ಫೆ. 15 ರಂದು ಕ್ರೀಡಾ ವಸತಿ ಶಾಲೆಗೆ ಆಯ್ಕೆ ಪ್ರಕ್ರಿಯೆ

ಹಾಯ್ ರಾಮನಗರ (hairamanagara.in) 08 ಫೆಬ್ರವರಿ 2022

ರಾಮನಗರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಮನಗರ ಕ್ರೀಡಾ ವಸತಿ ಶಾಲೆಗೆ 2022-23ನೇ ಸಾಲಿಗೆ ಆಟೋಟ ಹಾಗೂ ಕಾಲ್ಚೆಂಡು ಕ್ರೀಡೆಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ನೀಡುವ ಸಂಬಂಧ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು  ಫೆಬ್ರವರಿ 15 ರಂದು ಬೆಳಗ್ಗೆ 10.00 ಗಂಟೆಗೆ ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ  ಏರ್ಪಡಿಸಲಾಗಿದೆ.

ಕ್ರೀಡಾ ವಸತಿ ಶಾಲೆಗೆ ಪ್ರವೇಶ ಪಡೆದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಇಲಾಖೆಯು ಉಚಿತ ಊಟ/ವಸತಿಯೊಂದಿಗೆ ಕ್ರೀಡಾಗಂಟು ನೀಡಲಾಗುವುದು. ಪರಿಣಿತ ಕ್ರೀಡಾ ತರಬೇತುದಾರರಿಂದ ವೈಜ್ಞಾನಿಕವಾಗಿ ಕ್ರೀಡಾ ತರಬೇತಿಯನ್ನು ನೀಡಲಾಗುವುದು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ 4ನೇ ತರಗತಿ ಓದುತ್ತಿದ್ದು, 2022-23ನೇ ಸಾಲಿಗೆ 5ನೇ ತರಗತಿ ಸೇರಲು ಅರ್ಹರಾಗಿರಬೇಕು. ಆಟೋಟ ಮತ್ತು ಕಾಲ್ಚೆಂಡು ಕ್ರೀಡೆಗಳು(ಬಾಲಕರು ಮಾತ್ರ) ಕನಿಷ್ಠ ಎತ್ತರ 135 ಸೆಂ.ಮೀ ಇರಬೇಕು. ತೂಕ 30 ಕೆ.ಜಿ. ಇರಬೇಕು. ಈಗಾಗಲೇ ಜಿಲ್ಲೆಯ 04 ತಾಲ್ಲೂಕುಗಳಲ್ಲಿ ನಡೆದ ತಾಲ್ಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ/ಭಾಗವಹಿಸದೇ ಇರುವ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:-080-27274655 ಹಾಗೂ 7337669183 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *