Online Karate Championship -2022 ರ ಸ್ಪರ್ಧೆಯಲ್ಲಿ 6 ಚಿನ್ನದ ಪದಕ ಸೇರಿ 19 ಪದಕಗಳನ್ನು ಪಡೆದ ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯ ವಿದ್ಯಾರ್ಥಿಗಳು

ಹಾಯ್ ರಾಮನಗರ (hairamanagara.in) 09 ಫೆಬ್ರವರಿ 2022

ರಾಮನಗರ : ಸುಮಾರು 26 ದೇಶಗಳ ಸಹಭಾಗಿತ್ವದಲ್ಲಿ ಜನವರಿ 20 ರಿಂದ 25 ರವರೆಗೆ ನಡೆದ Online Karate Championship -2022 ರ ಪಂದ್ಯದಲ್ಲಿ ನಗರದ ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 6 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು,  9 ವಿದ್ಯಾರ್ಥಿಗಳು ಬೆಳ್ಳಿಯ ಪದಕಗಳನ್ನು ಹಾಗೂ 4 ವಿದ್ಯಾರ್ಥಿಗಳು ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಪ್ರಶಸ್ತಿ ವಿತರಣೆ : ಪದಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಾಲೆಯ ಕಾರ್ಯದರ್ಶ  ಅಲ್ಹಾಜ್ ಅಲ್ತಾಫ್ ಅಹ್ಮದ್, ಶಾಲೆಯ ಅಧ್ಯಕ್ಷರಾದ ಡಾ. ಅಲ್ಹಾಜ್ ಶಾಜಿಯಾ, ಸಮನ್ವಯಾಧಿಕಾರಿಗಳಾದ ಸ್ಟ್ಯಾನಿಲೀ ಪಾಲ್ ಅವರು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿದರು. ಕರಾಟೆ ಶಿಕ್ಷಕರಾದ ಸತೀಶ್ ಅವರಿಗೆ ಉತ್ತಮ ತರಬೇತುದಾರ ಪ್ರಶಸ್ತಿಯನ್ನು  ನೀಡಿ ಗೌರವಿಸಲಾಯಿತು.

ಕರಾಟೆ ಕಲಿತರೆ ಭಯ ದೂರ : ಅಲ್ಹಾಜ್ ಅಲ್ತಾಫ್ ಅಹ್ಮದ್

ಆತ್ಮರಕ್ಷಣೆಗಾಗಿ ಕರಾಟೆ ಕಲೆಯನ್ನು ಕರಗತ ಮಾಡಿಕೊಳ್ಳುವ ಮೂಲಕ ನಿರ್ಭಯವಾಗಿ ಓಡಾಡ ಬಹುದು. ವಿಶ್ವದಾದ್ಯಂತ ಕರಾಟೆಗೆ ಸಾಕಷ್ಟು ಮಹತ್ವ ದೊರೆಯುತ್ತಿದೆ. ಮಕ್ಕಳು ಹಾಗೂ ಯುವಕರಲ್ಲಿ ಕರಾಟೆ ಕಲಿಕೆಯಲ್ಲಿ ಆಸಕ್ತಿ ಮೂಡುತ್ತಿದೆ. ವಿಶೇಷವಾಗಿ ಬಾಲಕಿಯರು,  ಮಹಿಳೆಯರು ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವ ಅಗತ್ಯವಿದೆ  ಎಂದು ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯ ಕಾರ್ಯದರ್ಶಿ ಅಲ್ಹಾಜ್ ಅಲ್ತಾಫ್ ಅಹ್ಮದ್ ತಿಳಿಸಿದರು.

ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯ ಅಧ್ಯಕ್ಷರಾದ ಡಾ. ಅಲ್ಹಾಜ್ ಶಾಜಿಯಾ ಮಾತನಾಡಿ ಕರಾಟೆಯಿಂದ ಚಿಕ್ಕಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೂ ಕರಾಟೆ ತರಬೇತಿ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *