ಸರ್ಕಾರಿ ವಕೀಲ ಹುದ್ದೆಗೆ ಅರ್ಜಿ ಆಹ್ವಾನ
ಹಾಯ್ ರಾಮನಗರ (hairamanagara.in) 23 ಫೆಬ್ರವರಿ 2022
ರಾಮನಗರ : ಜಿಲ್ಲಾಡಳಿತದ ವತಿಯಿಂದ ರಾಮನಗರ ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯನ್ನು ಭರ್ತಿ ಮಾಡಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 5ರನ್ವಯ ಕನಿಷ್ಠ 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿರಬೇಕು. ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 5 ಮತ್ತು 26(2) ಹಾಗೂ 12(ಎ)(ಬಿ) & (ಸಿ) ರಲ್ಲಿ ನಿಗದಿಪಡಿಸಿರುವ ಅಗತ್ಯ ದಾಖಲಾತಿಗಳೊಂದಿಗೆ, ಜನನ ದಿನಾಂಕ, ವಿದ್ಯಾರ್ಹತೆ, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ವಕೀಲ ವೃತ್ತಿ ಸಂಬಂಧಿಸಿದಂತೆ ದೃಢೀಕರಿಸಿದ ಪ್ರತಿಗಳನ್ನೊಳಗೊಂಡ ಬಯೋಡಾಟಾವನ್ನು ಸಲ್ಲಿಸುವುದು.
ಅರ್ಜಿ ಸಲ್ಲಿಸುವವರು ಸರ್ಕಾರಿ ಅಥವಾ ಅರೆ ಸರ್ಕಾರಿ/ನಿಗಮ ಮಂಡಳಿಗಳಲ್ಲಿ ಯಾವುದೇ ಹುದ್ದೆಯನ್ನು ಪಡೆದಿರಬಾರದು. ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯಲ್ಲಿ ಕಾನೂನು ಸಲಹೆಗಾರರಾಗಿ ನೇಮಕವಾಗಿರಬಾರದು.
ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಗೆ ಮಾರ್ಚ್ 3 ರಂದು 5.00 ಗಂಟೆಯ ಒಳಗಾಗಿ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಯವರ ಕಾರ್ಯಲಯ, ಜಿಲ್ಲಾ ಕಛೇರಿಗಳ ಸಂಕೀರ್ಣ, ರಾಮನಗರ ಇಲ್ಲಿ ಸಂಪರ್ಕಿಸುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/Bd3rUGY5mEx04sz4oN6uZY
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : WhatsApp : 9880439669
Mail : rudresh.444@gmail.com