ಸೇನಾಪತಿ ವೈಟ್ಲೆ ಕಾರ್ಖಾನೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ರಾಮನಗರ (hairamanagara.in) : ಅಚ್ಚಲು ಸೇನಾಪತಿ ವೈಟ್ಲೆ ವಿರುದ್ದ ಅಚ್ಚಲು, ಅಚ್ಚಲು ಫ್ಯಾಕ್ಟರಿ ಕಾಲೋನಿ ನಿವಾಸಿಗಳು ಸೇನಾಪತಿ ವೈಟ್ಲೆ ಕಾರ್ಖಾನೆ ಮಧ್ಯೆ ಇರುವ ಜನರ ಓಡಾಟದ ರಸ್ತೆ ಮುಚ್ಚಲು ಕಾರ್ಖಾನೆಯವರು ಬಂದ ಸಂಧರ್ಭದಲ್ಲಿ ರಸ್ತೆ ಮುಚ್ಚುವುದನ್ನು ತಡೆದು ಸ್ಥಳದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸುಮಾರು 60 ವರ್ಷಗಳಿಂದಲೂ ಅಚ್ಚಲು ಸೇನಾಪತಿ ವೈಟ್ಲೆಕಾರ್ಖಾನೆ ಮಧ್ಯೆ ಜನರು ತಿರುಗಾಡಲು ಅರ್ಕಾವತಿ ನದಿಗೆ ಜನ ಜಾನುವಾರುಗಳು ನೀರು ಕುಡಿಯಲು, ರಾಮನಗರ ಪ್ರದೇಶಕ್ಕೆ ಕೂಲಿ ಕೆಲಸಕ್ಕೆ ಹೋಗುವವರು ರಸ್ತೆ ಬಳಸುತ್ತಾ ಬಂದಿದ್ದಾರೆ. ರಸ್ತೆ ಜನರ ಓಡಾಟಕ್ಕೆ ಅರ್ಕಾವತಿ ನದಿ ದಾಟಿ ಹೋಗಲು ಸಮರ್ಪಕವಾಗಿದೆ. ಅಲ್ಲದೆ ನದಿ ದಂಡೆಯ ಆಚೆಯ ದಡದಲ್ಲಿ ಗ್ರಾಮದ ರೈತರ ಜಮೀನುಗಳಿವೆ ವ್ಯವಸಾಯಕ್ಕೆ ಜನರ ಓಡಾಟಕ್ಕೆ ರಸ್ತೆ ಅನುಕೂಲವಾಗಿದೆ.
ಗ್ರಾಮಸ್ಥರ ಉಪಯೋಗಕ್ಕೆ ಇರುವ ಇಂತಹ ರಸ್ತೆಯನ್ನುಮುಚ್ಚಲು ಬಂದಿದ್ದಾರೆ.ನೀರಿನ ತೊಂದರೆಗಾಗಿ ಗ್ರಾಪಂಗೆ ನೀಡಿದ ಸಹಿಯ ಪ್ರತಿಯನ್ನುಇಟ್ಟುಕೊಂಡು ಯಾವುದೇ ಮಾಹಿತಿ ಇಲ್ಲದ ಬಿಳಿ ಹಾಳೆಯಲ್ಲಿ ಗ್ರಾಮಸ್ಥರ ಸಹಿ ಪಡೆದು ಕೆಲವರ ಹೆಬ್ಬೆಟ್ಟಿನ ಸಹಿ ಬದಲಾಗಿ ಲಿಖಿತ ಸಹಿ ಹಾಕಿಸಿ ಗ್ರಾಮಸ್ಥರು ರಸ್ತೆ ಮುಚ್ಚಲು ಸಹಿ ಮಾಡಿದ್ದಾರೆ ಎಂದು ಮರೆಮಾಚಿ ಏಕಾಏಕಿ ರಸ್ತೆ ಮುಚ್ಚಲಾಗುತ್ತಿದೆ. ರಸ್ತೆ ಆಂಜನೇಯ ದೇವಾಲಯದ ಕೊಡುಗೆ ಜಮೀನಿನಲ್ಲಿ ದೇವಾಲಯದ ಜಾಗವನ್ನು ಕಾರ್ಖಾನೆಯವರೇ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೂ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಿಂತಿಲ್ಲ.
ರಸ್ತೆ ಮುಚ್ಚುವಂತೆ ನಾವುಗಳು ಸಹಿ ಕೂಡಯಾರು ಮಾಡಿಲ್ಲ ನಮ್ಮ ಬಳಿ ಕಾರ್ಖಾನೆಯವರು ಇಂದಿಗೂ ಮಾತನಾಡಿಲ್ಲ ಜನರ ಉಪಯೋಗಕ್ಕೆ ಇರುವ ರಸ್ತೆಯನ್ನುಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿ ರಸ್ತೆ ಮುಚ್ಚಲು ಕಾರ್ಖಾನೆ ಆಡಳಿತ ಮಂಡಳಿ ಮುಂದಾಗಿದೆ. ಇಲ್ಲಿರುವ ನಾವುಗಳು ಕೂಲಿ ಕೆಲಸ ಮಾಡಿಜೀವನ ನಡೆಸಬೇಕು. ಅತೀ ಹಿಂದುಳಿದ ಜನಾಂಗಕ್ಕೆ ಸೇರಿದ ಇರುಳಿಗ ಕುಟುಂಬಗಳೇ ಇದ್ದೇವೆ ನಮಗೆ ಓದು ಬರಹ ಇಲ್ಲದ ಜನ ನೀರಿಗಾಗಿ ಸಹಿ ಎಂದು ನಮಗೆ ಈ ರೀತಿ ರಸ್ತೆ ಮುಚ್ಚಲು ಮುಂದಾಗಿ ಮೋಸ ಎಸಗುತ್ತಿದ್ದಾರೆ.
ರಾಮನಗರಕ್ಕೆ ಹತ್ತಿರದ ಕಾಲು ದಾರಿಯಾಗಿದ್ದುಕೂಲಿ ಕೆಲಸಕ್ಕೆ ಹೋಗಿ ಬರಲು ಜಮೀನಿಗೆ ಹೋಗಿ ವ್ಯವಸಾಯ ಚಟುವಟಿಕೆ ನಡೆಸಲು ರಸ್ತೆ ಸೂಕ್ತವಾಗಿದೆ ಯಾವುದೇ ಕಾರಣಕ್ಕೂ ರಸ್ತೆ ಮುಚ್ಚಬಾರದು ಕಾರ್ಖಾನೆ ಗ್ರಾಮಸ್ಥರಿಗೆ ತೊಂದರೆ ನೀಡುವದೃಷ್ಟಿಯಿಂದ ಪದೇ ಪದೇತೊಂದರೆ ನೀಡಲು ಮುಂದಾಗಿದೆ. ನಾವು ರಸ್ತೆ ಮುಚ್ಚಲು ಯಾವುದೇ ಸಹಿಯನ್ನುಕಾರ್ಖಾನೆಯವರಿಗೆ ನೀಡಿಲ್ಲ.ಕೂಡಲೇ ಕಾರ್ಖಾನೆ ಆಡಳಿತ ಮಂಡಳಿ ಯಥಾಸ್ಥಿತಿ ರಸ್ತೆಯಲ್ಲಿ ಜನರ ಓಡಾಟಕ್ಕೆ ತೊಂದರೆ ನೀಡದಂತೆ ಕ್ರಮವಹಿಸಬೇಕು. ಇಲ್ಲದಿದ್ದರೆ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮದ ಮಹದೇವಮ್ಮ, ಲಕ್ಷ್ಮಮ್ಮ, ಚಿಕ್ಕೀರಯ್ಯ, ಪಾರ್ವತಮ್ಮ, ರಾಜು,ಜಯಲಕ್ಷ್ಮೀ, ಶಿವಣ್ಣ, ವಸಂತ, ಪುಟ್ಟಮ್ಮ, ಶಿವಮ್ಮ, ಕಾಳಮ್ಮ ಮುಂತಾದವರು ಎಚ್ಚರಿಸಿದ್ದಾರೆ.
ಅರ್ಕಾವತಿ ನದಿಗೆ ಜಾನುವಾರುಗಳು, ಜನರು ಹೋಗಿ ಬರಲುರೈತರು ಜಮೀನುಗಳಿಗೆ ಹೋಗಲು ಕೂಲಿ ಕೆಲಸ ನಿರ್ವಹಿಸುವವರು ರಾಮನಗರಕ್ಕೆ ಹೋಗಿ ಬರಲು ಕಳೆದ ಅರವತ್ತು ವರ್ಷಗಳ ಹಿಂದಿನಿಂದಲೂರಸ್ತೆ ಬಳಸುತ್ತಿದ್ದಾರೆ ನೀರಿನತೊಂದರೆಗಾಗಿಕೊಟ್ಟ ಅರ್ಜಿಯ ಸಹಿಯನ್ನುರಸ್ತೆ ಮುಚ್ಚುವಂತೆ ಅರ್ಜಿ ನೀಡಿದ್ದಾರೆ ಎಂದು ದುರುದ್ದೇಶದಿಂದ ರಸ್ತೆಮುಚ್ಚಲು ಕಾರ್ಖಾನೆಯವರು ಯತ್ನ ನಡೆಸಿದ್ದಾರೆ. ಯಾವುದೇಕಾರಣಕ್ಕೂರಸ್ತೆ ಮುಚ್ಚಕೂಡದು. ಹಾಗೇನಾದರೂ ದೌರ್ಜನ್ಯದಿಂದ ಕಾರ್ಖಾನೆಯವರು ದುಂಡಾವರ್ತನೆ ಮಾಡಿರಸ್ತೆ ಮುಚ್ಚಲು ಮುಂದಾದರೆಕಾರ್ಖಾನೆ ಎದುರೇ ಪ್ರತಿಭಟನೆ ನಡೆಸುತ್ತೇವೆ ಎಂದು ಅಚ್ಚಲು ಫ್ಯಾಕ್ಟರಿ ಕಾಲೋನಿಯ ಲಕ್ಷ್ಮಮ್ಮ ತಿಳಿಸಿದರು.
ಕಾರ್ಖಾನೆಯ ಭದ್ರತೆದೃಷ್ಟಿಯಿಂದರಸ್ತೆಗೆ ಪರ್ಯಾಯವಾಗಿಕಾರ್ಖಾನೆ ಪಕ್ಕದಲ್ಲಿರಸ್ತೆ ಬಿಟ್ಟುಗ್ರಾಮಸ್ಥರಅನುಮತಿ ಪಡೆದುರಸ್ತೆ ಮುಚ್ಚಲಾಗುತ್ತಿದೆ.ರಸ್ತೆ ಮುಚ್ಚುವಂತೆಗ್ರಾಮಸ್ಥರೇಅರ್ಜಿ ನೀಡಿದ್ದಾರೆಇದರಲ್ಲಿಕಾರ್ಖಾನೆ ಪಾತ್ರಇಲ್ಲ ಎಂದು ಸೇನಾಪತಿ ವೈಟ್ಲೆ ಕಾರ್ಖಾನೆಯ ವಿಶೇಷಾಧಿಕಾರಿ ಜಿ.ಆರ್. ಮಂಜುನಾಥ್ ತಿಳಿಸಿದರು.
ಗ್ರಾಮದಜನರು ಕಾರ್ಖಾನೆಗೆ ರಸ್ತೆ ಮುಚ್ಚಿ ಎಂಬ ಬರಹದ ಲಿಖಿತ ಪತ್ರ ನೀಡಿಲ್ಲ. ನಾವೆಲ್ಲರೂ ಇರುಳಿಗ ಕುಟುಂಬದ ಅನಕ್ಷರಸ್ಥರಾಗಿದ್ದು ಕೆಲವರು ಈಗಲೂ ಹೆಬ್ಬೆಟ್ಟು ಸಹಿ ಹಾಕುತ್ತಾರೆ.ಆದರೆ ಅರ್ಜಿಯಲ್ಲಿ ಯಾವುದೇ ಹೆಬ್ಬೆಟ್ಟಿನ ಸಹಿ ಇಲ್ಲ ಬದಲಾಗಿ ಹೆಸರಿವೆ ಇದು ಮೋಸವಾಗಿದ್ದು ತಿಳುವಳಿಕೆ ಇಲ್ಲದ ಮುಗ್ದ ಜನರ ಮೇಲೆ ದಬ್ಬಾಳಿಕೆ ನಡೆಸಲು ಹೊರಟಿದ್ದಾರೆಕೂಡಲೇ ಜಿಲ್ಲಾಧಿಕಾರಿಗಳು ಅರ್ಜಿಯ ಕೂಲಂಕುಷ ತನಿಖೆ ನಡೆಸಿ ದಬ್ಬಾಳಿಕೆ ಮಾಡಲು ಹೊರಟಿರುವಕಾರ್ಖಾನೆ ವಿರುದ್ಧ ಜರೂರು ಕ್ರಮ ಜರುಗಿಸಲು ಮುಂದಾಗಬೇಕು ಯಥಾಸ್ಥಿತಿ ಸಾರ್ವಜನಿಕರಿಗೆ ರಸ್ತೆ ಮೀಸಲಿರಿಸಿ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆತಪ್ಪಿಸಬೇಕು ಎಂದು ಅಚ್ಚಲು ಫ್ಯಾಕ್ಟರಿ ಕಾಲೋನಿ ನಿವಾಸಿ ಕೃಷ್ಣವೇಣಿ ತಿಳಿಸಿದರು.