ಡಾ. ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಪ್ರತಿಮೆಯ ತಳಪಾಯ ಕಾಮಗಾರಿಗೆ ಚಾಲನೆ

ಹಾಯ್ ರಾಮನಗರ (hairamanagara.in) 15 ಫೆಬ್ರವರಿ 2022

ರಾಮನಗರ : ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ  ನಿರ್ಮಾಣವಾಗುತ್ತಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ  111 ಅಡಿ ಪ್ರತಿಮೆಯ ತಳಪಾಯ ಕಾಮಗಾರಿಗೆ ಚಾಲನೆ ನೀಡಿ ಕಾಮಗಾರಿಗಳ ಪರಿಶೀಲನೆಯನ್ನು ಮಂಗಳವಾರ ನಡೆಸಿದರು.

ಶ್ರಿಗಳ ಹುಟ್ಟೂರಿನಲ್ಲಿ 111 ಅಡಿ ಎತ್ತರದ ಪ್ರತಿಮೆ ಕಾಮಗಾರಿ ಪ್ರಾರಂಭವಾಗಿರುವುದು ಬಹಳ ಸಂತೋಷದ ವಿಷಯ.  ಶ್ರೀಗಳ ಮೂರ್ತಿ ಲೋಕಾರ್ಪಣೆಯಾದ ನಂತರ ಇದೊಂದು ಸುಂದರವಾದ  ಧಾರ್ಮಿಕ ಹಾಗೂ ಪ್ರವಾಸಿ  ಸ್ಥಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಶ್ರೀಗಳ 1111 ಅಡಿ ಎತ್ತರದ ಪ್ರತಿಮೆಯು ಸುಮಾರು 80 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಕಾಮಗಾರಿಯಲ್ಲಿನ ಕೆಲಸಗಳು ಯಾವುದೇ ವಿಳಂಬವಾಗದಂತೆ  ಸಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ಸಿದ್ದಗಂಗಾ ಮಠದ ಪೀಠಾಧಿಪತಿ ಸಿದ್ದಲಿಂಗಾ ಮಹಾಸ್ವಾಮೀಜಿಗಳು, ಗಣ್ಯರಾದ ವಿಜಯೇಂದ್ರ ಹಾಗೂ ಇನ್ನಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *