಳುವುದು ಪ್ರಜ್ಞಾಪೂರ್ವಕ ಆಯ್ಕೆಯಾಗಿತ್ತು.”ಎಂದರು,

ಕಿರುಚಿತ್ರದ ಬಗ್ಗೆ ಮಾತನಾಡುತ್ತಾ, ನಿರ್ದೇಶಕ ಸುಹೈಲ್ ತಾತಾರಿ, “ನನ್ನ ಪ್ರೇಕ್ಷಕರಿಗೆ ಮನೋರಂಜನ್ ಅನ್ನು ನೀಡುತ್ತಿರುವುದಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಿದೆ. ಮತ್ತೆ, ಅದನ್ನು ರಾಯಲ್ ಸ್ಟ್ಯಾಗ್ ಬ್ಯಾರೆಲ್ ಸೆಲೆಕ್ಟ್ ಲಾರ್ಜ್ ಶಾರ್ಟ್ ಫಿಲಮ್ಸ್ ನೊಡನೆ ಬಿಡುಗಡೆ ಮಾಡುತ್ತಿರುವುದು ಇನ್ನೂ ಹೆಚ್ಚಿನ ಗೌರವದ ವಿಷಯವಾಗಿದೆ. ಇದು, ಲಲಿತ ಎಂಬ ಪಾತ್ರದ ಸುತ್ತ ಹೆಣೆದ ಅತಿಸೂಕ್ಷ್ಮವಾದ ಬಲೆಯಂತಹ ಪ್ಲಾಟ್ ಆಗಿದ್ದು, ಚಿತ್ರದಲ್ಲಿ ನಿಗೂಢತೆಯು ನಿಧಾನವಾಗಿ ಮತ್ತು ಹಂತಹಂತವಾಗಿ ಅನಾವರಣಗೊಳ್ಳುತ್ತಾ ಹೋಗಿ ಪ್ರೇಕ್ಷಕರನ್ನು ಕೊನೆಯವರೆಗೂ ತಬ್ಬಿಬ್ಬುಗೊಳಿಸುತ್ತದೆ. ಇಂತಹ ಚಿತ್ರಕಥೆಗಳ ಆಚರಣೆಗೆ ರಾಯಲ್ ಸ್ಟ್ಯಾಗ್ ಬ್ಯಾರೆಲ್ ಸೆಲೆಕ್ಟ್ ಲಾರ್ಜ್ ಶಾರ್ಟ್ ಫಿಲಮ್ಸ್ ನಿಖರವಾದ ವೇದಿಕೆಯಾಗಿದ್ದು ಭಾರತದಲ್ಲಿ ಕಿರುಚಿತ್ರಗಳ ವಿಕಸನಕ್ಕೆ ವೇಗವರ್ಧಕವಾಗಿದೆ ಎಂದು ನಾನು ನಂಬಿದ್ದೇನೆ.”ಎಂದರು.

“ಗುಲ್ ಅವರು ಮನೋರಂಜನ್‍ನ ಮೂಲ ಪರಿಕಲ್ಪನೆಯೊಂದಿಗೆ ಬಂದರು, ನಂತರ ಅದು ಅಲ್ಲಿಂದ ಬೆಳೆಯುತ್ತಾ ಹೋಯಿತು. ಈ ಪರಿಕಲ್ಪನೆಯನ್ನು ಕೇಳುತ್ತಲೇ ನಾನು ಕೂಡಲೇ ನನ್ನ ಸಮ್ಮತಿ ಸೂಚಿಸಿಬಿಟ್ಟೆ, ಏಕೆಂದರೆ ಈ ವರ್ಗದ ಚಿತ್ರಗಳು ನನ್ನ ನೆಚ್ಚಿನ ಚಿತ್ರಗಳಾಗಿವೆ. ಬಹುಸ್ತರದಲ್ಲಿರುವ ಇದು ಒಂದು ರೀತಿಯ ದಿಗಿಲುಗೊಳಿಸುವ ಭಾವ ಏರ್ಪಡಿಸುತ್ತದೆ. ಇಂತಹ ವಿಶಿಷ್ಟವಾದ ಮತ್ತು ತತ್ಕಾಲೀನ ಕಥಾನಕಗಳಿಗೆ ರಾಯಲ್ ಸ್ಟ್ಯಾಗ್ ಬ್ಯಾರೆಲ್ ಸೆಲೆಕ್ಟ್ ಲಾರ್ಜ್ ಶಾರ್ಟ್ ಫಿಲಮ್ಸ್ ಒಂದು ಅದ್ಭುತ ವೇದಿಕೆಯಾಗಿದೆ.”ಎಂದರು ಲೇಖಕ ಸುಖಮನಿ.

ಕಿರುಚಿತ್ರವು ಮೊದಲು ರಾಯಲ್ ಸ್ಟ್ಯಾಗ್ ಬ್ಯಾರೆಲ್ ಸೆಲೆಕ್ಟ್ ಲಾರ್ಜ್ ಶಾರ್ಟ್ ಫಿಲಮ್ಸ್‍ನ ಯೂಟ್ಯೂಬ್ ಚಾನೆಲ್ ದಲ್ಲಿ ವಿಶೇಷವಾಗಿ ಪ್ರೀಮಿಯರ್ ಪ್ರದರ್ಶನ ಕಾಣುತ್ತದೆ. ಭಾರತದ ಕೆಲವು ಅತ್ಯುತ್ತಮ ನಿರ್ದೇಶಕರು ಮಾಡಿರುವ ಅತಿ ಮೂಲವಾದ ಮತ್ತು ಪ್ರೇರಣಾತ್ಮಕವಾದ ಕಿರುಚಿತ್ರಗಳನ್ನು ಈ ವೇದಿಕೆಯಲ್ಲಿ ನೋಡಬಹುದು. WATCH ‘Manoranjan’ HERE: https://www.youtube.com/user/LargeShortFilms

Leave a Reply

Your email address will not be published. Required fields are marked *