ಚನ್ನಪಟ್ಟಣ : ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಸಭೆ
ಹಾಯ್ ರಾಮನಗರ (hairamanagara.in) 17 ಫೆಬ್ರವರಿ 2022
ಚನ್ನಪಟ್ಟಣ : ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಸಭೆ ಅಧ್ಯಕ್ಷ ಕೆ.ಬಿ. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾ.ಪಂ.ನ ವಾಣಿಜ್ಯ ಮಳಿಗೆಗಳ ಮಾಲೀಕರು ಬಾಡಿಕೆ ಕಟ್ಟದ್ದರಿಂದ ಅಡ್ವಾನ್ಸ್ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಮಾಡುವಂತೆ ಎ.ಸತೀಶ್ ಮತ್ತು ಕೆ.ಪಿ. ಪ್ರವೀಣ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿಡಿಒ ಭಾಗ್ಯಲಕ್ಷ್ಮಮ್ಮ, ಹಲವು ಬಾರಿ ಬಾಡಿಗೆ ಕಟ್ಟುವಂತೆ ನೋಟೀಸ್ ನೀಡಲಾಗಿದ್ದು, ಇದಕ್ಕೆ ಮಳಿಗೆ ಮಾಲೀಕರು ಸ್ಪಂದಿಸಿಲ್ಲ. ಅದ್ದರಿಂದ ಸಭೆಯ ನಿರ್ಣಯಿಸಿದರೇ ಅದಕ್ಕನುಣವಾಗಿ ಕ್ರಮ ಜರುಗಿಸಲಾಗುವುದೆಙದರು.
ಎಲ್ಲಾ ಸರ್ವ ಸದ್ಯರ ಅಭಿಪ್ರಾಯದಂತೆ ಜರೂರಾಗಿ ಪಂಚಾಯಿತಿಯ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡುವಂತೆ ಅಧ್ಯಕ್ಷ ಕೆ.ಬಿ. ರಾಜಣ್ಣ ಪಿಡಿಒಗೆ ಸೂಚನೆ ನೀಡಿದರು.
ಕೋಡಂಬಳ್ಳಿಯಲ್ಲಿ ಯಾವುದೇ ಕೋಳಿ ಅಂಗಡಿಗಳು ಪರವಾನಗಿ ಪಡೆದಿಲ್ಲ. ಅಲ್ಲದೇ ತ್ಯಾಜ್ಯವನ್ನು ಕೋಡಂಬಹಳ್ಳಿ ಕೆರೆ ಏರಿಯ ಮೇಲೆ ಸುರಿಯುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಎ.ಸತೀಶ್ ಸಭೆಯ ಗಮನ ಸೆಳೆದರು.
ಇದಕ್ಕೆ ಸಮಜಾಯಿಸಿ ನೀಡಿದ ಪಿಡಿಒ ಭಾಗ್ಯಲಕ್ಷ್ಮಮ್ಮ ಈಗಾಗಲೇ ಕೋಳಿ ಅಂಗಡಿಗಳಿಗೆ ನೋಟವನ್ನು ನೀಡಲಾಗಿದೆ. ಲೈಸನ್ಸ್ ಪಡೆಯದಿದ್ದರೇ ಅವರ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಲಾಗುವುದು. ಕೆರೆಯ ಏರೆಯ ಮೇಲೆ ತ್ಯಾಜ್ಯ ಹಾಕುವ ಕೋಳಿ ಅಂಗಡಿಗಳ ಮೇಲೆ ಪರಿಸರ ಕಾಯಿದೆಯಡಿ ದಂಡ ಮತ್ತು ಕ್ರಮಿನಲ್ ಮೊಕದಮೆ ದಾಖಲು ಮಾಡಲಾಗುವುದು. ಈ ಬಗ್ಗೆ ಕೋಳಿ ಅಂಗಡಿ ಮಾಲೀಕರು ಮತ್ತು ಕೋಳಿ ಅಂಗಡಿಗಳಿಗೆ ಬಾಡಿಗೆ ನೀಡಿರುವ ಮಲೀಕರು ಎಚ್ಚೆತ್ತುಕೊಳ್ಳಬೇಕೆಂದರು.

ನರೇಗಾ ಯೋಜನೆಯಡಿ ಕಡಿಮೆ ಜಾಗದಲ್ಲಿ ಹತ್ತಾರು ಕಾಮಗಾರಿ ಮಾಡಿರುವುದಲ್ಲದೇ, ಪಂಚಾತಿಗೆ ಬಂದು ಸದಸ್ಯರು ಮತ್ತು ನೌಕರರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗೆ ಮನ್ನಣೆ ನೀಡದೆ ಅಕ್ರಮವಾಗಿ ನರೇಗಾ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಪಡೆದುಕೊಂಡಿರುವ ಸಾಮಗ್ರಿ ಹಣವನ್ನು ಮರು ಪಾವಾತಿ ಮಾಡಿಕೊಳ್ಳಬೇಕೆಂದು ಸದಸ್ಯೆ ಲಕ್ಷ್ಮಮ್ಮ ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ಕೆ.ಪಿ. ಪ್ರವೀಣ್ ಕುಮಾರ್, ಎ. ಸತೀಶ್, ಶಿಲ್ಪ, ಬಿ. ರವಿ, ಗುರುಮೂರ್ತಿ ಜಿ. ಸೇರಿದಂತೆ ಬಹುತೇಕ ಸದಸ್ಯರು ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಕೆ.ಬಿ. ರಾಜಣ್ಣ, ಪಂಚಾಯಿತಿಗೆ ಬಂದು ಬೆದರಿಕೆಯೊಡ್ಡುವ ಮತ್ತು ನಕಲಿ ದಾಖಲೆಗಳನ್ನ ಸೃಷ್ಟಿಸಿ ಹಣ ಪಡೆದುಕೊಂಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೋಳ್ಳಲೇ ಬೇಕು. ಇಲ್ಲವಾದಲ್ಲಿ ಭ್ರಷ್ಟರು ಪ್ರಭುತ್ವ ಮೆರೆಯಲಿದ್ದಾರೆ. ಇಲ್ಲಿ ಜಾತಿ, ಮತ ಎನ್ನದೆ ಕಾನೂನಿನ ಚೌಕಟ್ಟಿನೊಳಗೆ ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚನೆ ನೀಡಿದರು.
ಉಪಾಧ್ಯಕ್ಷೆ ಜ್ಯೋತಿ ಕೆ.ಎಂ. ಲೆಕ್ಕ ಸಹಾಯಕ ಚಿಕ್ಕಣ್ಣ, ಬಿಲ್ ಕಲೆಕ್ಟರ್ ವೆಂಕಟೇಶ್ ಉಪಸ್ಥಿತರಿದ್ದರು.