ಸಾರ್ವತ್ರಿಕ ಸಾಂಕ್ರಮಿಕ ರೋಗ ಮತ್ತು ಮಧುಮೇಹ : ನೀವು ಏನನ್ನು ತಿಳಿದಿರಬೇಕು

ಹಾಯ್ ರಾಮನಗರ (hairamanagara.in) 11 ಫೆಬ್ರವರಿ 2022

ಮಧುಮೇಹವಿರುವ ರೋಗಿಗಳಿಗೆ ನೆರವಾಗಲು ರಕ್ತದ ಸಕ್ಕರೆ ಮಟ್ಟ ನಿಯಂತ್ರಣ ಮತ್ತು ಉತ್ತಮ ಪೌಷ್ಠಿಕಾ ಆಹಾರ ಅವಶ್ಯ ಅಂಶಗಳು

ಕೊರೊನವೈರಾಣು ಸಾರ್ವತ್ರಿಕ ಸಾಂಕ್ರಮಿಕ ಕಾಯಿಲೆಯನ್ನು ಇನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಮತ್ತು ಅಂತಹ ರೋಗಿಗಳ ಆರೈಕೆ ಮಾಡುತ್ತಲೇ ಆರೋಗ್ಯಶುಷ್ರೂಷೆ ಒದಗಿಸುವವರು ಈ ಕಾಯಿಲೆಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕು ತಗುಲಿದ ಜನರಲ್ಲಿ ಕೆಲವು ಅಂತರ್ಗತ ಆರೋಗ್ಯ ಸ್ಥಿತಿಗಳಿದ್ದಾಗ, ಅಂತಹ ಜನರಿಗೆ ರೋಗ ಉಲಬಣವಾಗುವ ಅಪಾಯ ಹೆಚ್ಚು ಎಂದಷ್ಟು ಮಾತ್ರ ಈವರೆಗೆ ತಿಳಿದಿದೆ. ವಿಶೇಷವಾಗಿ, ಮಧುಮೇಹಿಗಳಲ್ಲಿ ಅಪಾಯ ಹೆಚ್ಚು ಎಂದು ಕಂಡುಬರುತ್ತಿದೆ.

ಉದಾಹರಣೆಗೆ, ಮಧುಮೇಹ ಮತ್ತು ರಕ್ತದ ಸಕ್ಕರೆ ಮಟ್ಟ ಅಧಿಕವಾಗಿರುವ ಹೈಪರ್ ಗ್ಲೈಸೆಮಿಯಗಳಂಥ ಸಂದರ್ಭದಲ್ಲಿ, ಕೋವಿಡ್ ವೈರಾಣು ಪಾಸಿಟಿವ್ ಎಂದು ಕಂಡುಬರುವ ರೋಗಿಗಳಲ್ಲಿ ಆರೋಗ್ಯ ಏರುಪೇರಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಅಂತಹ ರೋಗಿಗಳ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾದರೆ, ಫಲಿತಾಂಶ ಆಶದಾಯಕವಾಗಿರುತ್ತದೆ ಮತ್ತು ಸೂಕ್ತ ಪೌಷ್ಠಿಕ ಆಹಾರದೊಂದಿಗೆ ಚಿಕಿತ್ಸೆ ನೀಡಿದರೆ, ಮಧುಮೇಹಿಗಳು ತಮ್ಮ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಬಲ್ಲರು, ಅವರ ಗ್ಲೂಕೋಸ್ ನಿಯಂತ್ರಣ ಉತ್ತಮಗೊಳ್ಳುತ್ತದೆ ಮತ್ತು ಆರೋಗ್ಯವೂ ಸುಧಾರಿಸಬಲ್ಲದು.

ಸಾರ್ವತ್ರಿಕ ಸಾಂಕ್ರಾಮಿಕ ಸ್ಥಿತಿ ಮತ್ತು ಅದರಿಂದ ಮಧುಮೇಹಿಗಳ ಮೇಲಿನ ಪರಿಣಾಮ ವಿಶ್ವದಲ್ಲಿ ಎಲ್ಲಾ ದೇಶಗಳ ಪೈಕಿ ಭಾರತ, ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿರುವ ದೇಶಗಳಲ್ಲಿ ಎರಡನೆ ಸ್ಥಾನದಲ್ಲಿದೆ. 11 ಭಾರತೀಯರಲ್ಲಿ ಒಬ್ಬರಿಗೆ ಈ ರೋಗವಿದೆ. 1 ಜಾಗತಿಕವಾಗಿ, ಮಧುಮೇಹ ಇಲ್ಲದ ರೋಗಿಗಳಿಗೆ ಹೋಲಿಸಿದರೆ ಮಧುಮೇಹಿಗಳಿಗೆ ಅಪಾಯದ ಸಾಧ್ಯತೆ 50% ಹೆಚ್ಚಾಗಿರುತ್ತದೆ. 2 ಮಧುಮೇಹಿಗಳಲ್ಲಿ ರೋಗನಿರೋಧಕ ಶಕ್ತಿ ಕ್ಷೀಣವಾಗಿರುವ ಕಾರಣ, ವಿವಿಧ ಬಗೆಯ ವೈರಾಣು ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಮಟ್ಟ ಅಧಿಕವಾಗಿರುವ ಸನ್ನಿವೇಶದಲ್ಲಿ ವೈರಾಣು ಧಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಮಧುಮೇಹದ ನಿರ್ವಹಣೆಯಲ್ಲಿ ಪೌಷ್ಠಿಕತೆಯ ಪ್ರಮುಖ ಪಾತ್ರ
ಮಧುಮೇಹಿಗಳು ತಮ್ಮ ಕಾಯಿಲೆಅಯನ್ನು ನಿರ್ವಹಿಸುವಲ್ಲಿ ಉತ್ತಮ ಪೌಷ್ಠಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಆಗ ಅವರು ತಮ್ಮ ರಕ್ತದ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಬಹುದು ಹಾಗೂ ತಮ್ಮ ಆರೋಗ್ಯ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ವೈರಾಣು ಸೋಂಕು ತ್ತಗುಲಿದ ರೋಗಿಗಳು ಸೇರಿದಂತೆ ಟೈಪ್ 2 ಮಧುಮೇಹ ರೋಗಿಗಳಿಗೆ ಆರೈಕೆ ನೀಡುವ ವೈದ್ಯರು ಅಂತಹ ರೋಗಿಗಳ ರಕ್ತದ ಸಕ್ಕರೆ ಮಟ್ಟವನ್ನು ಸಾಮನ್ಯ ಮಟ್ಟದಲ್ಲಿರಿಸಲು ಆದ್ಯತೆ ನೀಡುತ್ತಾರೆ. ಪೌಷ್ಠಿಕ ಆಹಾರದ ಅಗತ್ಯವಿರುವ ರೋಗಿಗಳಿಗೆ, ಮಧುಮೇಹ ನಿರ್ದಿಷ್ಟ ಆಹಾರ ಸೂತ್ರಗಳನ್ನು ಸಿದ್ಧಪಡಿಸಲಾಗಿದ್ದು, ಅಂತಹ ಆಹಾರ ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.

ಮಧುಮೇಹ ನಿರ್ದಿಷ್ಟ ಆಹಾರ/ಆರೈಕೆ ಸೂತ್ರಗಳು ಈ ಕೆಳಗಿನ ಪ್ರಮುಖ ಪೋಷಕಾಂಶಗಳನ್ನು ಹಾಗೂ ಆರೋಗ್ಯದ ಲಾಭಗಳನ್ನು ಒದಗಿಸುತ್ತವೆ :


• ರಕ್ತದ ಸಕ್ಕರೆ ಮಟ್ಟದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವಿರುವ ನಿಧಾನವಾಗಿ ಪಚನವಾಗುವ ಪಿಷ್ಟಪದಾರ್ಥಗಳು
• ಸ್ಯಾಚ್ಯುರೇಟೆಡ್ ಕೊಬ್ಬಿನ ಜಾಗವನ್ನು ತುಂಬಬಲ್ಲ ಮಾನೋ ಸ್ಯಾಚ್ಯುರೇಟೆಡ್ ಫ್ಯಾಟಿ ಆಸಿಡ್ ಮತ್ತು ಕೊಲೆಸ್ಟ್ರಾಲ್‍ನಂಥ ಲಿಪಿಡ್ ಮಟ್ಟವನ್ನು ಬೆಂಬಲಿಸುತ್ತವೆ
• ಜಠರದ ಆರೋಗ್ಯ ಸುಧಾರಿಸುವ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ಉತ್ತಮಗೊಳಿಸುವ ಪ್ರೀ ಬೈಯಾಟಿಕ್ಸ್ ಮತ್ತು ಆಹಾರದಲ್ಲಿ ನಾರಿನಂಶ
• ಉತ್ಕೃಷ್ಟ ಗುಣಮಟ್ಟದ ಪ್ರೊಟೀನ್ ಮತ್ತು ಇತರ ಪೋಷಕಾಂಶಗಳು ರೋಗ್ಯ ನಿರೋಧಕ ವ್ಯವಸ್ಥೆಗೆ ಅನುಕೂಲ ಮಾಡಿಕೊಡುತ್ತವೆ. ಇವುಗಳಲ್ಲಿ ಆಮ್ಟಿ ಆಕ್ಸಿಡೆಂಟ್‍ಗಳು(ವಿಟಮಿನ್ ಸಿ, ಇ. ಸೆಲೆನಿಯಂ), ವಿಟಮಿನ್ ಡಿ, ವಿಟಮಿನ್ ಎ ಮತ್ತು ಸತು ಒಳಗೊಂಡಿವೆ.

ಮಧುಮೇಹಿಗಳ ಆರೋಗ್ಯ ಸ್ಥಿತಿ ಸುಧಾರಿಸುವಲ್ಲಿ ಮಧುಮೇಹ ನಿರ್ದಿಷ್ಟ ಆರೋಗ್ಯ ಸೂತ್ರಗಳು ಸಹಾಯಕಾರಿ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಮಧುಮೇಹ ನಿರ್ದಿಷ್ಟ ಮೌಖಿಕವಾಗಿ ಸೇವಿಸುವ ಪೂರಕಪೋಷಕಾಂಶ ಸೇವನೆಯಿಂದ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕಾರಿ ಮತ್ತು ವಯಸ್ಕರಲ್ಲಿ ಅಧಿಕ ತೂಕ ನಿರ್ವಹಣೆಗೂ ಸಹಾಯಕ, ಏಕೆಂದರೆ ಈ ಆಹಾರಗಳು ಪಿಷ್ಟಪದಾರ್ಥಗಳನ್ನು ನಿಧಾನವಾಗಿ ಬಿಡುಗಡೆ ಮಾಡುತ್ತವೆ.

ವೈರಾಣುಗಳ ಬಗ್ಗೆ ತಿಳಿಯದಿರುವ ಇನ್ನೂ ಅನೇಕ ಸಂಗತಿಗಳಿದ್ದರೂ, ಮಧುಮೇಹಿಗಳಿಗೆ ಕೆಲವು ವಿಶೇಷ ವಿಕಲ್ಪಗಳಿದೆ ಎಂದು ತಿಳಿದಿದೆ. ಮಧುಮೇಹಿಗಳಿಗೆ ಉತ್ತಮ ಪೌಷ್ಠಿಕ ಆಹಾರ ಬಹಳ ಮುಖ್ಯ. ಆಗ ಅವರು ತಮ್ಮ ಕಾಯಿಲೆಯ ಸ್ಥಿತಿಯನ್ನು ಉತ್ತಮವಾಗಿ ನಿಯಂತ್ರಿಸಿಕೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಲೇಖನ : ಡಾ. ಇರ್ಫಾನ್ ಶೇಖ್,

ಮುಖ್ಯಸ್ಥ ಅಡಲ್ಟ್ ನ್ಯೂಟ್ರಿಷನ್ ,

ವೈಜ್ಞಾನಿಕ ಮತ್ತು ವೈದ್ಯಕೀಯ ವ್ಯವಹಾರಗಳು,

ಅಬಾಟ್‌ನ ನ್ಯೂಟ್ರಿಷನ್ ಬಿಸಿನೆಸ್

Leave a Reply

Your email address will not be published. Required fields are marked *