ಬೆಂಗಳೂರಿನ ಬಿ ಆರ್ ಎಸ್ ಸ್ಕೂಲ್‍ನ ರಿಷಿತ್ ವರ್ಮಾ ದಂಡು ಎಸ್‍ಐಪಿ ಅಬಾಕಸ್ ಅರಿಥ್‍ಮೆಟಿಕ್ ಜೀನಿಯಸ್ ಸ್ಪರ್ಧೆಯ ಚಾಂಪಿಯನ್

ಬೆಂಗಳೂರು (hairamanagara.in) : ಬಿಆರ್‍ಎಸ್ ಗ್ಲೋಬಲ್ ಸ್ಕೂಲ್‍ನ ರಿಷಿತ್ ವರ್ಮಾ ದಂಡು ಭಾರತದ ಅತ್ಯಂತ ದೊಡ್ಡ ಆನ್‍ಲೈನ್ ರಾಷ್ಟ್ರಮಟ್ಟದ ಅಂಕಗಣಿತದ ಸ್ಪರ್ಧೆ-ಎಸ್‍ಐಪಿ ಅರಿಥ್‍ಮೆಟಿಕ್ ಜೀನಿಯಸ್ ಕಾಂಟೆಸ್ಟ್(ಎಜಿಸಿ)ಯನ್ನು ಇತ್ತೀಚೆಗೆ ಎಸ್‍ಐಬಿ ಅಬಾಕಸ್ ಆಯೋಜಿಸಿದ್ದು ಅದಕ್ಕೆ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು.

20 ರಾಜ್ಯಗಳು ಮತ್ತು 375+ ನಗರಗಳು ಹಾಗೂ ಪಟ್ಟಣಗಳನ್ನು ಒಳಗೊಂಡು ಭಾರತದಾದ್ಯಂತ ದಾಖಲೆಯ 1025 ಶಾಲೆಗಳ 95,000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯನ್ನು ಮೂರು ಸುತ್ತುಗಳಲ್ಲಿ ನಡೆಸಲಾಯಿತು. 1ನೇ ಸುತ್ತಿನಲ್ಲಿ ನಗರ ಮಟ್ಟದಲ್ಲಿ 95,000 ವಿದ್ಯಾರ್ಥಿಗಳು ಭಾಗವಹಿಸಿದ್ದರು; 2ನೇ ಸುತ್ತಿನ ರಾಜ್ಯಮಟ್ಟದಲ್ಲಿ 20,000 ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು 3ನೇ ಸುತ್ತಿನಲ್ಲಿ 201 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರು.

ಬಹುಮಾನ ವಿತರಣೆಯ ಕಾರ್ಯಕ್ರಮ ಜನವರಿ 26, 2022ರಂದು ನಡೆಸಲಾಯಿತು. ಎಸ್‍ಐಪಿ ಅರ್ಥಮೆಟಿಕ್ ಜೀನಿಯಸ್ ಕಾಂಟೆಸ್ಟ್ 2021ರಲ್ಲಿ ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಬಹುಮಾನಗಳನ್ನು ಗೆದ್ದರು. 25,000ಕ್ಕೂ ಹೆಚ್ಚು ಬಹುಮಾನಗಳನ್ನು ಗೆದ್ದಿದ್ದು 15 ಲಕ್ಷಗಳಿಗೂ ಮೀರಿದ ನಗದು ಬಹುಮಾನಗಳನ್ನು ಗೆದ್ದಿದ್ದಾರೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗದು ಬಹುಮಾನಗಳನ್ನು ಗೆದ್ದಿದ್ದು 750 ವಿದ್ಯಾರ್ಥಿಗಳು ಟ್ರೋಫಿಗಳು ಮತ್ತು 25,000 ವಿದ್ಯಾರ್ಥಿಗಳು ಪದಕಗಳು ಮತ್ತು ಪ್ರಮಾಣ ಪತ್ರಗಳನ್ನು ಗೆದ್ದಿದ್ದಾರೆ. ಈ ಬೃಹತ್ ಕಾರ್ಯಕ್ರಮವು ಭಾರತದಾದ್ಯಂತ ನಡೆದಿದ್ದು 2000ಕ್ಕೂ ಹೆಚ್ಚು ಎಸ್‍ಐಪಿ ಅಬಾಕಸ್ ಶಿಕ್ಷಕರು ಮತ್ತು ಎಸ್‍ಐಪಿ ಅಬಾಕಸ್ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು. ನಗರದಲ್ಲಿ 3131 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಒಂದು ನಗರದಿಂದ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಈ ಬಹುಮಾನ ಪ್ರಕಟಣೆಯ ಆನ್‍ಲೈನ್ ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಅದರಲ್ಲಿ ರಾಷ್ಟ್ರಮಟ್ಟದ ವಿಜೇತರು, ಪೋಷಕರು ಮತ್ತು ಎಸ್‍ಐಪಿ ತಂಡದ ಸದಸ್ಯರು ಒಳಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಟೆಸ್ಸಿ ಥಾಮಸ್, “ನಮಗೆಲ್ಲರಿಗೂ ನೈಸರ್ಗಿಕ ಬುದ್ಧಿಮತ್ತೆ ಇದೆ. ಇಂಟೆಲಿಜೆಂಟ್ ಕೋಷೆಂಟ್ ತರಬೇತಿ ಮತ್ತು ಪರೀಕ್ಷೆಯಿಂದ ಹೆಚ್ಚಾಗುತ್ತದೆ” ಎಂದು ಹೇಳುತ್ತಾರೆ. ಡಾ.ಟೆಸ್ಸಿ ಥಾಮಸ್ ಭಾರತದ ಖ್ಯಾತ ವಿಜ್ಞಾನಿಯಾಗಿದ್ದು ಭಾರತದ ಮಿಸೈಲ್ ಮಹಿಳೆ ಎಂದು ಕರೆಯುತ್ತಾರೆ. ಅವರು ರಕ್ಷಣಾ ಇಲಾಖೆಯ ಡಿಆರ್‍ಡಿಒದ ವಿಜ್ಞಾನಿಯಾಗಿದ್ದು ಆನ್‍ಲೈನ್ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ.ಟೆಸ್ಸಿ ಥಾಮಸ್ ಎಲ್ಲ ವಿದ್ಯಾರ್ಥಿಗಳು ಮತ್ತು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

ಎಸ್‍ಐಪಿಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ವಿಕ್ಟರ್, “ಎಸ್‍ಐಪಿ ಅರ್ಥಮೆಟಿಕ್ ಜೀನಿಯಸ್ ಕಂಟೆಸ್ಟ್ ಪ್ರತಿವರ್ಷವು ಶಾಲೆಗಳು ಮತ್ತು ಮಕ್ಕಳು ಉಚಿತವಾಗಿ ಭಾಗವಹಿಸುವಂತೆ ಮಾಡುತ್ತದೆ ಏಕೆಂದರೆ ಇದು ಪೋಷಕರು ಮತ್ತು ಮಕ್ಕಳಿಗೆ ಅಂಕಗಣಿತದಲ್ಲಿ ಆಸಕ್ತಿ ಹುಟ್ಟುವಂತೆ ಮಾಡುತ್ತದೆ. ಮತ್ತು ಅಬಾಕಸ್ ಕಾರ್ಯಕ್ರಮದ ಮೂಲಕ ಮಕ್ಕಳು ಅವರ ಅಂಕಗಣಿತ ಸಾಮಥ್ರ್ಯ ಸುಧಾರಿಸಿಕೊಳ್ಳಬಹುದು” ಎಂದರು.

Leave a Reply

Your email address will not be published. Required fields are marked *