ರಾಮನಗರದಲ್ಲಿ ಕಾಂಗ್ರೆಸ್ ಬೇರೂರಲು ಸಾಧ್ಯ ಇಲ್ಲ : ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ನನಗೆ ಇಲ್ಲ : ಎಚ್.ಡಿ. ಕುಮಾರಸ್ವಾಮಿ ಗುಡುಗು

ಹಾಯ್ ರಾಮನಗರ (hairamanagara.in) 13 ಫೆಬ್ರವರಿ 2022

ರಾಮನಗರ : ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ನನಗೆ ಇಲ್ಲ. ನನ್ನ ಬಗ್ಗೆ ಯಾರು ಚರ್ಚೆ ಮಾಡಲು ಸಾಧ್ಯವಿಲ್ಲ. ರಾಮನಗರದ ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ .ಕುಮಾರಸ್ವಾಮಿ ಗುಡುಗಿದರು.

ನಗರದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯಲ್ಲಿ ಶಾಸಕ ಸ್ಥಾನ ದುರುಪಯೋಗ ಪಡಿಸಿಕೊಂಡಿಲ್ಲ. ಯಾವುದೇ ಸುಳ್ಳು ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ಮಾಡಿಲ್ಲ. ರಾಮನಗರದಲ್ಲಿ ಶಾಸಕನಾಗಿ ಯಾವ ರೀತಿ ಬದುಕು ನಡೆಸಿದ್ದೇನೋ ಹಾಗೆ ಇವತ್ತು ಸಹ ಬದುಕುತ್ತಿದ್ದೇನೆ ಎಂದರು.

ಮಾಕಳಿ ಎತ ನೀರಾವರಿ ವಿಚಾರವಾಗಿ ಸಿಪಿವೈ ಬೆಂಬಲಿಗರ ಹೇಳಿಕೆ ಗಮನಿಸಿದ್ದೇನೆ. 15 ಕೋಟಿ ವೆಚ್ಚದ ಕಾರ್ಯಕ್ರಮ ಅಂತೇ, 15 ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದೆ ಎಂದಿದ್ದಾರೆ. ಅವರೇ ಅ ಯೋಜನೆ ಮಾಡಿದ್ದಾರೆ ಅಂತೇ ಅಲ್ಲೇ ನಿಮಗೆ ಅರ್ಥವಾಗಬೇಕಿತ್ತು. ಮಾಕಳಿ ಏತ ನೀರಾವರಿ ಯೋಜನೆ 28 ಕೋಟಿ ವೆಚ್ಚದ ಯೋಜನೆ, ಸಣ್ಣ ನೀರಾವರಿ ಇಲಾಖಾ ಯೋಜನೆ ಅದು. ನಾನು ಸಿಎಂ ಆಗಿದ್ದಾಗ ತೀರ್ಮಾನ ತೆಗೆದುಕೊಂಡಿದ್ದೇ, ಈಗಿನ ಸರ್ಕಾರದಲ್ಲಿ ನಾನೇ ಒಪ್ಪಿಗೆ ಕೊಡಿಸಿದೆ . ಗುದ್ದಲಿ ಪೂಜೆ ಮಾಡಿದಾಗ ಸೋಲ್ಲೆತ್ತಲಿಲ್ಲ. ಈ ಬಗ್ಗೆ ಏನು ಸಹ ಸಿಪಿವೈ ಬೆಂಬಲಿಗರು ಹೇಳಲಿಲ್ಲ ಎಂದು ತಿಳಿಸಿದರು.

ಈಗ ಕೆರೆಗೆ ನೀರು ತುಂಬುವ ವೇಳೆ ರಾಜಕೀಯ ಮಾಡಿಕೊಂಡು ಹೊರಟಿದ್ದಾರೆ. ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.

ನಾನು ಮೊನ್ನೆ ಚಾಮುಂಡೇಶ್ವರಿಯಲ್ಲಿ ಏನು ಹೇಳಿದ್ದೇನೆ. ನನ್ನ ಕಾರ್ಯಕರ್ತರು ಚಾಮುಂಡೇಶ್ವರಿಗೆ ಯಾರು? ಯಾರನ್ನ ಈ ಕ್ಷೇತ್ರದಲ್ಲಿ ನಾಯಕರು ಎಂದು ಪ್ರಶ್ನೀಸಿದ್ರು. ಅದಕ್ಕೆ ನಾನೇನು ಹೇಳಿದ್ದೇನೆ, ನಾನೇ ಬರ್ತೀನಿ ನಡೆಯಿರಿ ಎಂದಿದ್ದೇನೆ ಎಂದರು.

ನಾನೇ ಬರ್ತೀನಿ ನಡೆಯಿರಿ ಅಂದ್ರೆ ಚುನಾವಣೆ ನಿಲ್ಲಲು ಅಲ್ಲ. ಈ ಹಿಂದೆ ಏನ್ ನಡೆಸ್ದೇ ಹಾಗೆ ಚುನಾವಣೆ ನಡೆಸಲು ಬರ್ತೀನಿ. ಹತ್ತು ದಿನಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಕಳೆದ ಚುನಾವಣೆ ಕೆಲಸ ಮಾಡಿದ್ದೇನೆ, ಹಾಗೇ ನಾನು ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ, ನಾನು ಚುನಾವಣೆಗೆ ಬರ್ತೀನಿ ಅಂತಾ ಹೇಳಿದ್ದೀನಾ ನಾನೇ ಬರ್ತೀನಿ ನಡೆಯಿರಪ್ಪ ಅಂತೇಳಿದ್ದೇನೆ. ಅದನ್ನು ರೀತಿ ಅರ್ಥೈಸಿಕೊಂಡರೆ ನಾನೇನೂ ಮಾಡಲು ಸಾಧ್ಯ ಎಂದರು.

ರಾಮನಗರದಲ್ಲಿ ಕಾಂಗ್ರೆಸ್ ಬೇರೂರಲು ಸಾಧ್ಯ ಇಲ್ಲ. ಯಾವುದೇ ಕಾರಣಕ್ಕೂ ಇಲ್ಲಿ ಬೇರೂರಲು ಸಾಧ್ಯವಿಲ್ಲ. 24 ರಂದು ಅಧಿವೇಶನ ಮುಗಿಯುತ್ತದೆ. ಬಳಿಕ ರಾಮನಗರ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಸ್ಥಳೀಯ ಸಮಸ್ಯೆಗಳು ಸಣ್ಣಪುಟ್ಟ ಸಮಸ್ಯೆಗಳು ಇರ್ತಾವೆ. ಖುದ್ದಾಗಿ ಜನರ ಬಳಿ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚಿಸುವೆ ಎಂದರು.

ನಾವೇನು ತಪ್ಪು ಮಾಡಿದ್ದೇವಾ, ಜನಕ್ಕೆ ಏನು ಸಮಸ್ಯೆ ಇದೆ. ಎಲ್ಲವನ್ನೂ ಯಾವ ರೀತಿ ಬಗೆಹರಿಸಲು ಭೇಟಿ. ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಲು ನಿರ್ಧಾರ ಮಾಡಿದ್ದೇನೆ. ಯಾವುದೇ ಸಮಸ್ಯೆ ಇದ್ದರು ಸಣ್ಣಪುಟ್ಟ ಸಮಸ್ಯೆ ಇರ್ತಾವೆ. ಬಗೆಹರಿಸಲು ಸಾಧ್ಯವಿಲ್ಲದ ಸಮಸ್ಯೆಗಳಲ್ಲ ಅದನ್ನು ಬಗೆಹರಿಸುವೆ ಎಂದರು.

ರಾಮನಗರದ ಜನರು ಕಾರ್ಯಕರ್ತರು ಜೊತೆಗಿನ ಸಂಬಂಧವನ್ನು ನೂರಾರು ಬಾರಿ ಹೇಳಿದ್ದೇನೆ. ದೇವೇಗೌಡರ ಕುಟುಂಬಕ್ಕೂ ರಾಮನಗರ ಕ್ಷೇತ್ರಕ್ಕೂ ತಾಯಿ ಮಗುವಿನ ಸಂಬಂಧ ಇದೆ. ಮಗುವನ್ನು ಬೆಳೆಸಿದ ತಾಯಿಯೇ ಮಗುವಿನ ರಕ್ಷಣೆ ಮಾಡುತ್ತಾಳೆ. ಯಾವುದೇ ಕಾರಣಕ್ಕೂ ಮಗುವಿಗೆ ತೊಂದರೆಯಾಗಲು ಬಿಡಲ್ಲ. ಅಚಲವಾದ ವಿಶ್ವಾಸ ನನಗೆ ರಾಮನಗರ ಕ್ಷೇತ್ರದ ಮೇಲಿದೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆಂದು ತೀರ್ಮಾನ ಮಾಡ್ತೇನೆ. ಏನು ಮಾಡಬೇಕೆಂದು ತೀರ್ಮಾನ ಮಾಡ್ತೇನೆ ಎಂದರು.

ರಾಮನಗರ ನನ್ನ ಕರ್ಮ ಭೂಮಿ ರಾಜಕೀಯವಾಗಿ ನನಗೆ ಜನ್ಮ ನೀಡಿದ ಕ್ಷೇತ್ರವಿದು. ಯಾವುದೇ ಕಾರಣಕ್ಕೂ ಕ್ಷೇತವನ್ನೂ ಬಿಟ್ಟುಕೊಡಲ್ಲ. ಬೇರೆ ಪಕ್ಷಗಳ ಪಾಲಾಗಲು ಬಿಟ್ಟುಕೊಡುವುದಿಲ್ಲ ಎಂದರು.

ನಿಖಿಲ್ ಸ್ಪರ್ಧೆಯ ಬಗ್ಗೆ ಜೆಡಿಎಸ್ ಕಾರ್ಯಕರ್ತರುಗಳು ತೀರ್ಮಾನ ಮಾಡ್ತಾರೆ. ನನ್ನ ಕಾರ್ಯಕರ್ತರು ಬಲಾಢ್ಯರಾಗಿದ್ದಾರೆ. ಇನ್ನೂ ಸಮಯವಿದೆ ಆಗ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ. ಅವರು ಹೊರಗೆ ಬರಲು ಏನು ವಾತವರಣದ ಇರಬೇಕು, ಎಲ್ಲವನ್ನೂ ಸರಿಪಡಿಸೋಣ ಎಂದರು.

ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು  ತೆಗೆದುಕೊಂಡು ಶಾಲಾಕಾಲೇಜಗುಳನ್ನು ತೆರೆಯಲಿ. ಶಾಲಾ ಕಾಲೇಜುಗಳಲ್ಲಿ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಲಿ. ಈ ಹಿಂದಿನಂತೆ ಗಲಾಟೆ ನಡೆಯದಂತೆ ನೋಡಿಕೊಳ್ಳಬೇಕು. ಕಳೆದ ವಾರದ ರೀತಿಯಲ್ಲಿ ಮುಂದುವರಿಯಬಾರದು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಿ ಎಂದರು.

Leave a Reply

Your email address will not be published. Required fields are marked *