ಕರೋನ ಸೋಂಕು : ಶುಕ್ರವಾರ 122 ಪ್ರಕರಣ ದಾಖಲು : ಇಬ್ಬರು ಸಾವು
ರಾಮನಗರ (hairamanagara.in) : ಜಿಲ್ಲೆಯಲ್ಲಿ ಶುಕ್ರವಾರ ಚನ್ನಪಟ್ಟಣ 56, ಕನಕಪುರ 33, ಮಾಗಡಿಯಲ್ಲಿ 11, ಹಾಗೂ ರಾಮನಗರದಲ್ಲಿ 22 ಪ್ರಕರಣಗಳು ದಾಖಲಾಗಿದ್ದು ಒಟ್ಟು 122 ಕರೋನ ಸೋಂಕು ಪ್ರಕರಣ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 552 ಇದ್ದು, ಶುಕ್ರವಾರ185 ಜನ ಗುಣಮುಖರಾಗಿರುತ್ತಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 29870 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 28930 ಜನರು ಗುಣಮುಖರಾಗಿರುತ್ತಾರೆ. ಚನ್ನಪಟ್ಟಣದಲ್ಲಿ ಒಬ್ಬರು, ಕನಕಪುರದಲ್ಲಿ ಒಬ್ಬರು ಸೇರಿ ಇಬ್ಬರು ನಿಧನರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.