ಮುಂದಿನ ಚುನಾವಣಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುತ್ತೇನೆ : ಎಚ್.ಡಿ. ಕುಮಾರಸ್ವಾಮಿ

ಹಾಯ್ ರಾಮನಗರ (hairamanagara.in) 10 ಫೆಬ್ರವರಿ 2022

ಮೈಸೂರು : ಮುಂದಿನ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುತ್ತೇನೆ ಎಂದು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಅಚ್ಚರಿಯ ಹೇಳಿಕೆ ನೀಡಿ ಸಿದ್ದರಾಮಯ್ಯ, ಮತ್ತು ಜಿ.ಟಿ.ದೇವೇಗೌಡ ಅವರಿಗೆ ಶಾಕ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿ ಸ್ಪರ್ಧೆ ಬೇಡ ಎಂದು ನಾನು, ಅವರು ಚರ್ಚೆ ಮಾಡಿದ್ದೇವೆ. ಕುಟುಂಬ ರಾಜಕಾರಣದ ಹೆಸರಿನಲ್ಲಿ ನಮ್ಮ ಮೇಲೆ ಅಪಪ್ರಚಾರ ನಡೆಯುತ್ತಿದೆ. ಈ ಅಪಪ್ರಚಾರದಿಂದ ದೂರವಾಗಲು ಇಂತಹ ಚರ್ಚೆಯನ್ನ ನಾನು ಅನಿತಾ ಮಾಡಿದ್ದೇ ವೆ. ಈ ಬಗ್ಗೆ ಅಂತಿಮ ತೀರ್ಮಾನ ಚುನಾವಣೆ ಘೋಷಣೆ ನಂತರ ಮಾಡುತ್ತೇ ವೆ ಎಂದರು.

ನಿಖಿಲ್ ನನ್ನ ರಾಜಕಾರಣಕ್ಕೆ ತರುವುದಕ್ಕೆ ನನಗೆ ಇಷ್ಟವಿರಲಿಲ್ಲ. ಮುಖಂಡರ ಒತ್ತಡದ ಮೇರೆಗೆ ಅವರನ್ನ ರಾಜಕಾರಣಕ್ಕೆ ತಂದೆ. ಕುಟುಂಬ ರಾಜಕಾರಣದ ವಿಚಾರದಲ್ಲಿ ನಾನು ಈಗ ಕೇವಲ ನನ್ನ ಕುಟುಂಬದ ಬಗ್ಗೆ ಮಾತ್ರ ಮಾತ್ನಾಡುತ್ತೇನೆ. ನಾನು ನಮ್ಮ ಸಹೋದರರು ಬೇರೆಯಾಗಿದ್ದೇವೆ. ಹಾಗಾಗಿ ನಾನು, ನನ್ನ ಪತ್ನಿ, ನನ್ನ ಮಗನ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿದ್ದೇನೆ. ಒಟ್ಟಾರೆ ಹೆಚ್.ಡಿ ದೇವೇಗೌಡರ ಕುಟುಂಬದ ಬಗ್ಗೆ ನಾನು ಮಾತನಾಡುತ್ತಿಲ್ಲ. ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಮುಂದಿನ ಚುನಾವಣೆಗೆ ಚಾಮುಂಡೇಶ್ವರಿಗೆ ಯಾರು ಬರ್ತಾರೆ ಎಂದು ಕಾರ್ಯಕರ್ತರು ಕೇಳಿದಾಗ, ನಾನೇ ಬರುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೊಸ ಟ್ವಿಸ್ಟ್ ನೀಡಿದ್ದಾರೆ.

Leave a Reply

Your email address will not be published. Required fields are marked *