ಛತ್ರಪತಿ ಶಿವಾಜಿ ಜಯಂತಿಯನ್ನು ಎಲ್ಲರೂ ಆಚರಿಸಬೇಕು : ಎಂ.ಎಸ್. ಚನ್ನವೀರಪ್ಪ

ಹಾಯ್ ರಾಮನಗರ (hairamanagara.in) 23 ಫೆಬ್ರವರಿ 2022

ಚನ್ನಪಟ್ಟಣ : ಹಿಂದೂ ಧರ್ಮಕ್ಕೆ ರಾಜ ಸಿಂಹಾಸನ ದೊರಕಿಸಿಕೊಟ್ಟ ಛತ್ರಪತಿ ಶಿವಾಜಿ ಜಯಂತಿಯನ್ನು ಎಲ್ಲರೂ ಆಚರಿಸಬೇಕು. ಈ ಮೂಲಕ ಶಾಲಾ, ಕಾಲೇಜು ಮಕ್ಕಳಿಗೆ ಶಿವಾಜಿಯ ಸಾಧನೆ, ಮಾತೃಪ್ರೇಮ, ಕರ್ತವ್ಯನಿಷ್ಠೆ, ರಾಷ್ಟ್ರಪ್ರೇಮ ತಿಳಿಸಬೇಕಿದೆ ಎಂದು ಸಾಧನ ಶಾಲೆಯ ಮುಖ್ಯಶಿಕ್ಷಕ ಎಂ.ಎಸ್. ಚನ್ನವೀರಪ್ಪ ತಿಳಿಸಿದರು.


ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತೋತ್ಸವವನ್ನು ಆಜಾದ್ ಬ್ರಿಗೇಡ್, ಕರ್ನಾಟಕ ಸಂಘಟನೆಯ ವತಿಯಿಂದ ಚನ್ನಪಟ್ಟಣ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಜಗತ್ತಿನ ಯುವ ಜನತೆಗೆ ಮಾದರಿಯಾಗಿದ್ದಾರೆ. ಸಾಮಾನ್ಯ ಯುವಕರ ಬೆಂಬಲದಿಂದ ಸ್ವಾಭಿಮಾನಿ ರಾಜ್ಯ ನಿರ್ಮಾಣ ಮಾಡಿದ ಶಿವಾಜಿಯ ಸಾಧನೆ ಸಾಮಾನ್ಯವಾದುದಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಕ್ರಾಂತಿಕಾರಿಗಳಿಗೆ ಶಿವಾಜಿ ಸಾಧನೆಗಳೇ ಆದರ್ಶಗಳಾಗಿದ್ದವು. ಹಾಗಾಗಿ ಶಿವಾಜಿ ಮಹಾರಾಜರ ಜಯಂತಿ ಆಚರಿಸುವ ಮೂಲಕ ಯುವಜನೆತೆ ಶಿವಾಜಿ ಬಗ್ಗೆ ಮಾಹಿತಿ ತಿಳಿಸಬೇಕಿದೆ ಎಂದರು.


ಸಂಘಟನೆಯ ಕಾರ್ಯಕರ್ತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾನ್ ಚೇತನಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು.

Leave a Reply

Your email address will not be published. Required fields are marked *