ಜಾಗ್ವಾರ್ ಲ್ಯಾಂಡ್ ರೋವರ್ NVIDIA ಜೊತೆ ಪಾಲುದಾರಿಕೆಯನ್ನು ಪ್ರಕಟಿಸಿದೆ

ಹಾಯ್ ರಾಮನಗರ (hairamanagara.in) 17 ಫೆಬ್ರವರಿ 2022

● ಜಾಗ್ವಾರ್ ಲ್ಯಾಂಡ್ ರೋವರ್‍ನ ರೀಮ್ಯಾಜಿನ್ ಕಾರ್ಯತಂತ್ರದ ಭಾಗವಾಗಿ, ಈ ಪಾಲುದಾರಿಕೆಯು 2025 ರಿಂದ ಗ್ರಾಹಕರಿಗೆ ಆಧುನಿಕ ಐಷಾರಾಮಿ ಅನುಭವವನ್ನಾಗಿ ಪರಿವರ್ತಿಸುತ್ತದೆ
● NVIDIA ಡ್ರೈವ್‍ನಲ್ಲಿ ತಯಾರಿಸಲಾಗುವ ಎಲ್ಲಾ ಮುಂಬರುವ ವಾಹನಗಳಿಗೆ ಎರಡೂ ಕಂಪನಿಗಳ ಸಾಫ್ಟ್‍ವೇರ್ ತಜ್ಞರು ಜಂಟಿಯಾಗಿAI-ಚಾಲಿತ ಸ್ವಾಯತ್ತ ಚಾಲನೆ ಮತ್ತು ಸಂಪರ್ಕಿತ ಸೇವೆಗಳನ್ನು ಅಭಿವೃದ್ಧಿಪಡಿಸುತ್ತಾರೆ
● ಅತ್ಯಾಧುನಿಕ ಸುರಕ್ಷತೆ ಮತ್ತು ಅನನ್ಯ, ಬ್ರ್ಯಾಂಡ್-ಕೇಂದ್ರಿತ ಡಿಜಿಟಲ್ ಸೇವೆಗಳನ್ನು NVIDIA AI ಸಕ್ರಿಯಗೊಳಿಸಿದೆ
.

ಬೆಂಗಳೂರು : ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಗ್ರಾಹಕರಿಗೆ ಅತ್ಯಾಧುನಿಕ ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಮ್ ಜೊತೆಗೆ AI ಸಕ್ರಿಯಗೊಳಿಸಿದ ಸೇವೆಗಳು ಮತ್ತು ಅನುಭವಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಮತ್ತು ವಿತರಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಕಂಪ್ಯೂಟಿಂಗ್‍ನಲ್ಲಿ ಅಗ್ರಮಾನ್ಯವಾಗಿರುವ NVIDIA ನೊಂದಿಗೆ ಬಹು-ವಾರ್ಷಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ರಚಿಸಿದೆ.

2025 ರಿಂದ, -ಸಕ್ರಿಯ ಸುರಕ್ಷತೆ, ಸ್ವಯಂಚಾಲಿತ ಚಾಲನೆ ಮತ್ತು ಪಾರ್ಕಿಂಗ್ ವ್ಯವಸ್ಥೆಗಳು ಮತ್ತು ಚಾಲಕ ಸಹಾಯ ವ್ಯವಸ್ಥೆಗಳ ವ್ಯಾಪಕ ಶ್ರೇಣಿಯನ್ನು ನೀಡಲು ಆಧುನಿಕ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ವಾಹನಗಳನ್ನು NVIDIA DRIVE™ ಸಾಫ್ಟ್‍ವೇರ್-ವ್ಯಾಖ್ಯಾನಿತ ಪ್ಲಾಟ್‍ಫಾರ್ಮ್‍ನಲ್ಲಿ ನಿರ್ಮಿಸಲಾಗುವುದು. ಈ ವ್ಯವಸ್ಥೆಯು, ವಾಹನದ ಒಳಗೆ ಚಾಲಕ ಮತ್ತು ಪ್ರಯಾಣಿಕರ ಪರಿವೀಕ್ಷಣೆ ಮತ್ತು ವಾಹನದ ಪರಿಸರದ ಸುಧಾರಿತ ದೃಶ್ಯೀಕರಣ ಸೇರಿದಂತೆ AI ವೈಶಿಷ್ಟ್ಯಗಳನ್ನು ನೀಡುತ್ತದೆ.

ಈ ಬೃಹತ್-ಪ್ರಮಾಣದ ಪರಿಹಾರವು NVIDIA DRIVE Hyperion™ ಅನ್ನು ಆಧರಿಸಿದ್ದು, ಇದು DRIVE Orin™ ಕೇಂದ್ರೀಕೃತ AV ಕಂಪ್ಯೂಟರ್, ಡ್ರೈವ್ AV ಮತ್ತು ಡ್ರೈವ್ IX ಸಾಫ್ಟ್‍ವೇರ್; ಸುರಕ್ಷತೆ, ಭದ್ರತೆ ಮತ್ತು ನೆಟ್‍ವರ್ಕಿಂಗ್ ವ್ಯವಸ್ಥೆಗಳು; ಜೊತೆಗೆ, ಸರೌಂಡ್ ಸೆನ್ಸರ್‍ಗಳನ್ನು ಒಳಗೊಂಡಿದೆ;. ಡ್ರೈವ್ ಓರಿನ್ ಕಾರಿನ AV ಮೆದುಳು ಆಗಿದ್ದು ಇದು ಜಾಗ್ವಾರ್ ಲ್ಯಾಂಡ್ ರೋವರ್‍ನ ಆಪರೇಟಿಂಗ್ ಸಿಸ್ಟಮ್ ಅನ್ನು ನಡೆಸಿದರೆ, ಅದರ ಡ್ರೈವ್ ಹೈಪರಿಯನ್ ಕೇಂದ್ರ ನರಮಂಡಲವಾಗಿದೆ.

ಜಾಗ್ವಾರ್ ಲ್ಯಾಂಡ್ ರೋವರ್ AV ಮಾದರಿಗಳಿಗೆ ತರಬೇತಿ ನೀಡಲು NVIDIA DGX™ ನೊಂದಿಗೆ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಡೇಟಾ ಸೆಂಟರ್ ಪರಿಹಾರಗಳನ್ನು ಮತ್ತು ನೈಜ-ಸಮಯದ ಭೌತಿಕವಾಗಿ ನಿಖರವಾದ ಸಿಮ್ಯುಲೇಶನ್‍ಗಾಗಿ NVIDIA Omniverse™ ನಲ್ಲಿ ನಿರ್ಮಿಸಲಾದ ಡ್ರೈವ್ ಸಿಮ್ ಸಾಫ್ಟ್‍ವೇರ್ ಅನ್ನು ಸಹ ನಿಯಂತ್ರಿಸುತ್ತದೆ. ಜಾಗ್ವಾರ್ ಲ್ಯಾಂಡ್ ರೋವರ್ ನ ಸಾಫ್ಟ್‍ವೇರ್-ವ್ಯಾಖ್ಯಾನಿತ ವೈಶಿಷ್ಟ್ಯಗಳು ಮತ್ತು ಅದರ ಸಂಪೂರ್ಣ ಪರಿಶೀಲನೆ ಮತ್ತು ಊರ್ಜಿತಗೊಳಿಸುವಿಕೆಯ ಸಂರಚನೆಯು ಓವರ್-ದಿ-ಏರ್ ಸಾಫ್ಟ್‍ವೇರ್ ನವೀಕರಣಗಳ ಮೂಲಕ ವಾಹನದ ಜೀವನದುದ್ದಕ್ಕೂ ನವೀನ ಸಹಾಯಕ ಮತ್ತು ಸ್ವಯಂಚಾಲಿತ ಡ್ರೈವಿಂಗ್ ಸೇವೆಗಳ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.

ಜಾಗ್ವಾರ್ ಲ್ಯಾಂಡ್ ರೋವರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಿಯೆರಿ ಬೊಲೊರೆ ಹೇಳಿದರು: “ನಮ್ಮ ರೀಮ್ಯಾಜಿನ್ ತಂತ್ರವನ್ನು ಬಳಕೆಗೆ ತರಲು, ಗುಣಮಟ್ಟ, ತಂತ್ರಜ್ಞಾನ ಮತ್ತು ಸುಸ್ಥಿರತೆಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸಲು ಉದ್ಯಮದ ಧುರೀಣರಾದ NVIDIA ನೊಂದಿಗೆ ಸಹಯೋಗ ಮತ್ತು ಜ್ಞಾನ-ಹಂಚಿಕೆ ಅತ್ಯಗತ್ಯ. “

“ಅತ್ಯಂತ ವಿವೇಚನಾಶೀಲ ಗ್ರಾಹಕರಿಗೆ ಜಾಗ್ವಾರ್ ಲ್ಯಾಂಡ್ ರೋವರ್ ವಿಶ್ವದ ಅತ್ಯಂತ ಅಪೇಕ್ಷಣೀಯ ಐಷಾರಾಮಿ ವಾಹನಗಳು ಮತ್ತು ಸೇವೆಗಳ ಸೃಷ್ಟಿಕರ್ತರಾಗಲಿದೆ. ವ್ಯವಹಾರವು ನಿಜವಾದ ಜಾಗತಿಕ, ಡಿಜಿಟಲ್ ಪವರ್‍ಹೌಸ್ ಆಗಿ ರೂಪಾಂತರವನ್ನು ಮುಂದುವರೆಸುತ್ತಿದ್ದಂತೆ NVIDIA ದೊಂದಿಗಿನ ನಮ್ಮ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆಯು ನಮ್ಮ ಭವಿಷ್ಯದ ವಾಹನಗಳಿಗೆ ಸಂಭಾವ್ಯ ಜಗತ್ತನ್ನು ತೆರೆದಿಡುತ್ತದೆ. “

NVIDIA ಸಂಸ್ಥಾಪಕರು ಮತ್ತು CEO ಆದ ಜೆನ್ಸನ್ ಹ್ಯುವಾಂಗ್ ಹೇಳಿದರು: “ಮುಂದಿನ ತಲೆಮಾರಿನ ಕಾರುಗಳು ವಾಹನೋದ್ಯಮವನ್ನು ಅತಿದೊಡ್ಡ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಉದ್ಯಮಗಳಲ್ಲಿ ಒಂದಾಗಿ ಪರಿವರ್ತಿಸುತ್ತವೆ. ಸಾಫ್ಟ್‍ವೇರ್-ವ್ಯಾಖ್ಯಾನಿತ, ಪ್ರೊಗ್ರಾಮೆಬಲ್ ಕಾರುಗಳ ಸಂಗ್ರಹಗಳು ವಾಹನಗಳ ದೀರ್ಘಬಾಳಿಕೆಗಾಗಿ ಹೊಸ ಕಾರ್ಯಾಚರಣೆಗಳು ಮತ್ತು ಸೇವೆಗಳನ್ನು ನೀಡುತ್ತವೆ. ಸಾರಿಗೆಯ ಭವಿಷ್ಯವನ್ನು ಮರುರೂಪಿಸಲು ಮತ್ತು ಅತ್ಯಾಧುನಿಕ ಕಾರುಗಳನ್ನು ರಚಿಸಲು ಜಾಗ್ವಾರ್ ಲ್ಯಾಂಡ್ ರೋವರ್‍ನೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ. “

ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಪೂರೈಕೆ ಸರಪಳಿ, ಉತ್ಪನ್ನಗಳು ಮತ್ತು ಕಾರ್ಯಾಚರಣೆಗಳಲ್ಲಿ 2039 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

Leave a Reply

Your email address will not be published. Required fields are marked *