ಅಜ್ಜಿ ಸಾವಿನ ನಡುವೆಯೂ ಕರ್ತವ್ಯಪರತೆ ಮೆರೆದು ಮೆಚ್ಚುಗೆಗೆ ಪಾತ್ರರಾದ ಅಂಗನವಾಡಿ ಶಿಕ್ಷಕಿ ಕಲಾವತಿ

ಹಾಯ್ ರಾಮನಗರ (hairamanagara.in) 21 ಫೆಬ್ರವರಿ 2022

ರಾಮನಗರ : ತಾಲ್ಲೂಕಿನ ಬಿಡದಿ ಹೋಬಳಿ ಶಾನುಮಂಗಲ ಅಂಗನವಾಡಿ ಶಿಕ್ಷಕಿಯೊಬ್ಬರು ತಮ್ಮ ಅಜ್ಜಿ (ತಾಯಿಯ ತಾಯಿ) ಸಾವಿನ ನಡುವೆಯೂ ತಮ್ಮ ಕರ್ತವ್ಯ ಪರತೆ ಮೆರೆಯುವ ಮೂಲಕ ಮಾದರಿ ಕೆಲಸ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವಾಲಯದ ಪ್ರಗತಿ ಪರಿಶೀಲನೆಯ ವೀಕ್ಷಕ ಸದಸ್ಯರಾದ ಡಾ.ಸತ್ರಾಲ ನಾಗಭೂಷಣ ರಾವ್, ಇಸುಕಪಲ್ಲಿ ರಾಮಚಂದ್ರ ರೆಡ್ಡಿ ಅವರು ಭಾನುವಾರ ತಾಲ್ಲೂಕಿನ ವಿವಿಧೆಡೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿ ಹಾಗೂ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಗಾಗಿ

ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ರಾಮನಗರ ಓನ್ ಕೇಂದ್ರಕ್ಕೆ ಭೇಟಿ ನೀಡಿ, ರಾಮನಗರ ಓನ್ ಯೋಜನೆಯ ಉದ್ದೇಶ ಹಾಗೂ ಸಾರ್ವಜನಿಕರಿಗೆ ದೊರೆಯುವ ಉಪಯೋಗ ಕುರಿತು ಪರಿಶೀಲನೆ ನಡೆಸಿತು.

ಈ ವೇಳೆ ಮಂಚನಾಯಕಹಳ್ಳಿಯಲ್ಲಿ ಸ್ಮಾರ್ಟ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಒದಗಿಸಿರುವ ಸ್ಮಾರ್ಟ್ ತರಗತಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಶಾನುಮಂಗಲ ಅಂಗನವಾಡಿ ಶಿಕ್ಷಕಿ ಕಲಾವತಿ ಅವರು ಈಗಾಗಲೇ ಅಂಗನವಾಡಿ ಸ್ಮಾರ್ಟ್ ತರಗತಿ ಬಗ್ಗೆ ಮಾಸ್ಟರ್ ಟ್ರೈನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಕೇಂದ್ರ ತಂಡಕ್ಕೆ ಅಂಗನವಾಡಿ ಸ್ಮಾರ್ಟ್ ತರಗತಿ ಬಗ್ಗೆ ಸವಿವರವಾಗಿ ತಿಳಿಸಿಕೊಡುವ ಮೂಲಕ ವೀಕ್ಷಕ ತಂಡದ ಮೆಚ್ಚುಗೆಗೆ ಪಾತ್ರರಾದರು.

ವಿಶೇಷವೆಂದರೆ ಭಾನುವಾರ ಕರ್ತವ್ಯಕ್ಕೆ ಹಾಜರಾಗುವ ಸ್ಥಿತಿಯಲ್ಲಿ ಅಂಗನವಾಡಿ ಶಿಕ್ಷಕಿ ಕಲಾವತಿ ಅವರು ಇರಲಿಲ್ಲ. ಏಕೆಂದರೆ ದೂರದ ಚಿಕ್ಕಬಳ್ಳಾಪುರ ನಗರದಲ್ಲಿ ಕಲಾವತಿಯವರ ಅಜ್ಜಿಯ ಸಾವಾಗಿತ್ತು. ಇತ್ತ ಅದೇ ದಿನ ಕೇಂದ್ರ ತಂಡ ಜಿಲ್ಲೆಯಲ್ಲಿ ನಡೆದಿರುವ ಪ್ರಗತಿ ಪರಿಶೀಲನೆಗಾಗಿ ಆಗಮಿಸಿತ್ತು. ಈಗಾಗಲೇ ಮಾಸ್ಟರ್ ಟ್ರೈನರ್ ಆಗಿ ಹೆಸರು ಮಾಡಿರುವ ಕಲಾವತಿಯವರೇ ಸ್ಮಾರ್ಟ್ ಅಂಗನವಾಡಿ ತರಗತಿ ಕುರಿತು ಕಲಾವತಿಯವರೇ ವಿವರಣೆ ನೀಡಲಿ ಎಂಬ ಸದುದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿ.ವಿ.ರಾಮನ್ ಅವರು ಕಲಾವತಿಯವರಿಗೆ ಕರೆ ಮಾಡಿದಾಗ, ಕಲಾವತಿ ತಮ್ಮ ಅಜ್ಜಿ ಚಿಕ್ಕಬಳ್ಳಾಪುರದಲ್ಲಿ ನಿಧನರಾಗಿರುವ ಬಗ್ಗೆ ತಿಳಿಸಿ,ತಾವು ಬರಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಿ.ವಿ.ರಾಮನ್ ಚಿಂತನೆ ನಡೆಸುತ್ತಿರುವ ಮಧ್ಯೆ ವಾಪಸ್ ಕರೆ ಮಾಡಿದ ಕಲಾವತಿ, ತಮ್ಮ ಮನೆಯವರಿಗೆ ವಿಷಯ ತಿಳಿಸಲಾಗಿ, ಅವರು ನಮ್ಮ ಅಜ್ಜಿಯವರ ಅಂತಿಮ ದರ್ಶನ ಮಾಡಿ ಕೊಂಡು ಹೋಗು, ಕೇಂದ್ರ ತಂಡದ ಎದುರು ಸ್ಮಾರ್ಟ್ ತರಬೇತಿ ಬಗ್ಗೆ ತಿಳಿಸಲು ನಿನ್ನನ್ನೇ ಆಯ್ಕೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದ್ದು, ನಿನ್ನ ಕರ್ತವ್ಯ ನೀನು ಮಾಡು ಎಂದು ಕಳಿಸಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಈ ದಿಕ್ಕಿನಲ್ಲಿ ದೂರದ ಚಿಕ್ಕಬಳ್ಳಾಪುರದಿಂದ ಬಂದ ಕಲಾವತಿ ಕೇಂದ್ರ ತಂಡಕ್ಕೆ ಸ್ಮಾರ್ಟ್ ಅಂಗನವಾಡಿ ತರಗತಿ ಬಗ್ಗೆ ತಿಳಿಸಿಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಮನಗರ ‌ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿ.ವಿ.ರಾಮನ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ  ದಿಡ್ಡಿಮನಿ, ಜಿ.ಪಂ.ಉಪ ಕಾರ್ಯದರ್ಶಿ  ಟಿ.ಕೆ ರಮೇಶ್, ರಾಮನಗರ ತಾಪಂ ಇಒ ಶಿವಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ,  ಕೃಷಿ ಇಲಾಖೆ ಉಪನಿರ್ದೇಶಕ ಸೋಮಸುಂದರ್, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ, ಸಹಾಯಕ ನಿರ್ದೇಶಕ ರೂಪೇಶ್ ಕುಮಾರ್, ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ  ವಿನೋದ್ ಕುಮಾರ್. ಜಿಲ್ಲಾ ಐ.ಇ.ಸಿ‌ ಸಂಯೋಜಕ ಅರುಣ್ ಕುಮಾರ್ ಸಿ.ಜಿ, ತಾಲ್ಲೂಕು ತಾಂತ್ರಿಕ ಸಂಯೋಜಕ ಕಾರ್ತಿಕ್, ತಾಲ್ಲೂಕು ಎಂ.ಐ.ಎಸ್ ಹರೀಶ್, ತಾಲ್ಲೂಕು ಐ.ಇ.ಸಿ ಸಂಯೋಜಕಿ ಸುಶ್ಮಿತಾ ಹಾಗೂ ಗ್ರಾಮ‌ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

ಕರ್ತವ್ಯಕ್ಕೆ ಹಾಜರಾಗಿ ವೃತ್ತಿಪರತೆ ಮೆರೆದಿರುವುದು ಹೆಮ್ಮೆಯ ಸಂಗತಿ : ಸಿ.ವಿ. ರಾಮನ್

ಶಾನುಮಂಗಲ ಅಂಗನವಾಡಿ ಶಿಕ್ಷಕಿ ಕಲಾವತಿಯವರು ಕರ್ತವ್ಯಕ್ಕೆ ಸೇರಿಕೊಂಡು ಮೂರು ತಿಂಗಳಷ್ಷೇ ಆಗಿದೆ. ಅಲ್ಪ ಸಮಯದಲ್ಲೇ ಅಂಗನವಾಡಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಜೊತೆಗೆ, ಸ್ಮಾರ್ಟ್ ಕ್ಲಾಸ್ ತರಬೇತಿ ಪಡೆದು, ಅದನ್ನು ತನ್ನ ಇತರ ಸಹಪಾಠಿಗಳಿಗೆ ಮನದಟ್ಟು ಮಾಡುವಲ್ಲಿ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಹಾಗೂ ತಮ್ಮ ಅಜ್ಜಿಯ ಸಾವಿನ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಿ ವೃತ್ತಿಪರತೆ ಮೆರೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹವರ ಸಂತತಿ ಹೆಚ್ಚು ಹೆಚ್ಚು ಬೆಳೆಯಲಿ ಎಂದು ಆಶಿಸುತ್ತೇನೆ.

ಸಿ.ವಿ.ರಾಮನ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು, ರಾಮನಗರ ಜಿಲ್ಲೆ

‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

https://chat.whatsapp.com/Bd3rUGY5mEx04sz4oN6uZY

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *