ಕನ್ನಡ ಸಾಹಿತ್ಯ ಪರಿಷತ್ ಅನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡಲಾಗುವುದು : ನಾಡೋಜ ಡಾ. ಮಹೇಶ ಜೋಶಿ
ಹಾಯ್ ರಾಮನಗರ (hairamanagara.in) 18 ಫೆಬ್ರವರಿ 2022
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಅನ್ನು ಜನಸಾಮಾನ್ಯರ ಸಂಸ್ಥೆಯನ್ನಾಗಿಸುವ ನಿಟ್ಟಿನಲ್ಲಿ ಒಂದು ಕೋಟಿ ಸದಸ್ಯತ್ವ ಹೊಂದುವ ಗುರಿ ಹೊಂದ ಲಾಗಿದೆ. ಹೀಗಾಗಿ, ಈಗ ಇರುವ ಸದಸ್ಯ ತ್ವದ ಅರ್ಜಿಯನ್ನು ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಲು ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ
ಬೈ–ಲಾ ತಿದ್ದುಪಡಿಗೆ ಸಂಬಂಧಿ ಸಿದಂತೆ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಸಾಹಿತಿಗಳು, ಸಂಸ್ಕೃತಿ ಚಿಂತ ಕರು, ಜಾನಪದ ವಿದ್ವಾಂಸರು, ಕಲಾವಿ ದರು, ಕನ್ನಡ ಪರ ಹೋರಾಟಗಾರರೊಂದಿಗೆ ಆಯೋಜಿಸಿದ್ದ ಸಭೆ ಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಬೈ–ಲಾದಲ್ಲಿ ಸೂಚಿಸಿ ರುವಂತೆ ಕನ್ನಡ ಓದು ಬರಹ ಬಲ್ಲ ವ್ಯಕ್ತಿಗಳಿಗೆ ಸದಸ್ಯತ್ವ ನೀಡುವ ಸಂಬಂಧ ನಿಗದಿಪಡಿಸಬಹುದಾದ ಶೈಕ್ಷಣಿಕ ಮಾನದಂಡಗಳ ಕುರಿತು ತಿದ್ದುಪಡಿ ತರುವುದು ಅಗತ್ಯವಾಗಿದೆ ಎಂದರು.
ಚುನಾವಣಾ ಸುಧಾರಣೆಗೆ ಸಂಬಂಧಿ ಸಿದಂತೆ ಈ ಹಂತದಲ್ಲಿ ತಿದ್ದುಪಡಿ ಮಾಡುವುದಿಲ್ಲ. 2026ರಲ್ಲಿ ಚುನಾವಣೆ ನಡೆಯಲಿದೆ. ಈ ನಾಲ್ಕು ವರ್ಷಗಳಲ್ಲಿ ಅನೇಕ ತಂತ್ರಜ್ಞಾನಗಳು ಬದಲಾವಣೆಯಾಗುವ ಸಾಧ್ಯತೆಗಳಿವೆ. ಜತೆಗೆ, ಕಾನೂ ನಾತ್ಮಕ ಬದಲಾವಣೆಗಳು ಆಗಬಹುದು ಮತ್ತು ಚುನಾವಣಾ ಆಯೋಗ ಹೊಸ ಆವಿಷ್ಕಾರ, ಪ್ರಯೋಗಗಳನ್ನು ನಡೆಸಬಹುದಾಗಿರುವುದರಿಂದ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದ ತಿದ್ದುಪಡಿ ಕಾರ್ಯವನ್ನು 2025ರಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉದ್ದೇಶಿತ ತಿದ್ದುಪಡಿಗಳನ್ನು ಫೆ.24 ರಂದು ನಡೆಯುವ ಕಾರ್ಯಕಾರಿ ಸಮಿತಿ ಯಲ್ಲಿ ಮಂಡಿಸಲಾಗುವುದು ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ: ಕಲಾವಿದರಿಗೆ ವಿನಾಯಿತಿ ನೀಡಲು ಸಲಹೆ
ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವಕ್ಕೆ ನಿಗದಿಪಡಿಸಿರುವ ಶೈಕ್ಷಣಿಕ ಮಾನದಂಡಗಳಿಗೆ ಸಂಬಂಧಿಸಿದಂತೆ ಜನಪದ, ರಂಗಭೂಮಿ, ಚಿತ್ರಕಲಾ, ಕರ ಕುಶಲ ಕಲಾವಿದರಿಗೆ ವಿನಾಯಿತಿ ನೀಡ ಬೇಕು ಎಂದು ಸಾಹಿತಿಗಳು, ಚಿಂತಕರು, ಕಲಾವಿದರು ಅಭಿಪ್ರಾಯಪಟ್ಟರು.
ಬೈ–ಲಾ ತಿದ್ದುಪಡಿಗೆ ಸಂಬಂಧಿ ಸಿದಂತೆ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಸಾಹಿತಿಗಳು, ಸಂಸ್ಕೃತಿ ಚಿಂತ ಕರು, ಜಾನಪದ ವಿದ್ವಾಂಸರು, ಕಲಾವಿ ದರು, ಕನ್ನಡ ಪರ ಹೋರಾಗಾ ರರೊಂದಿಗೆ ಆಯೋಜಿಸಿದ್ದ ಸಭೆ ಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಮಾನದಂಡಗಳನ್ನು 45 ವರ್ಷದ ಒಳಗಿನವರಿಗೆ ಮಾತ್ರ ಜಾರಿಗೊ ಳಿಸಬೇಕು ಎಂದು ಸಲಹೆ ನೀಡಿದರು.
ಜತೆಗೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಜಾನಪದ, ರಂಗಭೂಮಿ ಕಲಾವಿದರುಗಳನ್ನು ಸದಸ್ಯತ್ವ ನೋಂದಾಯಿಸಿಕೊಳ್ಳಲು ಆಹ್ವಾನಿಸಬೇಕು ಎಂದು ತಿಳಿಸಿದರು.
ಪರಿವರ್ತನೆ ತರುವ ಸಂದರ್ಭದಲ್ಲಿ ಕೆಲವರು ವಿರೋಧ ಮಾಡುವುದು ಸಹಜ. ಆದರೆ, ಪರಿಷತ್ತಿನ ಮೂಲ ಉದ್ದೇಶಗಳಿಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ರೂಪಿಸಿರುವ ಈ ತಿದ್ದುಪಡಿಗಳನ್ನು ಕಾರ್ಯಗತಗೊಳಿಸಬೇಕು. ಪರಿಷತ್ತಿನಲ್ಲಿ ಹೊಸ ಹೊಸ ಕಾರ್ಯ ಯೋಜನೆಗಳನ್ನು ಜಾರಿಗೊಳಿಸಬೇಕು. ಸದಸ್ಯತ್ಯ ಶುಲ್ಕ ₹250ಕ್ಕೆ ಕಡಿತಗೊಳಿಸುವುದು ಮತ್ತು ತಂತ್ರಜ್ಞಾನ ಅಳವಡಿಸಲು ಆ್ಯಪ್ ರೂಪಿಸುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ ಹಾಗೂ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಪರಿಷತ್ತಿನ ಮಹಾಪೋಷಕರಾಗಲು ₹1 ಲಕ್ಷ ನೀಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಸೊಲ್ಲಾಪುರ ಜಿಲ್ಲೆಯ ವಿರಕ್ತಮಠದ ಬಸವಲಿಂಗ ಸ್ವಾಮೀಜಿ, ಸಾಹಿತಿಗಳಾದ ಡಾ. ಪ್ರಧಾನ ಗುರುದತ್ತ, ಡಾ. ಕಮಲಾ ಹಂಪನಾ, ಡಾ. ದೊಡ್ಡರಂಗೇಗೌಡ, ಡಾ. ಹೀ.ಚಿ. ಬೋರಲಿಂಗಯ್ಯ, ಡಾ. ಬಸವರಾಜ ಸಬರದ, ಡಾ. ಬೈರಮಂಗಲ ರಾಮೇಗೌಡ, ಪ್ರೊ. ಜಿ. ಅಶ್ವತ್ಥನಾರಾಯಣ, ಡಾ. ಮಹಾಬಲಮೂರ್ತಿ ಕೊಡ್ಲೆಕೆರೆ, ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ. ನಾಯ್ಕ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್, ಪ್ರಕಾಶಕರ ಸಂಘದ ಪ್ರಕಾಶ ಕಂಬತ್ತಳ್ಳಿ ಹಾಗೂ ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಇತರರು ಪಾಲ್ಗೊಂಡಿದ್ದರು.