ಚಕ್ರಬಾವಿ ಸರ್ಕಾರಿ ಶಾಲೆಗೆ ರೋಟರಿ ಬೆಂಗಳೂರು ಸೌತ್ ಪೆರೇಡ್ ಸಂಸ್ಥೆ ವತಿಯಿಂದ 25 ಡೆಸ್ಕ್ಗಳ ವಿತರಣೆ
ಮಾಗಡಿ (hairamanagara.in) : ತಾಲೂಕಿನ ಚಕ್ರಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಬೆಂಗಳೂರು ಸೌತ್ ಪೆರೇಡ್ ವತಿಯಿಂದ 25 ಡೆಸ್ಕ್ ಗಳನ್ನು ರೋಟರಿ ಸಂಸ್ಥೆಯಿಂದ ವಿತರಣೆ ಮಾಡಿದರು.
ರೋಟರಿ ಅಧ್ಯಕ್ಷ ರವಿಪ್ರಸಾದ್ ಮಾತನಾಡಿ, ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಿದೆ. ಸರ್ಕಾರಿ ಶಾಲೆಗೆ ಮೂಲಭೂತ ಸೌಲಭ್ಯಗಳು ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಚಕ್ರಬಾವಿ ಗ್ರಾಮದ ಗ್ರಾ.ಪಂ.ಸದಸ್ಯೆ ಮಂಜುಳಾ ದೀಪಕ್ ಮನವಿ ಮೇರೆಗೆ ಮೊದಲ ಹಂತವಾಗಿ ಶಾಲೆಗೆ 28 ಡೆಸ್ಕ್ಗಳನ್ನು ನೀಡಿದ್ದು ಶಾಲೆಯ ಕಟ್ಟಡಗಳ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ್ದು ಶಾಲಾ ಕಟ್ಟಡಕ್ಕೂ ಅನುದಾನ ಕೊಡುವ ಕೆಲಸ ರೋಟರಿ ಮಾಡಲಿದೆ.ಮಕ್ಕಳು ದೊಡ್ಡವರಾದ ಮೇಲೆ ಏನು ಆಗಬೇಕೆಂಬುದನ್ನು ಈಗಲೇ ಗುರಿಯನ್ನು ಇಟ್ಟುಕೊಂಡು ಮುಂದೆ ನಡೆದಾಗ ಆ ಗುರಿಯನ್ನು ತಲುಪಬಹುದು ನಾವು ಶಾಲೆಗಳಿಗೆ ಸೌಲಭ್ಯ ಕೊಡುತ್ತಿದ್ದೇವೆಂದರೆ ಮಕ್ಕಳು ಉತ್ತಮವಾಗಿ ಓದಬೇಕು, ಆಗ ಮಾತ್ರ ನಾವು ಪಟ್ಟ ಶ್ರಮ ಸಾರ್ಥಕವಾಗುತ್ತದೆಂದು ತಿಳಿಸಿದರು.
ಕಾಲ್ಗಾಯ್ಸ್ ಸಂಸ್ಥೆಯ ಅಧಿಕಾರಿ ಸುದರ್ಶನ್ ಮಾತನಾಡಿ, ಸಿಎಸ್ಆರ್ ವತಿಯಿಂದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹಣ ಬಳಕೆ ಮಾಡುತ್ತಿದ್ದು ಅದರಲ್ಲಿ ಚಕ್ರಬಾವಿ ಶಾಲೆ ಅಭಿವೃದ್ದಿಗೆ ಮುಂದಾಗಿದ್ದೇವೆ, ಶಾಲೆಯ ಸ್ಥಿತಿಗಳ ಬಗ್ಗೆ ಖುದ್ದಾಗಿ ಗಮನಿಸಿದ್ದು ನಮ್ಮ ಸಂಸ್ಥೆಯಿಂದ ಎಷ್ಟು ಅನುಕೂಲತೆ ಮಾಡಿಕೊಡಬೇಕೋ ಅಷ್ಟು ಅನುಕೂಲತೆಗಳನ್ನು ನಾವು ಮಾಡಲು ಸಿದ್ದರಿದ್ದೇವೆ, ರೋಟರಿ ಕ್ಲಬ್ ಜೊತೆ ಸೇರಿ ಶಾಲಾ ಅಭಿವೃದ್ದಿಗೆ ಮುಂದಾಗಿದ್ದೇವೆ. ಇದರ ಜೊತೆಗೆ ಇತರ ಸರ್ಕಾರಿ ಶಾಲೆ ಕಟ್ಟಡಕ್ಕೂ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಶಾಲಾ ಮಕ್ಕಳು ಕೆಎಎಸ್, ಐಪಿಎಸ್ ಅಧಿಕಾರಿಗಳಾಗಿ ದೇಶ ಸೇವೆಯನ್ನು ಮಾಡಬೇಕು, ನಾವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತೇವೆಂಬ ಮನಸ್ಥೈರ್ಯವನ್ನು ಮಕ್ಕಳು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ರೋಟರಿ ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎಷ್ಟೇ ಕಷ್ಟ ಬಂದರು ಶಿಕ್ಷಣದಿಂದ ಹಿಂದೆ ಸರಿಯಬಾರದು, ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಸರ್ಕಾರಿ ಶಾಲೆ ಅಭಿವೃದ್ದಿಗೆ ನೀಡಿದ ಗಣ್ಯರಿಗೆ ಅಂಕಗಳ ಮೂಲಕ ಕೃತಜ್ಞತೆ ಸಲ್ಲಿಸಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸೀಗೇಕುಪ್ಪೆ ಗ್ರಾ.ಪಂ.ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಚೆನ್ನಯ್ಯ, ಸದಸ್ಯೆ ಯಶೋಧ, ಸ್ವಾಮಿ, ಕಾರ್ಯದರ್ಶಿ ಆನಂದ್ ರಾಮಚಂದ್ರ, ಹಿರಿಯ ಮುಖಂಡ ಯೋಗನರಸಿಂಹಯ್ಯ ಉಪಸ್ಥಿತರಿದ್ದರು.