ಸಂತ ಸೇವಾಲಾಲ್ ಬಂಜಾರ ಸಮುದಾಯ ಅಭಿವೃದ್ಧಿಗೆ ಶ್ರಮಿಸಿದವರು : ಆರ್. ಮೂರ್ತಿ ನಾಯಕ್

ಹಾಯ್ ರಾಮನಗರ (hairamanagara.in) 15 ಫೆಬ್ರವರಿ 2022

ರಾಮನಗರ : ಬಂಜಾರ ಸಮುದಾಯವನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ. ಸಂತ ಸೇವಾಲಾಲ್ ಅವರ ಪರಿಶ್ರಮದಿಂದ ಬಂಜಾರ ಜನಾಂಗದವರು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಹಾಗೂ ಎಲ್ಲಾ ಸಮುದಾಯದವರ ಜೊತೆ ಒಂದಾಗಿ ಬದುಕು ನಡೆಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾದೇಶಿಕ ಬಂಜಾರ ಸೇವಾ ಸಂಘದ ಅಧ್ಯಕ್ಷ ಆರ್. ಮೂರ್ತಿ ನಾಯಕ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ “ಶ್ರೀ ಸಂತ ಸೇವಲಾಲ್ ಜಯಂತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂತ ಸೇವಾಲಾಲ್ ಅವರು ಹಿಂದುಳಿದ ಸಮುದಾಯ ಹಾಗೂ ಕಾಡಿನ ಅಂಚಿನಲ್ಲಿ ಜೀವನ ನಡೆಸುತ್ತಿರುವ ಜನಾಂಗದವರ ಅಭಿವೃದ್ಧಿಗಾಗಿ ಶ್ರಮಿಸಿದರು ಎಂದು ಹೇಳಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್. ಹರೀಶ್ ಮಾತನಾಡಿ ಸಂತ ಸೇವಲಾಲ್ ಅವರು ಕೇವಲ ಬಂಜಾರ ಜನಾಂಗಕ್ಕೆ ಸೇರಿದವರಲ್ಲ ಅವರು ಸಮಾಜದ ಎಲ್ಲಾ ಹಿಂದುಳಿದ ಸಮುದಾಯದವರ ಬೆಳವಣಿಗೆಗೆ ಹಾಗೂ ಅವರ ಅಭಿವದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಬಂಜಾರ ಜನಾಂಗದವರ ಕಲೆ ಮತ್ತು ಸಂಸ್ಕøತಿ ವಿಭಿನ್ನವಾಗಿದೆ, ಅವರ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.

ಸಾಹಿತಿ ಡಾ. ಅಂಕನಹಳ್ಳಿ ಪಾರ್ಥ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ ಕಾಳಯ್ಯ, ಜನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತೆ ಚಿಕ್ಕಮ್ಮ, ವಕೀಲರು ಹಾಗೂ ದಲಿತ ಮುಖಂಡ ಮಲ್ಲಿಕಾರ್ಜುನ್, ಬಂಜಾರ ಸಮುದಾಯದ ಮುಖಂಡರು ಹಾಗೂ ಕಲಾ ತಂಡದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *