ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮ ದಿನಾಚರಣೆ ಅಂಗವಾಗಿ ದಿನಸಿ ವಿತರಣೆ

ಹಾಯ್ ರಾಮನಗರ (hairamanagara.in) 16 ಫೆಬ್ರವರಿ 2022

ಚನ್ನಪಟ್ಟಣ : ಕರುನಾಡ ಭೂಪತಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿಮಾನಿ ಸಂಘದ ವತಿಯಿಂದ ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ರವರ 45 ನೇ ಜನ್ಮದಿನವನ್ನು ಬುಧವಾರ ತಾಲೂಕಿನ ಪ್ರಸಿದ್ಧ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕ್ಷೇತ್ರದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಕ್ಷೇತ್ರದಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸೋಹಕ್ಕೆ ದಿನಸಿ ಹಾಗೂ ತರಕಾರಿಗಳನ್ನು ಸಲ್ಲಿಸಿದರು. ಈ ವೇಳೆ ತಮ್ಮ ನೆಚ್ಚಿನ ನಟನ ಆರೋಗ್ಯಭಾಗ್ಯಕ್ಕೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಅಭಿಮಾನಿ ಸಂಘದ ವತಿಯಿಂದ ಅನ್ನದಾಸೋಹದ ಪದಾರ್ಥಗಳನ್ನು ಸ್ವೀಕರಿಸಿ ಮಾತನಾಡಿದ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ, ಚಿತ್ರನಟ ದರ್ಶನ್ ರವರು ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ನಟನೆಯ ಜೊತೆಗೆ ಸಾಮಾಜಿಕ ತುಡಿತ ಹೊಂದಿರುವ ಅವರದ್ದು ಮೇರು ವ್ಯಕ್ತಿತ್ವ. ಅವರ ಸಾಮಾಜಿಕ ಕಳಕಳಿಯ ವ್ಯಕ್ತಿತ್ವವೇ ಅವರ ಬೆಳವಣಿಗೆಗೆ ಮೂಲ ಕಾರಣ. ಅವರ ಅಭಿಮಾನಿಗಳು ಸಹ ಅವರದೇ ದಾರಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು.

ಇತ್ತೀಚಿಗೆ ಹುಟ್ಟುಹಬ್ಬ ಎಂಬುದು ಆಡಂಬರವಾಗುತ್ತಿದೆ. ಆದರೆ, ತಮ್ಮ ನೆಚ್ಚಿನ ನಟ ಜನ್ಮದಿನದ ಪ್ರಯುಕ್ತ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನದಾಸೋಹಕ್ಕೆ ಪಡಿತರ ವಸ್ತುಗಳನ್ನು ನೀಡುವ ಮೂಲಕ ದರ್ಶನ್ ಅಭಿಮಾನಿಗಳು ಸಾರ್ಥಕ ಕೆಲಸ ಮಾಡಿದ್ದಾರೆ. ತಾಯಿ ಚಾಮುಂಡೇಶ್ವರಿ ದರ್ಶನ್ ತೂಗುದೀಪರವರಿಗೆ ಹಾಗೂ ಅವರ ಅಭಿಮಾನಿ ಬಳಗಕ್ಕೆ ಒಳಿತು ಮಾಡಲಿ ಎಂದು ಶುಭಹಾರೈಸಿದರು.

ಈ ವೇಳೆ ಸಂಘದ ಅಧ್ಯಕ್ಷ ಛಾಯಾ ಪ್ರಸಾದ್, ಪದಾಧಿಕಾರಿಗಳಾದ ಪ್ರಪುಲ್ಲ(ಪ್ರಪು) ,ಮಂಜೇಶ್,ಪವನ್, ಶಿವು, ಯೋಗಿ, ವಿಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *