ಪತ್ರಕರ್ತರಿಗೆ ಅವಹೇಳನ : ಪೊಲೀಸರಿಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್

ಹಾಯ್ ರಾಮನಗರ (hairamanagara.in) 09 ಫೆಬ್ರವರಿ 2022

ಕನಕಪುರ : ಪತ್ರಿಕಾ ವರದಿಗಾರರ ಎದುರಲ್ಲಿ ಸಾರ್ವಜನಿಕವಾಗಿ ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮಕ್ಕೆ ಅವಹೇಳನಕಾರಿಯಾಗಿ ನಿಂದಿಸಿ ಅಪಮಾನ ಮಾಡಿರುವ ಮತ್ತಿ ಕುಂಟೆ ಗ್ರಾಮದ ರಜನಿಕಾಂತ್ ಮತ್ತು ವೆಂಕಟೇಶ್ ಎಂಬುವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ದೂರು ನೀಡಿದ್ದಾರೆ.

ತಾಲೂಕಿನ ಹಾರೋಹಳ್ಳಿ ಹೋಬಳಿಯ ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿ ಕುಂಟೆ ಗ್ರಾಮದಲ್ಲಿ ಕಳೆದ ಎರಡೂವರೆ ದಶಕಗಳಿಂದ ಗ್ರಾಮ ಠಾಣಾ ವ್ಯಾಪ್ತಿಗೆ ಬರುವ ರಸ್ತೆಯನ್ನು ಕ್ರಮವಾಗಿ ಮುಚ್ಚಿ ಕುಟುಂಬವೊಂದು ವಾಸವಿದ್ದ ಮನೆಯ ಸುತ್ತಲೂ ದಿಗ್ಬಂಧನ ಹಾಕಿ ಕುಟುಂಬದ ಸದಸ್ಯರು ಓಡಾಡಲು ಆಗದಂತೆ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿ ಒಂದು ಕುಟುಂಬ ವಾಸಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರು ನ್ಯಾಯಕ್ಕಾಗಿ ಕುಟುಂಬ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಮೂಲ ಸೌಕರ್ಯದಿಂದ ವಂಚಿತವಾದ ಕುಟುಂಬ ಮೂಲ ಸೌಕರ್ಯ ಕಲ್ಪಿಸಿಲ್ಲ ದಯಾಮರಣ ಕೊಡಿ ಎಂದು ರಾಜ್ಯಪಾಲರು ಮತ್ತು ಮಾನವ ಹಕ್ಕು ಆಯೋಗಕ್ಕೆ ಮನವಿ ಮಾಡಿಕೊಂಡಿದ್ದ ಇದು ಪತ್ರಿಕೆಯಲ್ಲಿ ವರದಿಯಾಗಿತ್ತು.

ಮೂಲಸೌಕರ್ಯಗಳಿಲ್ಲದ ಎರಡು ಮೂರು ದಶಕಗಳಿಂದ ನೊಂದಿರುವ ಕುಟುಂಬಕ್ಕೆ ಮಾಧ್ಯಮ ಮತ್ತು ಪತ್ರಿಕಾ ವರದಿಗಾರರು ಪ್ರಜಾಪ್ರಭುತ್ವದಲ್ಲಿ ಬರವಣಿಗೆಯ ಸ್ವಾತಂತ್ರ್ಯ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ನೀಡಿರುವ ಹಕ್ಕಿನ ಮೇರೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ನೊಂದ ಕುಟುಂಬದ ಪರವಾಗಿ ಯಾವುದೇ ದುರುದ್ದೇಶ ವಿಲ್ಲದೆ ನಿಷ್ಪಕ್ಷಪಾತವಾಗಿ ಪ್ರಾಮಾಣಿಕವಾಗಿ ವರದಿಮಾಡಿವೆ.

ಮೂಲ ಸೌಕರ್ಯದಿಂದ ವಂಚಿತವಾದ ಕುಟುಂಬ ನೀಡಿದ ದೂರಿನ ಮೇರೆಗೆ ಮಾನವ ಹಕ್ಕು ಆಯೋಗ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸ್ಥಳೀಯ ವಿಡಿಯೋ ಲೋಕೇಶ್ ಅವರಿಗೆ ಆದೇಶ ನೀಡಿತ್ತು ಅದರಂತೆ ಪಿಡಿಒ ಲೋಕೇಶ್ ಜನವರಿ 28ರಂದು ಸ್ಥಳ ಪರಿಶೀಲನೆಗೆ ತೆರಳಿದ್ದರು ಈ ಸಂದರ್ಭದಲ್ಲಿ ಅರ್ಜಿದಾರರಾದ ನಾನು ಸ್ಥಳದಲ್ಲಿ ಹಾಜರಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಆರಕ್ಷಕ ಇಲಾಖೆ ಅಧಿಕಾರಿಗಳು ಪತ್ರಿಕಾ ವರದಿಗಾರರು ಗ್ರಾಮಸ್ಥರು ಉಪಸ್ಥಿತರಿದ್ದರು.

ಅಧಿಕಾರಿಗಳು ಸ್ಥಳ ಮಹಜರು ಮಾಡಿ ದಾಖಲೆಗಳನ್ನು ಪರಿಶೀಲಿಸುವ ವೇಳೆ ರಸ್ತೆ ಒತ್ತುವರಿ ಮಾಡಿ ಒಂದು ಕುಟುಂಬದ ಮಾನವ ಹಕ್ಕುಗಳು ಮತ್ತು ಮೂಲಭೂತ ಸೌಕರ್ಯದ ವಂಚಿತ ವಾಗಲು ಕಾರಣರಾದ ಮತ್ತಿ ಕುಂಟೆ ಗ್ರಾಮದ ರಜನಿಕಾಂತ್ ವೆಂಕಟೇಶ್ ಅವರು ಆರಕ್ಷಕರು ಅಧಿಕಾರಿಗಳು ಸಾರ್ವಜನಿಕವಾಗಿ ಹಾಜರಿದ್ದ ಪತ್ರಿಕಾ ವರದಿಗಾರರನ್ನು ಕುರಿತು ದೌರ್ಜನ್ಯ ದುರಹಂಕಾರದಿಂದ ಈ ಸ್ಥಳಕ್ಕೆ ನ್ಯೂಸ್ ಚಾನೆಲ್ ಮತ್ತು ಪೇಪರ್ ನವರು  ಏಕೆ ಬಂದಿದ್ದೀರಿ ನ್ಯೂಸ್ ಚಾನೆಲ್ ಮತ್ತು ಟಿವಿ ಚಾನೆಲ್ ನಿಮ್ಮ ಒಬ್ಬರಿಗೆ ಮಾತ್ರ ಗೊತ್ತಿರೋದು ಹತ್ತು ಸಾವಿರ ಕೊಟ್ಟರೆ ನಮಗೂ ಬಂದು ಕೊಡ್ತಾನೆ ಸ್ಟೇಟ್ಮೆಂಟ್ ಎಂದು ಸಾರ್ವಜನಿಕವಾಗಿ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗ ವನ್ನು ಅವಹೇಳನಕಾರಿಯಾಗಿ ನಿಂದಿಸಿ ಪ್ರಜಾಪ್ರಭುತ್ವ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿ ಏರುದನಿಯಲ್ಲಿ ಅಪಮಾನ ಮಾಡಿ ಕ್ರಿಮಿನಲ್ ಅಪರಾಧವೆ ಸಿಗುತ್ತಾರೆ ಹಾಗಾಗಿ ಒಳಸಂಚು ಮಾಡಿ ದೌರ್ಜನ್ಯ ಮತ್ತು ದುರಹಂಕಾರದಿಂದ ಸಾರ್ವಜನಿಕವಾಗಿ ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾರಂಗ ಮತ್ತು ಮಾಧ್ಯಮವನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಮತ್ತಿ ಕುಂಟೆ ಗ್ರಾಮದ ರಜನಿಕಾಂತ ಮತ್ತು ವೆಂಕಟೇಶ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಸ್ಪಿ ರಮೇಶ್, ವೃತ್ತನಿರೀಕ್ಷಕ ಟಿಟಿ ಕೃಷ್ಣ ಅವರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *