ಮುದ್ದುಶ್ರೀ ದಿಬ್ಬದಲ್ಲಿ ಫೆ.22 ರಿಂದ ನಾಲ್ಕು ದಿನಗಳ ಶಿಕ್ಷಕರ ತರಬೇತಿ ಶಿಬಿರ
ರಾಮನಗರ : ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಮತ್ತು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಹಯೋಗದಲ್ಲಿ ನಾಲ್ಕು ದಿನಗಳ ರಾಮನಗರ ಜಿಲ್ಲಾಮಟ್ಟದ ಶಿಕ್ಷಕರ ತರಬೇತಿ ಶಿಬಿರವನ್ನು ತಾಲ್ಲೂಕಿನ ಕೈಲಾಂಚ ಹೋಬಳಿಯ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಫೆ.22 ರಿಂದ 25 ರವರೆಗೆ ಆಯೋಜಿಸಲಾಗಿದೆ.
ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಕಲಿಕಾ ವಿಧಾನಗಳನ್ನು ತಿಳಿಸಿಕೊಡಲಾಗುವುದು. ಈ ಎಲ್ಲಾ ವಿಷಯಗಳ ಮೂವತ್ತು ಜನ ಶಿಕ್ಷಕರಿಗೆ ತರಬೇತಿ ನೀಡಲು ವಿವಿಧ ಕ್ಷೇತ್ರದ ತಜ್ಞರು ಈ ಶಿಬಿರದ ಕಾರ್ಯಾಗಾರದಲ್ಲಿ ಮಕ್ಕಳಿಗೆ ಸುಲಭವಾಗಿ ಕಲಿಯುವ ವಿಧಾನಗಳ ಬೋಧನೆ ಮಾಡುವರು. ಪ್ರಾಯೋಗಿಕ ನೆಲೆಯ ಈ ಕಾರ್ಯಾಗಾರವು ಮಹತ್ವ ಪೂರ್ಣವಾಗಿರುತ್ತದೆ ಎಂದು ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/Bd3rUGY5mEx04sz4oN6uZY
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : WhatsApp : 9880439669
Mail : rudresh.444@gmail.com