UPSC Recruitment 2022: ಐಎಎಸ್, ಐಪಿಎಸ್, ಐಎಫ್‌ಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯುಪಿಎಸ್‌ಸಿ ಇಂದ ನೇಮಕ ಅಧಿಸೂಚನೆ
ಐಎಎಸ್, ಐಎಫ್‌ಎಸ್ ಹುದ್ದೆಗೆ ಅರ್ಜಿ ಆಹ್ವಾನ
ಫೆಬ್ರುವರಿ 22 ರವರೆಗೆ ಅರ್ಜಿಗೆ ಅವಕಾಶ
ಹಾಯ್ ರಾಮನಗರ ((hairamanagara.in) 06 ಫೆಬ್ರವರಿ 2022 :
ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಅರಣ್ಯ ಸೇವೆ, ಭಾರತೀಯ ನಾಗರಿಕ ಸೇವೆ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರ ಹಾಗೂ ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಹಾಕಿ.
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಭಾರತೀಯ ಅರಣ್ಯ ಸೇವೆ ಮತ್ತು ಸಿವಿಲ್ ಸೇವೆಗಳಿಗೆ ಜೂನ್ 05, 2022 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಈ ಸದರಿ ಪರೀಕ್ಷೆಗೆ ಫೆಬ್ರುವರಿ 22, 2022 ರವರೆಗೆ ಆನ್‌ಲೈನ್ ರಿಜಿಸ್ಟ್ರೇಷನ್ ಪಡೆಯಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 03-02-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-02-2022 (18-00 PM)
ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ : 05-06-2022
ಅಪ್ಲಿಕೇಶನ್ ವಿತ್‌ಡ್ರಾ ಪಡೆಯಲು ಅವಕಾಶ : 01-03-2022 ರಿಂದ 07-03-2022 ರ ಸಂಜೆ 06 ಗಂಟೆವರೆಗೆ.

ವಯೋಮಿತಿ ಅರ್ಹತೆಗಳು
ಅಭ್ಯರ್ಥಿಗಳು 01-08-2022 ಕ್ಕೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ 32 ವರ್ಷ ಮೀರಿರಬಾರದು.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆಗಳು
ಯುಪಿಎಸ್‌ಸಿ ಸಿವಿಲ್ ಸೇವೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಪಾಸ್ ಮಾಡಿರಬೇಕು.
ಯುಪಿಎಸ್‌ಸಿ ಭಾರತೀಯ ಅರಣ್ಯ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಅಭ್ಯರ್ಥಿ ಪದವಿಯಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ/ ಸಸ್ಯಶಾಸ್ತ್ರ / ರಸಾಯನಶಾಸ್ತ್ರ / ಭೂವಿಜ್ಞಾನ / ಗಣಿತ / ಭೌತಶಾಸ್ತ್ರ / ಅಂಕಿಅಂಶ ಮತ್ತು ಪ್ರಾಣಿಶಾಸ್ತ್ರ / ಕೃಷಿ ಪದವಿ / ಅರಣ್ಯಶಾಸ್ತ್ರದಲ್ಲಿ ಯಾವುದಾದರೂ ಒಂದು ವಿಷಯವನ್ನು ಓದಿರಬೇಕು.
ಯುಪಿಎಸ್‌ಸಿ ಐಎಎಸ್ / ಸಿಎಸ್‌ಇ ಪರೀಕ್ಷೆ ಎಷ್ಟು ಬಾರಿ ಬರೆಯಬಹುದು?
ಸಾಮಾನ್ಯ ವರ್ಗದ ಅಭ್ಯರ್ಥಿ 6 ಬಾರಿ ಐಎಎಸ್ / ಸಿಎಸ್‌ಇ ಪರೀಕ್ಷೆಗಳನ್ನು ಬರೆಯಬಹುದು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು. ಇಂತಿಷ್ಟು ಎಂದು ಮಿತಿ ಇಲ್ಲ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 09 ಬಾರಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬಹುದು.
PwD ಅಭ್ಯರ್ಥಿ GL / EWS/OBC ಗೆ ಸೇರಿದಲ್ಲಿ 09 ಬಾರಿ, ಎಸ್‌ಸಿ / ಎಸ್‌ಟಿ ಅಭ್ಯರ್ಥಿ ಆಗಿದ್ದಲ್ಲಿ ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿ ನೇಮಕಾತಿಗೆ ಅರ್ಜಿ ಹಾಕಲು ವೆಬ್‌ಸೈಟ್ upsconline.nic.in ಗೆ ಭೇಟಿ ನೀಡಿ.