ಮಾಗಡಿ : ಮೈತ್ರಿ ಆಸ್ಪತ್ರೆಯಲ್ಲಿ ವೃದ್ಧೆಯ ಹೊಟ್ಟೆಯಲ್ಲಿದ್ದ 9.4 ಕೆ.ಜಿ ತೂಕದ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದ ಡಾ. ಉಪಾಧ್ಯಾಯ

ಮಾಗಡಿ (hairamanagara.in) : ತಾಲೂಕಿನ ತೂಬಿನಕೆರೆ ಗ್ರಾಮದ 75 ವರ್ಷದ ವೃದ್ದೆ ಪುಟ್ಟಮ್ಮ ನವರ ಹೊಟ್ಟೆಯಲ್ಲಿದ್ದ 9.4 ಕೆಜಿ ತೂಕದ ಗೆಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮೂಲಕ ಮಾಗಡಿ ಪಟ್ಟಣದ ಮೈತ್ರಿ ಆಸ್ಪತ್ರೆಯಲ್ಲಿ ಡಾ. ಉಪಾಧ್ಯಾಯ ಮಾರ್ಗದರ್ಶನದಲ್ಲಿ ಕಾರ್ಯಚರಣೆ ಯಶಸ್ವಿಯಾಗಿದೆ.
ವೃದ್ದೆಗೆ 2 ವರ್ಷಗಳಿಂದಲೂ ಸಮಸ್ಯೆಯಿದ್ದು ಅಂಡಾಶಯದಲ್ಲಿ ಗೆಡ್ಡೆ ಬೆಳೆದಿದ್ದು 6 ತಿಂಗಳಿನಿಂದ ಸಮಸ್ಯೆ ಹೆಚ್ಚಾಗಿದೆ, ಒಂದು ತಿಂಗಳಿನಿಂದ ನೋವು ಹೆಚ್ಚಾದಾಗ ಆಸ್ಪತ್ರೆಗೆ ಬಂದಿದ್ದು ಈ ವೇಳೆ ಯಶಸ್ವಿಯಾಗಿ ಗೆಡ್ಡೆಯನ್ನು ಹೊರ ತೆಗೆದಿದ್ದು ಒಂದೆ ಶಸ್ತ್ರ ಚಿಕಿತ್ಸೆಯಲ್ಲಿ 3 ಸಮಸ್ಯೆಗಳನ್ನು ಬಗೆಹರಿಸಿದ್ದು ಪಿತ್ತ ಕೋಶದಲ್ಲಿ ಗೆಡ್ಡೆ, ಗರ್ಭಕೋಶ ಜಾರಿದ್ದು ಜೊತೆಗೆ ಪಿತ್ತಕೋಶದಲ್ಲಿ ಕಲ್ಲು 3 ಸಮಸ್ಯೆಗಳನ್ನು ವೃದ್ದೆ ಎದುರಿಸುತ್ತಿದ್ದು ಇದನ್ನು ಯಶಸ್ವಿಯಾಗಿ ಒಂದೇ ಶಸ್ತ್ರ ಚಿಕಿತ್ಸೆಯಲ್ಲಿ ಗೆಡ್ಡೆಯನ್ನು ಹೊರ ತೆಗೆದಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ 9 ಕೆಜಿ ತೂಕದ ಗೆಡ್ಡೆ ಹೊರ ತೆಗೆದಿರುವುದು ಇದೇ ಮೊದಲು ಮಾಗಡಿಯಲ್ಲಿ ಯಶಸ್ವಿಯಾಗಿ ಮಾಡಿರುವುದು ಸಂತೋಷ ತರುವಂತಾಗಿದ್ದು ವೃದ್ದೆಗೆ ಬಿಪಿ ಶುಗರ್ 2 ಕೂಡ ಇಲ್ಲ, ಈಗ ಆರೋಗ್ಯವಾಗಿದ್ದು ವೃದ್ದೆಯನ್ನು ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿಸಿದೆ ಎಂದು ಡಾ.ಉಪಾಧ್ಯಾಯ ತಿಳಿಸಿದರು.
ಈ ಗೆಡ್ಡೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ ಈ ಶಸ್ತ್ರ ಚಿಕಿತ್ಸೆಯಲ್ಲಿ ಕಿದ್ವಾಯಿ ಆಸ್ಪತ್ರೆಯ ಡಾ.ಪ್ರಕಾಶ್, ಡಾ.ಉಪಾಧ್ಯಾಯ, ಡಾ.ಶರಣ್, ಡಾ.ಮನೋಜ ಇತರೆ ನರ್ಸ್‍ಗಳು ಸೇರಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.
ವೈದ್ಯರ ಈ ಯಶಸ್ವಿ ಶಸ್ತ್ರ ಚಿಕಿತ್ಸೆಗೆ ವೃದ್ದೆಯ ಸಂಬಂಧಿಕರು ಧನ್ಯವಾದ ತಿಳಿಸಿದ್ದಾರೆ.
ಪ್ರತಿಕ್ರಿಯೆ : ಗ್ರಾಮೀಣ ಭಾಗದ ಜನರು ನಗರ ಪ್ರದೇಶಕ್ಕೆ ತೆರಳಿ ಶಸ್ತ್ರ ಚಿಕಿತ್ಸೆ ಎಂಬುದು ಮರಿಚಿಕೆಯಾಗಿದೆ ಈ ವೇಳೆ ಕಡಿಮೆ ಹಣದಲ್ಲಿ ಡಾ.ಉಪಾಧ್ಯಾಯ ಅವರು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಪುರಸಭಾಸದಸ್ಯೆ ಶಿವರುದ್ರಮ್ಮ ವಿಜಯ್ ಕುಮಾರು.

Leave a Reply

Your email address will not be published. Required fields are marked *