ಕ್ಷೇತ್ರ ಆರೋಗ್ಯ ಸಿಬ್ಬಂದಿಗಳಿಗೆ ಆನ್ ಲೈನ್ ಮೂಲಕ ಸಭೆ
ಹಾಯ್ ರಾಮನಗರ (hairamanagara.in) 22 ಫೆಬ್ರವರಿ 2022
ರಾಮನಗರ : ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ 27 ಫೆಬ್ರವರಿ 2022 ರಂದು ಪೊಲಿಯೋ ಹನಿ ಹಾಕುತಿದ್ದು ಈ ಸಂದರ್ಭದಲ್ಲಿ ಲಸಿಕಾ ಕೇಂದ್ರವನ್ನು ದೊಡ್ಡ ಕೊಠಡಿಗಳಿರುವಂತೆ ಆಯ್ಕೆ ಮಾಡಿಕೊಂಡು ಹಿಂದಿನ ದಿನವೇ ಸ್ವಚ್ಛಗೊಳಿಸಬೇಕು, ಲಸಿಕಾ ತಂಡದ ಎಲ್ಲಾ ಸದಸ್ಯರು ತಮ್ಮ ಜವಾಬ್ಧಾರಿಗಳಿಗೆ ತಕ್ಕಂತೆ ಕೆಲಸ ನಿರ್ವಹಿಸುವುದು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಎಂದು IIHMR ಸಂಸ್ಥೆಯ ಸಂಶೋಧನಾಧಿಕಾರಿ ಡಾ. ಮೈತ್ರಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ SBCC ಘಟಕ ರಾಮನಗರ, ಯುನಿಸೆಫ್ ಹಾಗೂ ಐಐಎಚ್‍ಎಂಆರ್ – ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕ್ಷೇತ್ರ ಆರೋಗ್ಯ ಸಿಬ್ಬಂದಿಗಳಿಗೆ ಸಾರ್ವತ್ರಿಕ ಲಸಿಕಾ ಅಧಿವೇಶನ ಮತ್ತು ಪಲ್ಸ್ ಪೊಲಿಯೋ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಬಗ್ಗೆ ಹಾಗೂ ಲಸಿಕಾ ನಿರಾಕರಿಸಿದವರಿಗೆ ಪ್ರೇರೇಪಿಸುವುದರ ಬಗ್ಗೆ ಕುರಿತಂತೆ ಜಿಲ್ಲಾ ಪಂಚಾಯತಿಯಲ್ಲಿ ಆನ್ ಲೈನ್ ಮೂಲಕ ಸಭೆ ಹಮ್ಮಿಕೊಳ್ಳಲಾಗಿತ್ತು .
ಸಾರ್ವತ್ರಿಕ ಲಸಿಕಾ ಅಧಿವೇಶನ ಮತ್ತು ಪಲ್ಸ್ ಪೊಲಿಯೋ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಕೋವಿಡ್ ಸೋಂಕು ಹರಡದಂತೆ ಅನುಸರಿಸಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಮಾತನಾಡುತ್ತಾ ಕೋವಿಡ್ ನಿಯಮಾನುಸಾರ ಸಾಮಾಜಿಕ ಅಂತರ, ಕೈಗಳ ಸ್ವಚ್ಛತೆ ಇತ್ಯಾಧಿಗಳನ್ನು ಅನುಸರಿಸಬೇಕು ಹಾಗೂ ಪಲ್ಸ್ ಪೊಲಿಯೋ ಕಾರ್ಯಕ್ರಮದ ಮಾರ್ಗಸೂಚಿಯಂತೆ ಎಲ್ಲಾ ಪೂರ್ವ ಸಿದ್ದತೆ ಮಾಡಿಕೊಂಡು ಅರ್ಹ ಮಕ್ಕಳಿಗೆ ಪೊಲಿಯೋ ಹನಿ ಹಾಕುವ ಮೂಲಕ ಗುರಿ ಸಾಧಿಸುವಂತೆ ತಿಳಿಸಿದರು.
ರಾಜ್ಯ ಸಂಯೋಜಕ ಡಾ. ದೀಪಶ್ರೀ ಮಾತನಾಡಿ ಕೋವಿಡ್ ಲಸಿಕೆ ನಿರಾಕರಿಸಿದವರಿಗೆ ಮನವೊಲಿಸುವ ಬಗ್ಗೆ ಮಾತನಾಡಿ ಸಮುದಾಯದಲ್ಲಿ ಗರ್ಭಿಣಿ, ಬಾಣಂತಿ ಹಾಗೂ ಇತರರು ಭಯ, ಆತಂಕ, ತಪ್ಪು ಕಲ್ಪನೆಗಳಿಂದ ಲಸಿಕೆ ಪಡೆಯದೇ ಇರುವವರನ್ನು ಗುರುತಿಸಬೇಕು ಪ್ರಾರಂಭದಲ್ಲಿ ಅವರ ಆರೋಗ್ಯ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಲಸಿಕೆಯ ಮಹತ್ವದ ಬಗ್ಗೆ ವಿವರವಾಗಿ ತಿಳಿಸಬೇಕು ಒಂದುವೇಳೆ ವ್ಯಕ್ತಿಯು ಸ್ಪಂದಿಸದೇ ಇದ್ದ ಸಂದರ್ಭದಲ್ಲಿ ಪ್ರಭಾವಿಗಳಾದ ಕುಟುಂಬದ ಸದಸ್ಯರು, ಜನಪ್ರತಿನಿಧಿ, ಮುಖಂಡರು ಇವರುಗಳ ಮೂಲಕ ಮನವಲಿಸಿ ಲಸಿಕೆ ನೀಡಿ ಗುರಿಸಾಧಿಸುವಂತೆ ತಿಳಿಸಿದರು.
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಅತೀ ಜರೂರಾಗಿ ಲಸಿಕಾ ಕರಣ ನೀಡುವುದರ ಮೂಲಕ ಸೋಂಕು ನಿಯಂತ್ರಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡುತ್ತಾ, ಕೋವಿಡ್ ಮುಂಜಾಗೃತ ನಡವಳಿಕೆಗಳಾದ ಸೂಕ್ತ ರೀತಿಯಲ್ಲಿ ಮಾಸ್ಕ ಧರಿಸುವುದು, ಕೈಗಳ ಸ್ವಚ್ಛತೆ, ಸಮಾಜಿಕ ಅಂತರ ಕಾಯ್ದುಕೊಳ್ಳುವುದು ಜೊತೆಗೆ ಮಾರುಕಟ್ಟೆ ಸಾರ್ವಜನಿಕ ಸ್ಥಳ, ಸಭೆ ಸಮಾರಂಭ, ಧಾರ್ಮಿಕ ಸ್ಥಳಗಳು, ಹಾಗೂ ಸರ್ಕಾರಿ ಕಛೇರಿಗೆ ಭೇಟಿನೀಡಿದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಜೊತೆಗೆ ಸಮಾಜಿಕ ಅಂತರ ಕಾಪಾಡಿಕೊಳ್ಳವುದು, ಹಾಗೂ ಮನೆಯಲ್ಲಿ ನಿರ್ವಹಿಸಬೇಕಾದ ಕ್ರಮಗಳೆಂದರೆ ಕೆಮ್ಮು ಶೀತ, ಜ್ವರ ಇತರೆ ಲಕ್ಷಣಗಳಿದ್ದಲ್ಲಿ, ಕೋವಿಡ್ ಉಸಿರಾಟದ ತೊಂದರೆ ಇದ್ದರೇ, ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದಲ್ಲಿ, ಅನಾರೋಗ್ಯ ಪೀಡಿತ ವ್ಯಕ್ತಿಗಳಿದಲ್ಲಿ, ಹೊರಗಡೆಯಿಂದ ಬಂದ ಸ್ನೇಹಿತರು ಹಾಗೂ ಸಂಬಂಧಿಕರನ್ನು ಭೇಟಿ ಮಾಡುವ ಸಂದರ್ಭ, ಪಾರ್ಸಲ್ ಡೆಲಿವರಿ ಸ್ವೀಕರಿಸುವ ಸಂದರ್ಭಗಳಲ್ಲು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ IIHMR ಸಂಸ್ಥೆಯ ವಿಭಾಗಿಯ ಸಂಯೋಜಕ ಗೌತಮ್, ಡಾ. ಮೈತ್ರಿ, ಡಾ. ದೀಪಶ್ರೀ, ಜಿಲ್ಲಾ SBCC ಸಂಯೋಜಕ ಸುರೇಶ್ ಬಾಬು, ಎಲ್ಲೋ & ರೆಡ್ ಫೌಂಡೇಶನ್ ನಿರ್ದೇಶಕರಾದ ಅಮಿತ್ ರಾಜ್ ಶಿವ, ವಿವಿಧ್ ಎಂಟರ್ ಪ್ರೈಸಸ್ನ ನಾಗೇಂದ್ರ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಹಾಗೂ ಆಶಾ ಸುಗಮಗಾರರು ಭಾಗವಹಿಸಿದ್ದರು.
‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/Bd3rUGY5mEx04sz4oN6uZY
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com