ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಟಿ. ಬಸವನಗೌಡ ವಿರುದ್ಧ ತನಿಖೆಗೆ ಇರುಳಿಗ ಅರಣ್ಯ ವಾಸಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಒತ್ತಾಯ

ಹಾಯ್ ರಾಮನಗರ (hairamanagara.in) 23 ಫೆಬ್ರವರಿ 2022

ರಾಮನಗರ : ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನ ಸಂಸ್ಥೆಯಲ್ಲಿ 10 ವರ್ಷಗಳಿಂದ ನಿರ್ದೇಶಕರಾಗಿ  ಆದಿವಾಸಿಗಳಿಗೆ ಅನ್ಯಾಯ ಮಾಡಿ ಇಡೀ ಸಂಸ್ಥೆಯನ್ನು ತನ್ನ ಖಾಸಗಿ ಸ್ವತ್ತಾಗಿ ಮಾಡಿಕೊಂಡು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಪ್ರೊ.ಟಿ.ಟಿ. ಬಸವನಗೌಡ ಅವರನ್ನು ತಕ್ಷಣವೆ ನಿರ್ದೇಶಕರ ಹುದ್ದೆಯಿಂದ ಬಿಡುಗಡೆಗೊಳಿಸಿ ಸಮಗ್ರ ತನಿಖೆಯನ್ನು ನಡೆಸುವಂತೆ ಇರುಳಿಗ ಅರಣ್ಯ ವಾಸಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಒತ್ತಾಯಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಮಾನವ ಶಾಸ್ತ್ರ ವಿಭಾಗದಿಂದ ಸಹ ಪ್ರಾಧ್ಯಾಪಕ ಟಿ.ಟಿ. ಬಸವನಗೌಡ ಅವರನ್ನು 3 ವರ್ಷದ ಅವದಿಗೆ ಮೈಸೂರಿನಲ್ಲಿರುವ ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ನಿರ್ದೇಶಕರಾಗಿ ಪ್ರತಿ ನಿಯೋಜನೆ ಮಾಡಲಾಗಿದೆ. ಈ ಹುದ್ದೆ  ಐ.ಎ.ಎಸ್.ಶ್ರೇಣಿ ಹಾಗೂ ಕೆ.ಎ.ಎಸ್ ಉನ್ನತ ವೇತನ ಶ್ರೇಣಿ ಅರ್ಹತೆ ಹೊಂದಿರಬೇಕಿದ್ದು, ಈ ನಿಯಮವನ್ನು ಗಾಳಿಗೆ ತೂರಿ ಪ್ರತಿ ನಿಯೋಜನೆ ಮಾಡಲಾಗಿದೆ. ಇದರ ಹೊರತಾಗಿಯೂ ಬಸವನಗೌಡ ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ಪ್ರತಿ ನಿಯೋಜನೆಯ ಅವಧಿಯನ್ನು ಹಣ,ಜಾತಿ ಮತ್ತು ರಾಜಕೀಯ ಬಲವನ್ನು ಬಳಸಿಕೊಂಡು ವಿಸ್ತರಣೆ ಮಾಡಿಕೊಂಡು ಬರುತ್ತಲೇ ಇದ್ದಾರೆ ಎಂದರು.

2012ರಿಂದ ನಿರ್ದೇಶಕರಾಗಿ ಉಳಿದುಕೊಂಡಿರುವ ಪ್ರೊ.ಟಿ.ಟಿ.ಬಸವನಗೌಡ ಸುಮಾರು 10 ವರ್ಷಗಳ ಅವಧಿಯಲ್ಲಿ ಹಲವಾರು ಆದಿವಾಸಿ ಬುಡಕಟ್ಟುಗಳ ಹೆಸರಿನಲ್ಲಿ ಹಲವಾರು ಯೋಜನೆಗಳನ್ನು ಮಾಡಿಕೊಂಡು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಆದರೆ ಇವರ ವರದಿಗಳಿಂದ ಆದಿವಾಸಿ ಬುಡಕಟ್ಟುಗಳಿಗೆ ಯಾವುದೇ ಲಾಭವಾಗಿಲ್ಲ. ಅಲ್ಲದೆ, ಸಂಸ್ಥೆಯಲ್ಲಿ ಸ್ವಜನ ಪಕ್ಷಪಾತ ಮಾಡಿಕೊಂಡು ಆದಿವಾಸಿ ಸಮುದಾಯಗಳಿಗೆ ಅನ್ಯಾಯಮಾಡುತ್ತಾ ಕರ್ನಾಟಕ ರಾಜ್ಯಬುಡಕಟ್ಟು ಸಂಶೋಧನ ಸಂಸ್ಥೆಯನ್ನು ತನ್ನಖಾಸಗಿ ಒಡೆತನದಂತೆ ಮಾಡಿಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರಚಿಕೊಂಡು ಸರ್ಕಾರ ಮತ್ತು ವಿಶ್ವವಿದ್ಯಾಲಯದ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.

ವಿಲೀನ ಗೊಂಡಿರುವ ನೌಕರರು ಮಾತೃ ಇಲಾಖೆಯಲ್ಲಿ ಹೊಂದಿರುವ ಹುದ್ದೆಯ ವೇತನಶ್ರೇಣಿ ಮತ್ತು ಪ್ರತಿನಿ ಯೋಜನೆ ಮೂಲಕ ನೇಮಿಸಲು ಉದ್ದೇಶಿಸಿರುವ ಹುದ್ದೆಯ ವೇತನ ಶ್ರೇಣಿಗಳು ಸಮಾನ ಶ್ರೇಣಿಯಾಗಿರಬೇಕು ಆದರೆ ಇವರ ವಿಷಯದಲ್ಲಿ ಮಾತೃ ಇಲಾಖೆಯಲ್ಲಿ ಯು.ಜಿ.ಸಿ. ವೇತನ ಶ್ರೇಣಿ ಪಡೆಯುತ್ತಿದ್ದಾರೆ. ಇವರ ಮೇಲೆ ಪ್ರಕರಣವೊಂದು ದಾಖಲಾಗಿ, ಆರೋಪ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ. ಅಲ್ಲದೆ, 2006ರಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವೂ ಇದೆ. ಇನ್ನು ಹಾಲಿ ಇರುವ ಸಂಸ್ಥೆಯಲ್ಲಿ ಹಣ ದುರ್ಬಳಕೆ ಸಹ ಮಾಡಿಕೊಂಡಿದ್ದಾರೆ. ಅಲ್ಲದೆ, ತಮ್ಮ ಅಕ್ರಮಕ್ಕೆ ಅನುಕೂಲ ಮಾಡಿಕೊಳ್ಳಲು ಬೇಕಾದ ಅಮರ್ಹ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂದು ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಕಾಯ್ದೆ ಹಾಗೂ ಕಾನೂನು ಈ ವ್ಯಕ್ಕಿಯು ಅಂದು ಕೊಂಡಿದ್ದು ಇಲ್ಲಿ ನಡೆಯುತ್ತದೆ ತನ್ನ ಎಲ್ಲಾ ಬಲಗಳನ್ನುಬಳಸಿಕೊಂಡು ಇಡೀ ಸಂಸ್ಥೆಯನ್ನು ತನ್ನ ರಿಪಬ್ಲಿಕ್ ಮಾಡಿಕೊಂಡು ಬದುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆ ಹಾಗೂ ಬುಡಕಟ್ಟು ಸಮೂದಾಯವನ್ನು ಉಳಿಸುವ ಸಲುವಾಗಿ ಕೂಡಲೇ ಬಸವನಗೌಡ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಅಕ್ರಮಗಳನ್ನು ಬಯಲಿಗೆ ತರಬೇಕು. ಕಾನೂನು ಪ್ರಕಾರ ಶಿಕ್ಷೆಯನ್ನು ಕೊಡಿಸಬೇಖು. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಕ್ರಮವಹಿಸಬೇಕು ಎಂದು ಕೃಷ್ಣಮೂರ್ತಿ ಆಗ್ರಹಿಸಿದರು.

ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಮೂಲ ಆದಿವಾಸಿ, ಅರಣ್ಯ ಬುಡಕಟ್ಟುಗಳು ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಸತ್ಯಾಗ್ರಹ ಕೈಗೊಂಡು ಕೊಡಗಿನಿಂದ ವಿಧಾನಸೌಧವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಕೃಷ್ಣಮೂರ್ತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಜೆ.ಎಲ್. ಶಿವರಾಜ್, ಹಕ್ಕಿಪಿಕ್ಕಿ ಸಮುದಾಯದ ಮುಖಂಡ ಕಾಮರಾಜ್ ಇದ್ದರು.

‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

https://chat.whatsapp.com/Bd3rUGY5mEx04sz4oN6uZY

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *