ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಡ್ಯಾಕ್ ಕಮಿಟಿ ಸಭೆ
ಹಾಯ್ ರಾಮನಗರ (hairamanagara.in) 22 ಫೆಬ್ರವರಿ 2022
ಚನ್ನಪಟ್ಟಣ : ತಾಲೂಕು ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಅಡ್ಯಾಕ್ ಕಮಿಟಿ ಸಭೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ, ಕರೆಯಲಾಗಿತ್ತು. ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಂ. ಲೋಕೇಶ್ ಸಮಕ್ಷಮದಲ್ಲಿ ನೆಡಯಿತು.
ತಾಲೂಕಿನ 32 ಗ್ರಾಮ ಪಂಚಾಯಿತಿಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆದಿದ್ದು, ಲೆಕ್ಕಪರಿಶೋಧನೆಯಲ್ಲಿ ಕಂಡು ಆಕ್ಷೇಪಗಳಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಕಲೆ ಹಾಕಿ, ಕಳೆದ ಅವಧಿಯಲ್ಲಿ ಮಾಡಲಾಗಿರುವ ಕಾಮಗಾರಿಗಳಲ್ಲಿ ಲೋಪವಾಗಿದ್ದರೇ, ಅಥವಾ ಸೂಕ್ತ ದಾಖಲಾತಿಗಳನ್ನು ನೀಡದಿದ್ದರೇ ಅದನ್ನು ಕಮಿಟಿಯಲ್ಲಿ ಪರಿಶೀಲನೆ ಮಾಡುವ ಸಲುವಾಗಿ ಸಭೆ ಕರೆಯಲಾಗಿದೆ. ನಂತರ ಸಂಬಂಧಪಟ್ಟ ಆಕ್ಷೆಪಗಳನ್ನು ವಿಲೇ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರು ಹೇಳಿದರು.
ಚಂದ್ರು, ತಾಲೂಕಿನ 32 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆಯಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಕಾಮಗಾರಿಯಲ್ಲಿ ಲೋಪವಾಗಿದೆ ಎಂದು ಲೆಕ್ಕಪರಿಶೋಧನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಖಲಾತಿಗಳನ್ನು ಪಡೆದು ಅದನ್ನು ಮತ್ತೇ ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುವುದಾಗಿ ಇದೇ ಸಂದರ್ಭದಲ್ಲಿ ಇಒ ಚಂದ್ರು ತಿಳಿಸದರು.