ಫೆ.19ರಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಹಾಗೂ ರಾಮನಗರ ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟಿನ ವತಿಯಿಂದ ಶಿವಾಜಿ ಜಯಂತಿ
ಹಾಯ್ ರಾಮನಗರ (hairamanagara.in) 16 ಫೆಬ್ರವರಿ 2022
ರಾಮನಗರ : ಫೆ. 19 ರ ಶನಿವಾರ ಬೆಳಿಗ್ಗೆ 8-30 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ 395 ನೇ ವರ್ಷದ ಜಯಂತಿಯನ್ನು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಭಾಗವಿರುವ ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟಿನ ಕಛೇರಿಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅಂದು ಶನಿವಾರ ಜಿಲ್ಲೆಯ ಸಮಾಜದ ಎಲ್ಲಾ ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಅಧ್ಯಕ್ಷ ಸೋಮಶೇಖರ್ ರಾವ್ ಕಾಂಬ್ಳೆ, ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟಿನ ಅಧ್ಯಕ್ಷ ಎಲ್. ನಾರಾಯಣರಾವ್ ಚೌಹಾಣ್ ತಿಳಿಸಿದ್ದಾರೆ.