ಬಿಡದಿ : ಫೆ.17 ರಂದು ವಿದ್ಯುತ್ ಪೂರೈಕೆ ವ್ಯತ್ಯಯ

ಹಾಯ್ ರಾಮನಗರ (hairamanagara.in) 15 ಫೆಬ್ರವರಿ 2022

ರಾಮನಗರ : ಬಿಡದಿ ಉಪವಿಭಾಗ ವ್ಯಾಪ್ತಿಯ ಕೆ.ಐ.ಎ.ಡಿ.ಬಿ ಫೀಡರ್ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಫೆಬ್ರವರಿ 17 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಕೆ.ಐ.ಎ.ಡಿ.ಬಿ ಶಾನುಮಂಗಲ ಇಂಡಸ್ಟ್ರೀಯಲ್ ಏರಿಯಾ, ಬಾಷ್ ರಸ್ತೆ, ಶಾನುಮಂಗಲ, ತಾಳಕುಪ್ಪೆ, ಚಿಕ್ಕಕುಂಟನಹಳ್ಳಿ, ಅಂಚಿಪುರ, ದೊಡ್ಡಕುಂಟನಹಳ್ಳಿ, ಭದ್ರಾಪುರ, ಹಕ್ಕಿಪಿಕ್ಕಿ ಕಾಲೋನಿ, ಈಗಲ್‍ಟನ್, ಮಾರುತಿನಗರ, ಕೊಡಿಯಾಲ ಕರೇನಹಳ್ಳಿ, ಬೈಚೋಹಳ್ಳಿ, ಗೊಲ್ಲರಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸುವಂತೆ ರಾಮನಗರ ವಿಭಾಗದ ಕಾರ್ಯನಿರ್ವಹಕ ಎಂಜಿನಿಯರ್  ಕೋರಿದ್ದಾರೆ.

Leave a Reply

Your email address will not be published. Required fields are marked *