ರಾಮನಗರದಲ್ಲಿ ಫೆ. 9 ರಂದು ಗಿರಿಜನ ಸುರಕ್ಷಾ ವೇದಿಕೆ ವತಿಯಿಂದ ಆಯೋಜಿಸಿದ್ದ “ಬುಡಕಟ್ಟು ಜಿಲ್ಲಾ ಸಮ್ಮೇಳನ” ಮುಂದೂಡಿಕೆ
ಹಾಯ್ ರಾಮನಗರ (hairamanagara.in) 08 ಫೆಬ್ರವರಿ 2022
ರಾಮನಗರ : ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಗಿರಿಜನರು ಹಾಗೂ ಬುಡಕಟ್ಟು ಸಮುದಾಯದವರನ್ನು ಸಂಘಟಿಸುವ ನಿಟ್ಟಿನಲ್ಲಿ ಫೆ.9ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಗಿರಿಜನ ಸುರಕ್ಷಾ ವೇದಿಕೆ ರಾಮನಗರ ಜಿಲ್ಲಾ ಸಮಿತಿ ವತಿಯಿಂದ ನಗರದ ರಾಮ್ ಘಡ್ ಹೋಟೆಲಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಬುಡಕಟ್ಟು ಜಿಲ್ಲಾ ಸಮ್ಮೇಳನ” ವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.