ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಭಾರತೀಯ ಪ್ರವಾಸ-2022ಗೆ ಹೆಮ್ಮೆಯ ಪ್ರಾಯೋಜಕತ್ವ ವಹಿಸಿಕೊಂಡ ಸೀಗ್ರಾಮ್ಸ್ ರಾಯಲ್ ಸ್ಟ್ಯಾಗ್

ಹಾಯ್ ರಾಮನಗರ (hairamanagara.in) 10 ಫೆಬ್ರವರಿ 2022

ಬೆಂಗಳೂರು : ಪ್ರಸ್ತುತ ಏರ್ಪಡುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಭಾರತ ಪ್ರವಾದ ಅಧಿಕೃತ ಪ್ರಾಯೋಜಕ ಸಂಸ್ಥೆಯಾಗಿ ತನ್ನ ಸಹಯೋಗವನ್ನು ಘೋಷಿಸಲು ಸೀಗ್ರಾಮ್ಸ್ ರಾಯಲ್ ಸ್ಟ್ಯಾಗ್ ಹೆಮ್ಮೆಪಡುತ್ತಿದೆ. ಸಹಜವಾದ ಟೀಮ್ ವೆಸ್ಟ್ ಇಂಡೀಸ್, ಕ್ಯಾರಿಬಿಯನ್ ಭವ್ಯತೆಯಿಂದ ವರ್ಧಿತಗೊಂಡಿರುವ ಕಾರ್ಯಕ್ಷಮತೆಗೆ ಮತ್ತೊಂದು ಹೆಸರಾಗಿದ್ದು ಈ ಶೈಲಿಯು ರಾಯಲ್ ಸ್ಟ್ಯಾಗ್‍ನ ಬ್ರ್ಯಾಂಡ್‍ನ -“ಇದು ನಿಮ್ಮ ಜೀವನ. ಅದನ್ನು ದೊಡ್ಡದಾಗಿ ಜೀವಿಸಿ”ಎಂಬ ಸಿದ್ಧಾಂತಕ್ಕೆ ನಿಖರವಾಗಿ ಹೊಂದುತ್ತದೆ. ತನ್ನ ಐತಿಹಾಸಿಕ ಸ್ಥಾನಮಾನಕ್ಕೆ ತಕ್ಕಂತೆ ಮತ್ತು “ಗೌರವಸ್ಥರ ಆಟ”ದ ಮೇಲಿನ ಪ್ರೀತಿಯಿಂದಾಗಿ ರಾಯಲ್ ಸ್ಟ್ಯಾಗ್ ಭಾರತದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಪ್ರೀತಿಸುವ ಈ ಕ್ರಿಕೆಟ್ ಧುರೀಣರಿಗೆ ಬೆಂಬಲ ಒದಗಿಸಲು ಸಜ್ಜಾಗಿದೆ.

ಕ್ರಿಕೆಟ್ ಯಾವಾಗಲೂ ರಾಯಲ್ ಸ್ಟ್ಯಾಗ್‍ನ ಬ್ರ್ಯಾಂಡ್ ಸಂವಹನದ ಕೇಂದ್ರಭಾಗದಲ್ಲಿದೆ. ಹಲವಾರು ವರ್ಷಗಳಿಂದ, ವಿಶ್ವದ ಅಗ್ರಮಾನ್ಯ ಕ್ರಿಕೆಟಿಗರು ಹಾಗೂ ತಂಡಗಳೊಂದಿಗಿನ ಬ್ರ್ಯಾಂಡ್‍ನ ನಿರಂತರ ಸಹಯೋಗವು ದೇಶಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳೊಡನೆ ಅದರ ತೊಡಗಿಕೊಳ್ಳುವಿಕೆಯನ್ನು ಬಲಪಡಿಸಿದೆ. ಈ ವರ್ಷ, ಹೃದಯದಾಳದಿಂದ ಮತ್ತು ಉತ್ಕಂಟತೆಯಿಂದ ಆಡುವ ಹಾಗೂ ತನ್ನ ಯಶಸ್ಸುಗಳನ್ನು ಸ್ಟೈಲ್, ಭವ್ಯತೆ ಮತ್ತು ಅತ್ಯುತ್ಸಾಹದಿಂದ ಆಚರಿಸಿಕೊಳ್ಳುವ ತಂಡದೊಡನೆ ಸಹಯೊಗ ಏರ್ಪಡಿಸಿಕೊಳ್ಳುವ ಮೂಲಕ ರಾಯಲ್ ಸ್ಟ್ಯಾಗ್, ಆಟಕ್ಕೆ ಟೋಸ್ಟ್ ಏರಿಸಿದೆ. ಇವೆಲ್ಲಾ ಅಂಶಗಳು ಬ್ರ್ಯಾಂಡ್‍ನ ಮೂಲಸಿದ್ಧಾಂತದೊಡನೆ ನಿಖರವಾಗಿ ಹೊಂದಿಕೊಳ್ಳುತ್ತವೆ.

ಪ್ರಾಯಜಕತ್ವದ ಬಗ್ಗೆ ಮಾತನಾಡುತ್ತಾ, ಪೆರ್ನೋಡ್ ರಿಕಾರ್ಡ್ ಇಂಡಿಯಾದ ಸಿಎಮ್‍ಒ ಕಾರ್ತಿಕ್ ಮಹಿಂದ್ರ, “ಕ್ರಿಕೆಟ್ ಅಭಿಮಾನಿಗಳ ಒಂದು ಇಡೀ ಪೀಳಿಗೆಗೆ, ವೆಸ್ಟ್ ಇಂಡೀಸ್ ಸರಿಸಾಟಿಯಿಲ್ಲದ ಪ್ರತಿಭೆ, ಧನಾತ್ಮಕ ದೃಷ್ಟಿಕೋನ ಮತ್ತು ಅಸಮಾನ ಶೈಲಿಯ ನಿಖರ ಮಿಶ್ರಣದ ಪ್ರತೀಕವಾಗಿದೆ. ಕಳೆದ ದಶಕದಲ್ಲಿ ತಂಡವು ಆ ವಿಶಿಷ್ಟ ಚೈತನ್ಯವನ್ನು ಮರುಶೋಧಿಸಿಕೊಂಡು, ಕ್ಯಾರಿಬಿಯನ್ ತಂಡವು ಎರಡು ಟಿ20 ವಿಶ್ವ ಕಪ್‍ಗಳನ್ನು ಗೆಲ್ಲುವುದಕ್ಕೆ ನೆರವಾದ ಆಟಗಾರರನ್ನು ಹೊಂದಿದೆ. ಕಳೆದ ಹಲವಾರು ವರ್ಷಗಳಿಂದ ರಾಯಲ್ ಸ್ಟ್ಯಾಗ್ ಈ ಎಲ್ಲಾ ಗುಣವಿಶೇಷತೆಗಳನ್ನೂ ಆಚರಿಸುತ್ತಿರುವುದರಿಂದ, ಈ ಸಹಯೋಗವು ಇನ್ನಷ್ಟು ವಿಶೇಷವೆನಿಸಿಕೊಳ್ಳುತ್ತಿದೆ. ಎಲ್ಲಕ್ಕಿಂತ ಹೆಚ್ಚಿಗೆ, ಈ ತಂಡದಲ್ಲಿರುವ ಹಲವಾರು ಆಟಗಾರರು, ಟಿ20 ಕ್ರಿಕೆಟ್‍ನಲ್ಲಿ ತಮ್ಮ ಅದ್ವಿತೀಯವಾದ ಆಟಬದಲಾಯಿಸುವ ಪ್ರದರ್ಶನದಿಂದಾಗಿ ಭಾರತದಲ್ಲಿ ಅಪಾರ ಪ್ರೀತಿ ಗಳಿಸಿದ್ದಾರೆ. ಈಗ್ಗೆ ಎರಡು ದಶಕಗಳಿಂದ ರಾಯಲ್ ಸ್ಟ್ಯಾಗ್, ಸೀಮಿತ ಓವರ್‍ಗಳ ಕ್ರಿಕೆಟ್‍ನ ಅತ್ಯುತ್ಸಾಹದ ಮತ್ತು ಮಿಂಚಿನ ಕ್ರಿಯೆಗಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ವೆಸ್ಟ್ ಇಂಡೀಸ್‍ದ ಅಧಿಕೃತ ಪ್ರಾಯೋಜನ ಸಂಸ್ಥೆಯಾಗುವ ಮೂಲಕ ನಾವು ಈ ಕ್ರೀಡೆಯ ಇಂದ್ರಜಾಲದೊಂದಿಗೆ ನಮ್ಮ ಸಹಯೋಗವನ್ನು ಮುಂದುವರಿಸಲಿದ್ದೇವೆ.”ಎಂದರು.

ಕ್ರಿಕೆಟ್ ವೆಸ್ಟ್ ಇಂಡೀಸ್‍ನ ವಾಣಿಜ್ಯ ವಿಭಾಗದ ನಿರ್ದೇಶಕ ಡೊಮಿನಿಕ್ ವಾರ್ನೆ: “ನಮ್ಮ ಕೌತುಕಮಯವಾದ ವೆಸ್ಟ್ ಇಂಡೀಸ್ ಪುರುಷರ ತಂಡದೊಡನೆ ಭಾರತದಲ್ಲಿ ರಾಯಲ್ ಸ್ಟ್ಯಾಗ್‍ನೊಂದಿಗೆ ಈ ಹೊಸ ಸಹಭಾಗಿತ್ವವನ್ನು ಏರ್ಪಡಿಸಿಕೊಳ್ಳಲು ನಮಗೆ ಅತೀವ ಹರ್ಷವಾಗುತ್ತಿದೆ. ಭಾರತ ಹಾಗು ವಿಶ್ವದೆಲ್ಲೆಡೆ ಇರುವ ಅಭಿಮಾನಿಗಳು ವೆಸ್ಟ್ ಇಂಡೀಸ್ ತಂಡಗಳು ಹಾಗೂ ಆಟಗಾರರ ಬಗ್ಗೆ ಸದಾ ಅದ್ಭುತ ಪ್ರೀತಿ ಹೊಂದಿದ್ದು ಅವರನ್ನು ಅನುಸರಿಸುತ್ತಿರುತ್ತಾರೆ. 2022ರ ಉತ್ತರಭಾಗದಲ್ಲಿ ಕ್ಯಾರಿಬಿಯನ್ ಟೂರ್ ನಲ್ಲಿ ಭಾರತದೊಡನೆ ನಡೆಯುವ ತೀವ್ರವಾದ ಕ್ರಿಕೆಟ್‍ನ ಬ್ಯುಜಿ ವರ್ಷದಲ್ಲಿ ಸಂಚಲನಭರಿತವಾದ ಓಡಿಐ ಮತ್ತು ಟಿ20ಐ ಸರಣಿಗಾಗಿ ಈ ಸಹಯೋಗದ ಬಗ್ಗೆ ನಾವು ಉತ್ಸುಕರಾಗಿದ್ದೇವೆ.”ಎಂದರು.

Leave a Reply

Your email address will not be published. Required fields are marked *