ನ್ಯೂಸ್ 18 ಕನ್ನಡದ ರಾಮನಗರ ಜಿಲ್ಲಾ ವರದಿಗಾರ ಎ.ಟಿ. ವೆಂಕಟೇಶ್ ರವರಿಗೆ ಸನ್ಮಾನ

ಹಾಯ್ ರಾಮನಗರ (hairamanagara.in) 07 ಫೆಬ್ರವರಿ 2022

ಚನ್ನಪಟ್ಟಣ : ಕೊರೋನಾ ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿನ ಕರಕುಶಲಕರ್ಮಿಗಳ ನೋವನ್ನು ವರದಿಯ ಮೂಲಕ ಬೆಳಕು ಚೆಲ್ಲಿದ್ದನ್ನು ಗುರುತಿಸಿ ಚನ್ನಪಟ್ಟಣದ ಕೆಂಗಲ್ ಆಂಜನೇಯಸ್ವಾಮಿ ಕರಕುಶಲಕರ್ಮಿಗಳ ಸಂಘ ಹಾಗೂ ಕೇಂದ್ರದ (KVIC)) ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ನಿಂದ ಪಟ್ಟಣದ ಖಾಸಗಿ ಪಾರ್ಟಿ ಹಾಲ್ ನಲ್ಲಿ ನಡೆದ ಟಾಯ್ಸ್ ಮೀಟ್ (TOYS MEE) ನಲ್ಲಿ ನ್ಯೂಸ್ 18 ಕನ್ನಡದ ರಾಮನಗರ ಜಿಲ್ಲಾ ವರದಿಗಾರರಾದ ಎ.ಟಿ.ವೆಂಕಟೇಶ್ ರವರಿಗೆ ಸನ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ (KVIC)) ದಕ್ಷಿಣ ವಿಭಾಗದ ಮುಖ್ಯಸ್ಥ ರಾಜಶೇಖರ ರಾವ್ ಪೆರೆಲಾ ಉಪಸ್ಥಿತಿ ಇದ್ದರು. ಚನ್ನಪಟ್ಟಣದ ನೂರಕ್ಕೂ ಹೆಚ್ಚು ಜನ ಕರಕುಶಲಕರ್ಮಿಗಳು ಮೀಟ್ ನಲ್ಲಿ ಭಾಗವಹಿಸಿದ್ದರು. ಚನ್ನಪಟ್ಟಣ ಟಾಯ್ಸ್ ಅಸೋಸಿಯೇಶನ್ ಪ್ರೆಸಿಡೆಂಟ್ ಶ್ರೀನಿವಾಸ್ ಇದ್ದರು.

Leave a Reply

Your email address will not be published. Required fields are marked *