ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪರೇಟರ್ ಗಳು ಜಿಲ್ಲಾ ಸಮಾಲೋಚಕರುಗಳನ್ನು ಮುಂದುವರಿಸಲು ಮನವಿ
ರಾಮನಗರ (hairamanagara.in) : ಸುಮಾರು ಹತ್ತು ವರ್ಷಗಳಿಂದ ರಾಜ್ಯಾದ್ಯಂತ ನಾಡಕಛೇರಿಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ / ಜಿಲ್ಲಾ ಸಮಾಲೋಚಕರುಗಳಿಗೆ, ಯಾವುದೇ ಸೇವಾ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುತ್ತೇವೆ.
2006 ರ ನೆಮ್ಮದಿ ಯೋಜನೆಯಿಂದ ಈಗಿನ ಅಟಲ್ ಜೀ ಯೋಜನೆಯವರೆಗೆ ಸತತವಾಗಿ 14 ವರ್ಷಗಳ ಕಾಲ ಕಂದಾಯ ಇಲಾಖೆಯ ಅಟಲ್ ಜೀ ಕೇಂದ್ರಗಳಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ ನಮ್ಮಗಳ ಪರಿಶ್ರಮದಿಂದಾಗಿ ನಮ್ಮ ರಾಜ್ಯದ ಪರವಾಗಿ ಮಾನ್ಯ ಆಯುಕ್ತರು ರಾಷ್ಟ್ರಮಟ್ಟದ ಪ್ರಶಸ್ತಿ ಸಹ ಪಡೆದುಕೊಂಡಿರುತ್ತಾರೆ.
ಅಟಲ್ ಜೀ ಜನಸ್ನೇಹಿ ಕೇಂದ್ರ ನಾಢಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾವುಗಳು ಘನ ಸರ್ಕಾರದ ವಿವಿಧ ಯೋಜನೆಗಳು ಹಲವಾರು ಹೊಸ-ಹೊಸ ಸೇವೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದು ಜನಸ್ನೇಹಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವ ನಾವುಗಳು ಜನರ ಜೀವನಾಡಿಯಾಗಿರುವುದರಿಂದ ಸೇವೆ ನೀಡುವುದರಲ್ಲಿ ಸಾರ್ವಜನಿಕರ ಪ್ರಶಂಸೆ – ಮೆಚ್ಚುಗೆ – ಪಾರದರ್ಶಕತೆಗೆ ಹೆಸರು ವಾಸಿಯಾಗಿದೆ.
ಇದರ ಜೊತೆಗೆ ಕೋವಿಡ್ -19 ಮಹಾಮಾರಿಯಂತ ತುರ್ತು ಸಂದರ್ಭದಲ್ಲಿ ಪ್ರಂಟ್ ವಾರಿಯರ್ಸ್ ಅಗಿ ಟೋಲ್ / ತಾಲ್ಲೂಕು ಕಛೇರಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯ ಕಂಟ್ರೋಲ್ ರೂಂ /ಏರ್ ಪೋರ್ಟ್ ಸ್ಥಳೀಯ ಮಟ್ಟದ ಚುನಾವಣೆಯಿಂದ ಲೋಕಸಭಾ ಚುನಾವಣೆಯ ಕರ್ತವ್ಯಗಳನ್ನು ಹಗಲು – ರಾತ್ರಿ ನಿರ್ವಹಿಸುವುದರ ಜೊತೆಗೆ ಬೆಳೆ ಸಮೀಕ್ಷೆಯ ಕೆಲಸ ನಿರ್ವಹಿಸುತ್ತಿರುತ್ತೇವೆ.

ನಮ್ಮ ಈ ಸಾಮರ್ಥ್ಯ ಜನಪರ ಸೇವೆಯನ್ನು ಮೆಚ್ಚಿ ಮಾನ್ಯ ಆಯೋಗ – 2 ರವರು ಇನ್ನೂ ಹೆಚ್ಚಿನದಾಗಿ ಸರ್ಕಾರದ ವಿವಿಧ 800 ಸೇವೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರದಿಂದಲೇ ನೀಡಬೇಕೆಂದು ಘನ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುತ್ತಾರೆ. ಈಗಿರುವಾಗ ಸತತವಾಗಿ 14 ವರ್ಷಗಳಿಂದ ನೆಮ್ಮದಿ –ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅಲ್ಪ ಮೊತ್ತದ ವೇತನವನ್ನು ಪಡೆದು ಸಾರ್ವಜನಿಕರ ಸೇವೆ ಸಲ್ಲಿಸುತ್ತಾ ಬಂದಿರುವ ರಾಜ್ಯಾಧ್ಯಾಂತ ಸರಿಸುಮಾರು 1222 ಆಪರೇಟರ್ ಗಳು 42 ಜಿಲ್ಲಾಸಮಾಲೋಚಕರು ಇದನ್ನೇ ನಂಬಿ ಜೀವನ ನಡೆಸುತ್ತಿದ್ದು ವಯೋಮಿತಿ ಮೀರಿದ್ದು ನಮ್ಮಲ್ಲೆರ ಜೀವನ ದುಸ್ತರವಾಗಿರುತ್ತದೆ.
ಈಗಿರುವಾಗ ತಾವುಗಳು ತಮ್ಮ ಘನ ಸರ್ಕಾರದಿಂದ ಸಾರ್ವಜನಿಕ ಸಲುವಾಗಿ ಪ್ರಾರಂಭಿಸುವ ಯಾವುದೇ ಜನಪರ ಯೋಜನೆಗಳು ಭವಿಷ್ಯದ ದೃಷ್ಠಿಯಿಂದ ನಮ್ಮಗಳಿಗೆ ತೊಂದರೆಯಾಗದಂತೆ ಜನ ಮೆಚ್ಚುಗೆ ಪಾತ್ರವಾಗಿರುವ ಅಟಲ್ ಜೀ ಸೇವೆಗಳು ಯಾವುದೇ ರೀತಿಯಿಂದ ಸ್ಥಗಿತಗೊಳ್ಳದಂತೆ ಅನುಷ್ಠಾನಗೊಳಿಸಿ ನಮ್ಮೆಲ್ಲರ ಸಾವಿರಾರು ಕುಟುಂಬಗಳು ತಮ್ಮ ಘನ ಸರ್ಕಾರದ ಅವಧಿಯಲ್ಲಿ ಬೀದಿಪಾಲಾಗದಂತೆ ಕರ್ತವ್ಯದಲ್ಲಿ ಮುಂದುವರೆಸಿ ಸೇವಾ ಭದ್ರತೆಯನ್ನು ನೀಡಿ ಸಾರ್ವಜನಿಕರಿಗೆ ಇನ್ನೂ ಅತೀ ಹೆಚ್ಚಿನ ಸೇವೆಯನ್ನು ನೀಡಲು ಅನುವು ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಕೋರುತ್ತೇವೆ.
ಅಟಲ್ ಜೀ ಜನಸ್ನೇಹಿ ಕೇಂದ್ರ ನಮ್ಮ ಜೀವನಾಧಾರ ಮೂಲವಾಗಿದ್ದು ಪ್ರಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತೇವೆ. ನಮ್ಮಗಳ ಸೇವೆಯನ್ನು ಮುಂದುವರೆಸಿ ಸೇವಾ ಭದ್ರತೆ ನೀಡುವಂತಾದಲ್ಲಿ ಯೋಜನೆಯನ್ನು ಉತ್ತುಂಗಕ್ಕೇರಿಸುವಲ್ಲಿ ಶ್ರಮಪಟ್ಟು ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಲು ನಾವುಗಳೆಲ್ಲರು ಬದ್ದರಾಗಿರುತ್ತೇವೆಂದು ಈ ಮೂಲಕ ಪ್ರಮಾಣಿಕರಿಸುತ್ತೇವೆ ಎಂದು ಜಿಲ್ಲೆಯ ಆಪರೇಟರ್ ಗಳು, ಜಿಲ್ಲಾ ಸಮಾಲೋಚಕರುಗಳು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.