ಗ್ರಾಮ ಲೆಕ್ಕಾಧಿಕಾರಿಗಳಿಂದ ಅಂಗವಿಕಲರಿಗೆ, ರೈತರಿಗೆ ತೊಂದರೆಯಾಗುತ್ತಿದೆ : ಜೆ.ಸಿ. ನಾಗರಾಜು
ಮಾಗಡಿ (hairamanagara.in) : ಗುಡೇಮಾರನಹಳ್ಳಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ತೆಗೆಯುತ್ತಿಲ್ಲದರಿಂದ ಅಂಗವಿಕಲರಿಗೆ, ರೈತರಿಗೆ ತೊಂದರೆಯಾಗುತ್ತಿದೆ ಎಂದು ಕೆಡಿಪಿ ಸದಸ್ಯ ಜಿ.ಸಿ. ನಾಗರಾಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಗುಡೇಮಾರನಹಳ್ಳಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗರ ರೈತರು, ಕೂಲಿಕಾರ್ಮಿಕರು, ಅಂಗವಿಕಲರು, ಅಲ್ಪಸಂಖ್ಯಾತರುಗಳನ್ನು ಸರಕಾರ ಮುಖ್ಯವಾಹಿನಿಗೆ ತರಲು ಅನೇಕ ಯೋಜನೆ ರೂಪಿಸಿದೆ ಈ ಯೋಜನೆಯಿಂದ ಅನುಕೂಲ ಪಡೆಯಲು ಬೇಕಾದ ಅಗತ್ಯ ದಾಖಲಾತಿ ಪಡೆಯಲು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ತೆಗೆಯುವುದಿಲ್ಲ, ಅಧಿಕಾರಿಗಳು ಇರುವುದಿಲ್ಲ ಇದರಿಂದ ಸರಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬೇಸಾಯದ ಬಗ್ಗೆ ದಾಖಲಾತಿ ಮಾಡಿಸಿಕೊಳ್ಳಲು ಅಧಿಕಾರಿಗಳು ಇರುವೆಡೆ ಹುಡುಕಿಕೊಂಡು ಹೋಗಬೇಕು, ಮೋಬೈಲ್ ಆಫ್ ಮಾಡಿಕೊಂಡಿರುತ್ತಾರೆ, ನಾಲ್ಕು, ಐದು ವೃತ್ತಗಳಿಗೆ ಒಬ್ಬ ಗ್ರಾಮಲೆಕ್ಕಿಗರನ್ನು ನೇಮಕಮಾಡಿರುತ್ತಾರೆ ಆದರೆ ಗುಡೇಮಾರನಹಳ್ಳಿ ವೃತ್ತಕ್ಕೆ ಒರ್ವ ಗ್ರಾಮಲೆಕ್ಕಾಧಿಕಾರಿಗಳಿದ್ದರೂ ಸಮರ್ಪಕವಾಗಿ ರೈತರ ಕೆಲಸ ಮಾಡಿಕೊಡುತ್ತಿಲ್ಲ ಕಚೇರಿಯೂ ತೆರೆಯುವುದಿಲ್ಲ ಎಂದು ಆರೋಪಿಸಿದರು.

ಗ್ರಾಮದ ಸಿದ್ದರಾಜು ಎಂಬ ವ್ಯಕ್ತಿ ಮೃತಪಟ್ಟು ವರ್ಷಕಳೆದಿದೆ ಮರಣ ಸರ್ಟಿಫಿಕೇಟು ಪಡೆಯಲು ಅರ್ಜಿಹಾಕಿ ವರ್ಷಕಳೆದಿದೆ ಇಲ್ಲಿವರೆಗೂ ಮರಣ ಸರ್ಟಿಫಿಕೇಟು ನೀಡಿಲ್ಲ, ಪೋತಿ ಖಾತೆಗಳಿಗೆ ಅರ್ಜಿ ಹಾಕಿ 45 ದಿನಗಳಾದರು ಮಾಡಿಕೊಡದೆ ಉಳ್ಳವರು ಹಣ ನೀಡಿದರೆ ಕಾಮದೇನು ಹೋಟೆಲ್, ಡಾಬಾ ಬಳಿ ಬಂದು ಕೂಡಲೇ ಪೋತಿ ಖಾತೆಗಳನ್ನು ಮಾಡಿಕೊಡುತ್ತಾರೆ. ಈ ಭಾಗದಲ್ಲಿ ನೀಲಗಿರಿ ಮರ ಬೆಳೆದಿಲ್ಲ ನೀಲಗಿರಿ ಎಂದು ಪಹಣಿಯಲ್ಲಿ ನಮೂದಾಗಿದೆ ಇದರಿಂದ ಸರಕಾರದ ಸೌಲತ್ತು ಪಡೆಯಲು ತೊಂದರೆಯಾಗಿದೆ ಎಂದು ಗ್ರಾಮಲೆಕಲ್ಕಾಧಿಕಾರಿ ಶಿವರಂಜನ್ ಮತ್ತು ಸಭೆಗೆ ಭಾಗವಹಿಸದ ಉಪತಹಶೀಲ್ದಾರ್ ನಾರಾಯಣ್ ವಿರುದ್ದ ಸಭೆಯಲ್ಲಿ ಕೆಂಡಮಂಡಲರಾದರು.
ಗ್ರಾ.ಪಂ. ಅಧ್ಯಕ್ಷೆ ಡಿ. ದಿವ್ಯ ಮಾತನಾಡಿ, ನಾಗರೀಕರು ಸರಕಾರಿ ಕಚೇರಿಗಳಿಗೆ ಬಂದಾಗ ಅವರನ್ನು ಅಲೆಸಬೇಡಿ, ಸರಕಾರ ರೂಪಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯಿಸಬಾರದು ಇದರಿಂದ ನಾಗರೀಕರಿಗೆ ಆನಾನುಕೂಲವಾಗುತ್ತದೆ. ಕೇಂದ್ರ, ರಾಜ್ಯ ಸರಕಾರದಗಳ ಮಹಾತ್ವಕಾಂಕ್ಷೆಯ ನರೇಗಾ ಯೋಜನೆ ಗ್ರಾಮೀಣ ಜನತೆಯ ಆಶಾ ಕಿರಣವಾಗಿದೆ ಇದರ ಸದ್ಬಳಕೆ ಮಾಡಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಉಪಾಧ್ಯಕ್ಷ ಜಿ.ಎಂ. ಗೋವಿಂದರಾಜು ಮಾತನಾಡಿ, ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ದೀಪಗಳ ಸಮಸ್ಯೆ ಇದ್ದರೆ ಕಚೇರಿಗೆ ಬಾರದೆ ನೇರವಾಗಿ ನನಗೆ ತಿಳಿಸಿ, ವಾಟರ್ ಮ್ಯಾನ್ಗಳು ತಮ್ಮ ವ್ಯಾಪ್ತಿಯಲ್ಲಿನ ಓವರ್ ಟ್ಯಾಂಕ್ಗಳನ್ನು ಸ್ವಚ್ಚಗೊಳಿಸಲು ಮುಂದಾಗಿ, ಈ ಬಗ್ಗೆ ನಾಗರೀಕರಿಂದ ದೂರುಬಂದಲ್ಲಿ ಶಿಸ್ತುಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಿಯೋಜಿತ ಅಧಿಕಾರಿ ಕೆ.ಎಸ್.ಕೃಷ್ಣಬಾಬು, ಸದಸ್ಯರಾದ ಲಕ್ಷ್ಮಮ್ಮ, ವರಮಹಾಲಕ್ಷ್ಮಿ ದಾಸಪ್ಪ, ಮಹಾಲಕ್ಷ್ಮಿ ರಾಮಕೃಷ್ಣಯ್ಯ, ಗೌರಮ್ಮ, ಶಾಂತಮಲ್ಲಯ್ಯ, ಬಸವರಾಜು, ಪರಶುರಾಮು, ಡಿ.ಬಿ.ಬಸವರಾಜು, ಮಾಜಿ ಅಧ್ಯಕ್ಷೆ ಮಂಜುಳ ಗೋಪಾಲಕೃಷ್ಣ, ಪಿಡಿಒ ಕೆ.ನರಸಿಂಹಯ್ಯ, ಕಾರ್ಯದರ್ಶಿ ಚಂದ್ರಶೇಖರಯ್ಯ ಇದ್ದರು.