ಕುಮಾರಸ್ವಾಮಿ ಮುಂದೆಯೇ ನಮ್ಮ ಜಮೀನಿನ ಖಾತೆ ಮಾಡಿಕೊಡಲು ಅಧಿಕಾರಿಗಳು ಲಕ್ಷ ಲಕ್ಷ ಲಂಚ ಕೇಳುತ್ತಿದ್ದಾರೆ : ರೈತನಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ
ಹಾಯ್ ರಾಮನಗರ (hairamanagara.in) 20 ಫೆಬ್ರವರಿ 2022
ಚನ್ನಪಟ್ಟಣ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎದುರೆ ರೈತರೊಬ್ಬರು ಅಧಿಕಾರಿಗಳ ವಿರುದ್ಧ ನೇರಾ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ತಗಚಗೆರೆ ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹಾಗೂ ಕ್ಷೇತ್ರ ಶಾಸಕ ಎಚ್.ಡಿ. ಕುಮಾರಸ್ವಾಮಿ ಮುಂದೆಯೆ ರೈತನೊರ್ವ ನಮ್ಮ ಜಮೀನನ್ನ ನಾವು ಪಡೆದುಕೊಳ್ಳುವುದಕ್ಕೆ ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಾರೆ. ನಮ್ಮ ಜಮೀನಿಗೆ ಖಾತೆ ಮಾಡುವ ವಿಚಾರಕ್ಕೆ ರೆವಿನ್ಯೂ ಇಲಾಖೆ ಅಧಿಕಾರಿಗಳು ಲಕ್ಷ ಲಕ್ಷ ಲಂಚ ಕೇಳುತ್ತಾರೆಂದು ಬಹಿರಂಗವಾಗಿ ರೈತ ಸಿದ್ದೇಗೌಡ ಬಹಿರಂಗವಾಗಿ ಆರೋಪಿಸಿದರು.
ಚನ್ನಪಟ್ಟಣ ತಾಲೂಕಿನ ಕರಲ್ಲಹಳ್ಳಿ ಗ್ರಾಮದ ರೈತ ಸಿದ್ದೇಗೌಡ ಎಂಬುವವನು ನೇರವಾಗಿ ನಮ್ಮ ಜಮೀನು ನಮಗೆ ಖಾತೆ ಮಾಡಿಕೊಳ್ಳಲು ಕಂದಾಯ ಅಧಿಕಾರಿಗಳು ಲಂಚ ಕೇಳುತ್ತಾರೆಂದು ಮಾಜಿ ಸಿಎಂ ಕುಮಾರಸ್ವಾಮಿ ಮುಂದೆ ತನ್ನ ಅಳಲು ತೊಡಿಕೊಂಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ವಾರದೊಳಗೆ ಅಧಿಕಾರಿಗಳನ್ನು ರೈತನ ಬಳಿಗೆ ಕಳುಹಿಸುವುದಾಗಿ ಭರವಸೆ ನೀಡಿದರು.