ಸಾವಂದಿ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವರ ಬ್ರಹ್ಮರಥೋತ್ಸವ
ಹಾಯ್ ರಾಮನಗರ (hairamanagara.in) 15 ಫೆಬ್ರವರಿ 2022
ಮಾಗಡಿ : ತಾಲೂಕಿನ ಪ್ರಸಿದ್ದ ಶ್ರೀ ಸಾವಂದಿ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವರ ಚಿಕ್ಕಬ್ರಹ್ಮರಥೋತ್ಸವ ಮಂಗಳವಾರ ಬೆಳಗ್ಗೆ 10-45 ಕ್ಕೆ ನೆರವೇರಿತು.
ಆರ್‍ಐ ಟಿ. ವೆಂಕಟೇಶ್ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಬಾಳೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ದೇವಾಲಯದ ಸುತ್ತ ಒಂದು ಭಾರಿ ಚಿಕ್ಕರಥೋತ್ಸವ ಏಳೆದು ಸಂಜೆ ಮಡಿ ತೇರು ಏಳೆಯಲಾಯಿತು.
ಪ್ರತಿವರ್ಷ ಅದ್ದೂರಿಯಿಂದ ನಡೆಯುತ್ತಿದ್ದ ಬ್ರಹ್ಮರಥೋತ್ಸ ಈ ಭಾರಿ ಕೊವಿಡ್ ನಿಂದಾಗಿ ಸರಳವಾಗಿ ಚಿಕ್ಕರಥೋತ್ಸವ ನಡೆಯಿತು. ದೇವಾಲಯದಲ್ಲಿ ದೇವರಿಗೆ ವಿಶೇಷ ಹೂವಿನ ಅಲಂಕಾರ, ಪೂಜಾ ಕುಣಿತ, ರುದ್ರಾಭಿಷೇಕ, ರಥಾಂಗಹೋಮ, ನಂದಿ ವಾಹನೋತ್ಸವ, ಆನೆ ಉತ್ಸವ, ನಂದಿ ಉಯ್ಯಾಲೆ ಉತ್ಸವ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು. ಸಾವಂಧಿ ವೀರಭದ್ರಸ್ವಾಮಿ ದಾಸೋಹ ಸಮಿತಿ ವತಿಯಿಂದ ರಥೋತ್ಸವಕ್ಕೆ ಭಾಗವಹಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತರು ರಥೋತ್ಸವ ಏಳೆದ ನಂತರ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಕೋವಿಡ್ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು, ಪ್ರತಿವರ್ಷದಂತೆ ಮಜ್ಜಿಗೆ, ಪಾನಕ, ಕೊಸಂಬರಿ ವಿತರಣೆ ನಡೆಯಲಿಲ್ಲ, ಬಿಸಿಲಿನ ತಾಪಕ್ಕೆ ಭಕ್ತರು ಬೆಂದು ಹೈರಾಣರಾದರು.
ಅರ್ಚಕರಾದ ಮೃಂತ್ಯೂಂಜಯ ಆರಾಧ್ಯ, ವಿಎ. ಅಕ್ಷತ,ಕಾವ್ಯ, ಅರ್ಪಿತ, ಧನುಷ್, ದೊಡ್ಡಿ ಜಗದೀಶ್, ಮೈಸೂರು ಲೋಕೇಶ್, ವಕೀಲ ವೀರಭದ್ರಯ್ಯ ಇತರರು ಇದ್ದರು.
