ಅದ್ಧೂರಿಯಾಗಿ ನಡೆದ ಕೋನಮ್ಮ ತಾಯಿ ಪರುಷೆ

ಹಾಯ್ ರಾಮನಗರ (hairamanagara.in) 21 ಫೆಬ್ರವರಿ 2022

ಚನ್ನಪಟ್ಟಣ : ತಾಲೂಕಿನ ವಿರುಪಾಕ್ಷಿಪುರ ಹೋಬಳಿ ಕೊಂಡಾಪುರ ಗ್ರಾಮದಲ್ಲಿ ಅದ್ಧೂರಿಯಾಗಿ ಪುರಾಣ ಪ್ರಸಿದ್ಧ ಶ್ರೀ ಕೋನಮ್ಮ ತಾಯಿ ಪರುಷೆ ನಡೆಯಿತು.

ಬೆಳಗ್ಗಿನಿಂದ ಬಯಲು ದೇವಸ್ಥಾನದಲ್ಲಿ ಪೂಜೆ ಪುನಷ್ಕಾರ ನಡೆಯಿತು. ಈ ವೇಳೆ ದೇವಸ್ಥಾನದ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು. ಗ್ರಾಮದಲ್ಲಿನ ಪ್ರತಿ ಮನೆಗಳಿಗೂ ದೂರದೂರುಗಳಿಂದ ಸಂಬಂಧಿಗಳು ಆಗಮಿಸಿ, ಸಂಭ್ರಮದಲ್ಲಿ ಭಾಗಿಯಾಗಿ, ಕೋನಮ್ಮ ದೇವಿಗೆ ಅರಿಕೆ, ಅವಿಷ್ಟಗಳನ್ನು ಸಲ್ಲಿಸಿದರು.

ಇರುಳು ಮುಳುಗಿದ ತರುವಾಯ ನೆರೆದಿದ್ದ ಸಾವಿರಾರು ಭಕ್ತರಿಗೆ ಬಾಡೂಟದ ಪಕ್ತಿ ಭೋಜನ ಮಾಡಲಾಯಿತು. ಕೊಂಡಾಪುರ ಗ್ರಾಮದ ನೆರೆಯ ಗ್ರಾಮಗಳಾದ ಹುಣಸನಹಳ್ಳಿ, ನಾಗಾಪುರ, ಬಾಣಗಹಳ್ಳಿ, ಹುಚ್ಚಯ್ಯನದೊಡ್ಡಿ, ಕೋಡಂಬಳ್ಳಿ ಗ್ರಾಮಗಳಲ್ಲದೆ, ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಭಕ್ತರು ಪಕ್ತಿ ಭೋಜನದಲ್ಲಿ ಪಾಲ್ಗೊಂಡಿದ್ದರು.

ಪ್ರತಿ ವರ್ಷ ಸಂಕ್ರಾಂತಿ ಮತ್ತು ಶಿವರಾತ್ರಿ ನಡುವೆ ಮಾತ್ರ ಹೆಣ್ಣು ಮೇಕೆ ಮತ್ತು ಹೆಣ್ಣು ಕೋಳಿಗಳನ್ನು ಬಲಿಕೊಟ್ಟು ಅರಿಕೆ ತೀರಿಸುವುದು ಇಲ್ಲಿನ ವಾಡಿಕೆ. ಅಲ್ಲದೇ, ದೇವಸ್ಥಾನದ ಆವರಣದಲ್ಲಿ ಮೇಕೆ, ಕೋಳಿ ಕುಯ್ದು ಅಡುಗೆ ಮಾಡಿದ ನಂತರ ಇಲ್ಲಿ ಊಟ ಮಾಡುವಂತಿಲ್ಲ. ದೇವಿಗೆ ನೈವೇದ್ಯ ನೀಡಿದ ತರುವಾಯ ಮನೆಗೆ ಅಥವಾ ದೂರದ ಜಾಗಕ್ಕೆ ಮಾಡಿದ ಅಡುಗೆಯನ್ನು ತೆಗೆದುಕೊಂಡು ಹೋಗಿ ಬಂದ ಅತಿಥಿಗಳು ಮತ್ತು ನೆಟ್ಟರಿಷ್ಟರಿಗೆ ಬಡಿಸುವ ಪದ್ಧತಿ ಇದ್ದು, ನಂತರ ಇಲ್ಲಿ ಮೇಕೆ ಮತ್ತು ಕೋಳಿ ಬಲಿ ಖಡ್ಡಾಯವಾಗಿ ನಿಷಿದ್ಧವಾಗಿದೆ.  ನಂತರದ ದಿನಗಳಲ್ಲಿ ಇಲ್ಲಿ ದೇವಿಗೆ ಮೊಸರು, ಹಾಲು, ಬೆಲ್ಲದನ್ನ ಹಾಗೂ ರಸಾಯನವೇ ಪ್ರಧಾನವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕೋನಮ್ಮ ದೇವಿಯಲ್ಲಿ ಮಕ್ಕಳಾಗದವರು, ಸರ್ಪಸುತ್ತು ಹಾಗೂ ಇತರೆ ಸಮಸ್ಯೆಗಳಿಗೆ ಅರಿಕೆ  ಕಟ್ಟಿಕೊಳ್ಳಲು ದೂರದ ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರಗಳಂದು ನೂರಾರು ಭಕ್ತರು ಭೇಟಿ ನೀಡುತ್ತಿದ್ದು, ದಿನದಿಂದ ದಿನಕ್ಕೆ ದೇವಸ್ಥಾನ ಮುನ್ನೆಲೆಗೆ ಬರುತ್ತಿದೆ ಎಂದು ಕೊಂಡಾಪುರ ಗ್ರಾಮದ ಯುವ ಮುಖಂಡ ಕೆ.ಆರ್. ಪ್ರವೀಣ್‌ಕುಮಾರ್ ಮಾಹಿತಿ ನೀಡಿದರು.

‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

https://chat.whatsapp.com/Bd3rUGY5mEx04sz4oN6uZY

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *