ತಾಲ್ಲೂಕು ರಾಜಕಾರಣದಲ್ಲಿ ಸಕ್ರಿಯರಾದ ಸಿ.ಪಿ. ಯೋಗೇಶ್ವರ್ : ವಿವಿಧ ಪಕ್ಷಗಳ 50ಕ್ಕೂ ಹೆಚ್ಚು ಮಂದಿ ಬಿಜೆಪಿ ಸೇರ್ಪಡೆ
ಹಾಯ್ ರಾಮನಗರ (hairamanagara.in) 07 ಫೆಬ್ರವರಿ 2022
ಚನ್ನಪಟ್ಟಣ : ತಾಲೂಕಿನಲ್ಲಿ ಬಿಜೆಪಿಬಲಗೊಳಿಸಲು ಮುಂದಾಗಿರುವ ಸೈನಿಕ ಇದೀಗ ತನ್ನ ಸೈನ್ಯವನ್ನು ಬಲಗೊಳಿಸುತ್ತಿದ್ದಾರೆ. ವಿಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಜೆಪಿ ಸೆಳೆಯುತ್ತಿರುವ ಯೋಗೇಶ್ವರ್, ಭಾನುವಾರ ತಾಲೂಕಿನ ಕೊಲೂರು ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ 50ಕ್ಕೂ ಹೆಚ್ಚು ಮಂದಿ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಸಂಕ್ರಾಂತಿ ಬಳಿಕ ತಾಲ್ಲೂಕು ರಾಜಕಾರಣದಲ್ಲಿ ಸಕ್ರಿಯವಾಗಿರುವ ಯೋಗೇಶ್ವರ್, ವಿಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುವ ಆಪರೇಷನ್ ಆರಂಭಿಸಿದ್ದಾರೆ. ಇತ್ತ ಯೋಗೇಶ್ವರ್ ವಿಪಕ್ಷ ನಾಯಕರ ಭೇಟಿಯನ್ನು ಆರಂಭಿಸುತ್ತಿದ್ದಂತೆ, ತಾಲೂಕಿನ ಹಲವಾರು ಜೆಡಿಎಸ್-ಕಾಂಗ್ರೆಸ್ ಮುಖಂಡರು ಬಿಜೆಪಿಯತ್ತ ಬರುತ್ತಿದ್ದು, ತಾಲೂಕಿನಲ್ಲಿ ಪಕ್ಷಾಂತರ ಪರ್ವ ಬಿರುಸುಗೊಂಡಿದೆ.

ಮಹಿಳೆಯರೂ ಬಿಜೆಪಿಗೆ: ಭಾನುವಾರ ತಾಲೂಕಿನ ಕೊಲೂರು ಗ್ರಾಮದಲ್ಲಿ ಯೋಗೇಶ್ವರ್ ಅವರ ನಾಯಕತ್ವ ಹಾಗೂ ಅವರ ಅಭಿವೃದ್ಧಿ ಪರ ಕಾಳಜಿಯನ್ನು ಮೆಚ್ಚಿ ಗ್ರಾಮದಲ್ಲಿ ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಬಿಜೆಪಿ ಶಾಲುಹೊದ್ದು ಪಕ್ಷಾಂತರ ಗೊಂಡರು. ಗ್ರಾಮದ ಹಲವಾರು ದಲಿತ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದು ವಿಶೇಷವೆನಿಸತ್ತು.
ಗ್ರಾಮದ ಕಾಂಗ್ರೆಸ್, ಜೆಡಿಎಸ್ ಮುಖಂಡರಾದ ರವಿಶಂಕರ್,ಪುಟ್ಟರಾಜು, ಹೇಮಣ್ಣ,ಲೋಕೇಶ್, ಮಾಜಿ ಗ್ರಾಪಂ ಸದಸ್ಯ ಬಾಲರಾಜು, ಕಾಯಿನ ಪುಟ್ಟಸ್ವಾಮಣ್ಣ, ಪಟೇಲರಪುಟ್ಟಸ್ವಾಮಿ, ಮಹೇಂದ್ರ, ಬೋಜರಾಜು, ನಾಗರಾಜು, ದೊರೆಸ್ವಾಮಿ, ಡೈರಿ ದೊರೆ, ಮಹೇಂದ್ರ, ಪುಟ್ಟರಾಜು, ಯಶೋಧಮ್ಮ, ಎಂಪಿಸಿಎಸ್ ಅಧ್ಯಕ್ಷೆ ಲತಾ, ಸುಧಾಶ್ರೀನಿವಾಸ್, ಭಾಗ್ಯಮ್ಮ, ಮರೀಗೌಡ,ಮಂಗಳಮ್ಮರಾಜು, ಮಮತಾ, ಯಶೋಧಾ ಜಗದೀಶ್, ಹೇಮಂತ್‍ಕುಮಾರ್, ಸುರೇಶ್ ಶಂಕರೇಗೌಡ ಇನ್ನೂ ಮುಂತಾದವರು ಬಿಜೆಪಿಗೆ ಸೇರ್ಪಡೆಗೊಂಡರು.
ಪಕ್ಷಾಂತರ ಗೊಂಡ ಮುಖಂಡರನ್ನು ಪಕ್ಷದ ಶಾಲು ಹಾಕಿ, ಬಾವುಟ ನೀಡಿ ಬಿಜೆಪಿಗೆ ಸ್ವಾಗತಿಸಿದ ಯೋಗೇಶ್ವರ್, ತಾಲೂಕಿನ ಅಭಿವೃದ್ಧಿಯ ಕಾಳಜಿಹೊಂದಿರುವ ಬಿಜೆಪಿ ಪಕ್ಷಕ್ಕೆ ನೀವೆಲ್ಲಾ ಸೇರ್ಪಡೆಗೊಂಡಿರುವುದು ಸಂತಸದ ಸಂಗತಿಯಾಗಿದ್ದು, ನಿಮ್ಮೆಲ್ಲರನ್ನು ಗೌರವದಿಂದ ನಡೆಸಿಕೊಳ್ಳುವ ಕೆಲಸವನ್ನು ನಾವೆಲ್ಲ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಬಿಜೆಪಿ ಸರ್ಕಾರ ತಾಲೂಕಿನ ನೀರಾವರಿ ಸೇರಿದಂತೆ ಹಲವಾರು ಅಭಿವೃದ್ಧಿಕೆಲಸಗಳನ್ನು ಕೈಗೊಂಡಿದೆ. ನೀವೆಲ್ಲರೂ ಪಕ್ಷವನ್ನು ತಾಲೂಕಿನಲ್ಲಿ ಅಧಿಕಾರಕ್ಕೆ ತಂದರೆ ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ದೊರೆತದಂತಾಗುತ್ತದೆ ಎಂದು ಯೋಗೇಶ್ವರ್ ಅಭಿಪ್ರಾಯಪಟ್ಟರು.
ಬಿಜೆಪಿ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಎಲ್ಲಾ ಮುಖಂಡರಿಗೂ ನಾನು ಅಭಿನಂದಿಸುತ್ತೇನೆ. ನಿಮ್ಮ ಸಹಕಾರ ಇದೇ ರೀತಿ ಸದಾಕಾಲ ಇರಲಿ, ನಾವೆಲ್ಲರೂ ಒಗ್ಗೂಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಇಗ್ಗಲೂರು ಭಾಗದಲ್ಲೂ ಸೇರ್ಪಡೆ: ಶಾಸಕ ಯೋಗೇಶ್ವರ್ ಅವರ ಸಮ್ಮುಖದಲ್ಲಿ ತಾಲೂಕಿನ ಇಗ್ಗಲೂರು ಗ್ರಾಪಂ ವ್ಯಾಪ್ತಿಯ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ಎಂ.ಸಿದ್ದೇಗೌಡ ಜೆಡಿಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಇದೇ ವೇಳೆ ಗ್ರಾಪಂ ಮಾಜಿ ಉಪಾಧ್ಯಕ್ಷ ಆಲೆಮನೆ ನಿಂಗೇಗೌಡ(ರಾಜು) ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯ ಬ್ಯಾಡರಹಳ್ಳಿ ರಾಮಚಂದ್ರು, ಬಿಜೆಪಿ ತಾಲೂಕು ಪ್ರಧಾನಕಾರ್ಯದರ್ಶಿ ಪ್ರೇಮ್‍ಕುಮಾರ್, ಇಗ್ಗಲೂರು ಕುಮಾರ್ ,ಕೃಷ್ಣಾಪುರ ಕೆಂಪ, ಗ್ರಾಪಂ ಮಾಜಿ ಸದಸ್ಯ ಸುರೇಶ್, ಗರಕಹಳ್ಳಿ ಸಿದ್ದಪ್ಪ, ಚಕ್ಕಲೂರು ಚೌಡಯ್ಯ, ಹೊನ್ನಿಗನಹಳ್ಳಿ ನಾಗರಾಜು, ಗೋಪಿ, ಸರಗೂರು ಮಧು, ರಾಂಪುರ ಪ್ರದೀಪ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.