ವೀಸಾದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡ ಎಚ್‍ಡಿಎಫ್‍ಸಿ

ಹಾಯ್ ರಾಮನಗರ (hairamanagara.in) 10 ಫೆಬ್ರವರಿ 2022

ವಿಶಿಷ್ಟ ಪಾಲಿಸಿಯು, ವೀಸಾದ ಭಾಗೀದಾರ ಬ್ಯಾಂಕುಗಳು ಮತ್ತು ಪ್ಲಾಟಿನಮ್ ಕಾರ್ಡುದಾರರನ್ನು ವಂಚನೆಯಿಂದ ರಕ್ಷಿಸುತ್ತದೆ.

ಬೆಂಗಳೂರು : ಖಾಸಗಿ ಕ್ಷೇತ್ರದಲ್ಲಿ ಭಾರತದ ಮುಂಚೂಣಿ ಖಾಸಗಿ ಕ್ಷೇತ್ರದ ಜನರಲ್ ಇನ್ಶುರೆನ್ಸ್ ಸಂಸ್ಥೆಯಾದ ಎಚ್‍ಡಿಎಫ್‍ಸಿ ಎರ್ಗೊ, ಆಯ್ದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ವೀಸಾ ಪ್ಲಾಟಿನಮ್ ಕಾರ್ಡುದಾರರಿಗಾಗಿ ಭದ್ರಪಡಿಸಲಾದ ವಿಮಾ ಪೂರೈಕೆ ಒದಗಿಸಲು, ಡಿಜಿಟಲ್ ಪಾವತಿಗಳಲ್ಲಿ ಜಾಗತಿಕ ಮುಂಚೂಣಿ ಸಂಸ್ಥೆಯಾದ ವೀಸಾದೊಂದಿಗೆ ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಸಹಭಾಗಿತ್ವವನ್ನು ಏರ್ಪಡಿಸಿಕೊಂಡಿರುವುದಾಗಿ ಘೋಷಿಸಿತು.

ಪಾವತಿಗಳ ರೂಪವಾಗಿ ಕಾರ್ಡ್‍ಗಳ ಬಳಕೆ ಹೆಚ್ಚಾಗಿದ್ದು, ಸಾಂಕ್ರಾಮಿಕದ ಸಮಯದಲ್ಲಿ ಅತ್ಯಂತ ಇಚ್ಛಿತ ಪಾವತಿ ವಿಧಾನವಾಗಿ ಅದ್ಭುತ ಸ್ವೀಕೃತಿ ಪಡೆದಿತ್ತು. ಕಾರ್ಡುಗಳ ಒದಗಣೆದಾರರಾದ ಬ್ಯಾಂಕುಗಳು, ಕಾರ್ಡ್‍ಗಳನ್ನು ಅಂಗೀಕರಿಸುವ ವರ್ತಕರ ಕಾರ್ಯಜಲವನ್ನು ಸೃಷ್ಟಿಸಿ ರಿಯಾಯಿತಿಗಳನ್ನು ಒದಗಿಸುವ ಮೂಲಕ ಕಾರ್ಡ್ ಬಳಕೆಯನ್ನು ಪ್ರೋತ್ಸಾಹಿಸುವಲ್ಲಿ ಮುನ್ನೆಲೆಯಲ್ಲಿರುವುದರ ಜೊತೆಗೆ ಹೆಚ್ಚಿನ ಖರ್ಚು(ವ್ಯಯ)ಗಳಿಗಾಗಿ ಪ್ರೋತ್ಸಾಹನ ಬಹುಮಾನಗಳನ್ನೂ ಒದಗಿಸುತ್ತಿವೆ. ಆದರೂ, ಗ್ರಾಹಕರ ಮನಸ್ಸಿನಲ್ಲಿ ಕಾರ್ಡ್ ಬಳಕೆಯು ಅನೇಕ ವೇಳೆ, ಬಳಕೆಯ ಸುರಕ್ಷತೆಯ ಬಗ್ಗೆ ಮತ್ತು ಅನಧಿಕೃತ/ವಂಚನೆಯ ವ್ಯವಹಾರಗಳ ಸಂಭಾವ್ಯತೆಯ ಬಗ್ಗೆ ಆತಂಕ ಮೂಡಿಸುತ್ತದೆ. ವರದಿ ಮಾಡಲಾದ ವಂಚನೆಗಳಿಗಾಗಿ ಶೂನ್ಯ ಸಾಲಋಣ ನೀಡುವಂತೆ ಆರ್‍ಬಿಐ ಬ್ಯಾಂಕುಗಳನ್ನು ಕಡ್ಡಾಯಗೊಳಿಸಿದೆ. ವೀಸಾದೊಂದಿಗಿನ ಈ ಸಹಯೋಗದ ಮೂಲಕ ಎಚ್‍ಡಿಎಫ್‍ಸಿ ಎರ್ಗೊ, ವಂಚನೆಯ ವ್ಯವಹಾರಗಳ ವಿರುದ್ಧ ವಿಮೆ ಒದಗಿಸಿ, ಕಾರ್ಡ್ ನೀಡಿರುವ ಬ್ಯಾಂಕುಗಳು ತಮ್ಮ ಕಾರ್ಡುದಾರರಿಗೆ ಶೂನ್ಯ ಸಾಲಋಣ ನೀಡಲು ನೆರವಾಗಿದೆ.

ಈ ಸಹಭಾಗಿತ್ವದ ಬಗ್ಗೆ ಮಾತನಾಡುತ್ತಾ, ಎಚ್‍ಡಿಎಫ್‍ಸಿಎರ್ಗೊ ಜನರಲ್ ಇನ್ಶುರೆನ್ಸ್ ಕಂಪನಿಯ ವಾಣಿಜ್ಯ ವ್ಯಾಪಾರ ವಿಭಾಗದ ಅಧ್ಯಕ್ಷ ಶ್ರೀ ಸಂಜಯ್ ಕಾ, “ಈ ಪಾಲಿಸಿಯು ವೀಸಾದ ಪ್ಲಾಟಿನಮ್ ಕಾರ್ಡುದಾರರಿಗೆ ಅನ್ವಯವಾಗುತ್ತದೆ ಮತ್ತು ವೀಸಾದ ಭಾಗೀದಾರ ಬ್ಯಾಂಕ್‍ಗೆ ಭದ್ರತೆ ಒದಗಿಸುತ್ತದೆ. ಈ ಮೂಲಕ ಅದು ಕಾರ್ಡುದಾರರಿಗೆ ಅವರು ಕಾರ್ಡ್ ಮೂಲಕ ಯಾವುದೇ ವ್ಯವಹಾರ ನಡೆಸುವಾಗ ಮಾನಸಿಕ ನೆಮ್ಮದಿ ನೀಡುತ್ತದೆ. ವೀಸಾದ ಗ್ರಾಹಕರಿಗೆ ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಮತ್ತೊಂದು ಕೊಡುಗೆಯನ್ನು ನೀಡಲು ಅದರೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದಕ್ಕೆ ನಮಗೆ ಹರ್ಷವಾಗುತ್ತಿದೆ. ಆರ್‍ಬಿಐ ಪ್ರಕಾರ, ಕಳೆದ 10 ವರ್ಷಗಳಿಗಿಂತ ಹೆಚ್ವಿನ ಅವಧಿಯಲ್ಲಿ, ವಂಚಕರು, 1.17 ಲಕ್ಷ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳ ವಂಚನೆಯ ಸಂದರ್ಭಗಳಲ್ಲಿ ರೂ. 615.39 ಕೋಟಿಗಿಂತ ಹೆಚ್ಚಿನ ಮೊತ್ತದ ಹಣವನ್ನು ನುಂಗಿಹಾಕಿದ್ದರು.”ಎಂದರು.

“ಕಳೆದ ಒಂದು ವರ್ಷದಲ್ಲಿ ಡಿಜಿಟಲ್ ಪಾವತಿಗಳಿಗಾಗಿ ತಮ್ಮ ಕಾರ್ಡ್‍ಗಳನ್ನು ಬಳಸಿದ ಹೊಸ ಗ್ರಾಹಕರ ಸಂಖ್ಯೆಯಲ್ಲಿ ಭಾರತವು ಕ್ಷಿಪ್ರ ಹೆಚ್ಚಳಿಕೆ ಕಂಡಿದೆ ಮತ್ತು ಅವರು ಸುಭದ್ರವಾದ ಪಾವತಿ ಅನುಭವ ಒದಗಿಸಲು ವೀಸಾ ಬದ್ಧವಾಗಿದೆ. ವಿವಿಧ ಕಾರ್ಡ್ ನೀಡುವ ಭಾಗೀದಾರರುಗಳಾದ್ಯಂತ ಇರುವ ನಮ್ಮ ಪ್ಲಾಟಿನಮ್ ಡೆಬಿಟ್ ಮತ್ತುಕ್ರೆಡಿಟ್ ಕಾರ್ಡ್‍ದಾರರಿಗೆ ಪೂರಕವಾದ ವಂಚನೆಯ ವಿಮಾ ಕವರೇಜ್ ಒದಗಿಸಲು ಎಚ್‍ಡಿಎಫ್‍ಸಿ ಎರ್ಗೋದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಕಾರ್ಡುಗಳೊಂದಿಗೆ ಪಾವತಿಗಳನ್ನು ಮಾಡುವಾಗ ಇರುವ ಗ್ರಾಹಕರ ಆತಂಕಗಳನ್ನು ನಿವಾರಿಸಿ, ನಮ್ಮ ಕಾರ್ಡ್‍ದಾರರು ಕಾರ್ಡ್ ವಂಚನೆ ಏರ್ಪಟ್ಟ ಸಂದರ್ಭದಲ್ಲಿ ಅವರನ್ನು ಸುರಕ್ಷಿತವಾಗಿರುಸುವುದು ನಮ್ಮ ಗುರಿಯಾಗಿದೆ.”ಎಂದು ಹೇಳಿದರು, ವೀಸಾ ಇಂಡಿಯಾದ ವ್ಯಾಪಾರ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಸುಜಯ್ ರೈನ

ಪಾಲಿಸಿಯು, ಭಾಗೀದಾರ ಬ್ಯಾಂಕುಗಳ ಎಲ್ಲಾ ವೀಸಾ ಪ್ಲಾಟಿನಮ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರಿಗೆ ರೂ. 1 ಲಕ್ಷದವರೆಗೆ ವಂಚನೆಯ ವಿಮಾ ಪೂರೈಕೆ ಒದಗಿಸುತ್ತದೆ. ಈ ಯೋಜನೆಗಾಗಿ, ವೀಸಾ ಮಾಸ್ಟರ್ ಪಾಲಿಸಿದಾರನಾಗಿದ್ದು ಭಾಗೀದಾರ ಬ್ಯಾಂಕುಗಳ ವೀಸಾ ಪ್ಲಾಟಿನಮ್ ಕಾರ್ಡ್‍ದಾರರಿಗೆ, ಎಚ್‍ಡಿಎಫ್‍ಸಿ ಎರ್ಗೊ ಜನರಲ್ ಇನ್ಶುರೆನ್ಸ್ ಕಂಪನಿ ಲಿ., ವಿಮಾ ಕವರೇಜ್‍ ಅನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *