ಹುತಾತ್ಮರ ದಿನದ ಸಂಸ್ಮರಣೆಯ ಅಂಗವಾಗಿ ಕನಕಪುರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸರ್ಕಾರಿ ಶಾಲಾ ವಾಸ್ತವ್ಯ ಕಾರ್ಯಕ್ರಮ
ಕನಕಪುರ (hairamanagara.in) : ಕನಕಪುರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹುತಾತ್ಮರ ದಿನದ ಸಂಸ್ಮರಣೆಯ ಅಂಗವಾಗಿ ಹಾರೋಹಳ್ಳಿ ಹೋಬಳಿ ದ್ಯಾವಸಂದ್ರ ಕ್ಲಸ್ಟರ್ ವ್ಯಾಪ್ತಿಯ 1950 ರಲ್ಲಿ ಆರಂಭಗೊಂಡ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕರಿಕಲ್ ದೊಡ್ಡಿ, ಈ ಶಾಲೆಯಲ್ಲಿ ಹಲವು ಕಲಾವಿದ ಶಿಕ್ಷಕರನ್ನು ಸೇರಿಸಿ ಸಂಘದ ವತಿಯಿಂದ ಒಂದು ದಿನದ ಶಾಲಾ ವಾಸ್ತವ್ಯ ಕಾರ್ಯಕ್ರಮ ಮಾಡಲಾಯಿತು.

ಶಾಲೆಯು ಸಮುದಾಯದ ಸಹಕಾರದೊಂದಿಗೆ ಉತ್ತಮವಾಗಿ ಭೌತಿಕವಾಗಿ ಸಜ್ಜುಗೊಂಡಿದ್ದು ಶಿಕ್ಷಕರ ಸಂಘದಿಂದ ಗೋಡೆ ಬರಹ ಹಾಗೂ ಗೋಡೆಗೆ ಕಪ್ಪು ಬಣ್ಣ ಜೊತೆಗೆ ಉಪಸ್ಥಿತ ಶಿಕ್ಷಕಿಯವರಿಂದ ಪಾಠೋಪಕರಣಗಳ ತಯಾರಿ ಮಾಡಲಾಯಿತು.

ಸಂಘದ ಜಿಲ್ಲಾಧ್ಯಕ್ಷರಾದ ರಮೇಶ್, ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್, ಗೌರವ ಅಧ್ಯಕ್ಷ ಕುಮಾರ್, ತಾಲ್ಲೂಕು ಅಧ್ಯಕ್ಷ ನೇ.ರ. ಪ್ರಭಾಕರ, ಪ್ರಧಾನ ಕಾರ್ಯದರ್ಶಿ ನಟರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ. ಸಾಂಸ್ಕೃತಿಕ ಕಾರ್ಯದರ್ಶಿ ರಾಧ, ಕ್ರೀಡಾ ಕಾರ್ಯದರ್ಶಿ ರಾಧ, ಸಂಘದ ಹೋಬಳಿ ಕಾರ್ಯದರ್ಶಿ ರವಿಕುಮಾರ್ ನಾಗರಾಜ್ ಬಸಪ್ಪ ರವಿಕುಮಾರ್ ರವರು ಶ್ರಮ ದಾನ ದಲ್ಲಿ ಭಾಗವಹಿಸಿದರು.

ಜೊತೆಗೆ ಸಿಆರ್ ಪಿ ಚಲುವರಾಜ್, ಇಸಿಒ ಶ್ರೀನಿವಾಸ ಮತ್ತು ಶಾಲೆಯ ಶಿಕ್ಷಕಿ ಉಮಾರವರೂ ಶಿಕ್ಷಕರ ಅಗತ್ಯತೆಗೆ ಸಹಕರಿಸಿದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಜಯಲಕ್ಷ್ಮಿ ರವರು ಆಗಮಿಸಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ಮಾಡಿದರು.

ಜೊತೆಗೆ ಈ ಮೂಲಕ ಹುತಾತ್ಮ ದಿನದ ಸಮರ್ಥ ಸೇವೆ ಅನುಕರಣೀಯ ಎಂದು ಸಂಘವನ್ನು ಅಭಿನಂದಿಸಿದರು. ಸಂಘವು ರಾಜ್ಯದಲ್ಲಿಯೇ ಶಾಲಾ ವಾಸ್ತವ್ಯ ಕಾರ್ಯಕ್ರಮವನ್ನು ವಿಶೇಷವಾಗಿ ಮಾಡುತ್ತಿದ್ದು ಇದು ಸಂಘದ ಎಂಟನೆಯ ಮತ್ತು ಈ ಶೈಕ್ಷಣಿಕ ವರ್ಷದ ಎರಡನೇ ಕಾರ್ಯಕ್ರಮವಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ನೇ.ರ. ಪ್ರಭಾಕರ ತಿಳಿಸಿದರು.


