ಸ್ಪಂದನ ಚಾರಿಟಬಲ್ ಟ್ರಸ್ಟ್ ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಣೆ
ಹಾಯ್ ರಾಮನಗರ (hairamanagara.in) 22 ಫೆಬ್ರವರಿ 2022
ರಾಮನಗರ : ನಗರದ ಜಿಕೆಬಿಎಂಎಸ್ ಶಾಲೆಯ 740 ಮಕ್ಕಳಿಗೆ ಟೈ ಹಾಗೂ ಬೆಲ್ಟ್ ಗಳನ್ನು ಸ್ಪಂದನ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ.ಎಂ. ಬೈರೇಗೌಡ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಕಲಿತವರು ಮಹಾನ್ ವ್ಯಕ್ತಿಗಳಾಗಿ ರೂಪುಗೊಂಡಿರುವ ಉದಾಹರಣೆಗಳನ್ನು ವಿವರಿಸಿದರು, ಹಾಗೆಯೇ ಸರ್ಕಾರ ಶಿಕ್ಷರನ್ನು ನೇಮಿಸುವವಾಗ ಆಯ್ಕೆ ಸಂದರ್ಭದಲ್ಲಿ ಅರ್ಹತೆಯ ಆಧಾರದಲ್ಲಿ ನೇಮಿಸುವುದರಿಂದ ಗುಣಮಟ್ಟದ ಶಿಕ್ಷಣದೊರೆಯುತ್ತದೆ ಎಂದರು.
ಸ್ಪಂದನ ಚಾರಿಟಬಲ್ ಟ್ರಸ್ಟಿನ ಅದ್ಯಕ್ಷ ಬಿಡದಿಯ ಡಾ. ಮುತ್ತಣ್ಣ ಮಾತನಾಡಿ ಸರ್ಕಾರಿ ಶಾಲೆಗಳ ಹಿನ್ನಡೆಗೆ ಸರ್ಕಾರದ ನಿರ್ಲಕ್ಷ್ಯಧೋರಣೆಯೇ ಕಾರಣ. ಈ ಸಂದರ್ಭದಲ್ಲಿ ಶಿಕ್ಷಣ ವ್ಯಾಪಾರಿಕರಣವಾಗುತ್ತಿರುವ ಈ ದಿನಗಳಲ್ಲಿ ಸರ್ಕಾರಿ ಶಾಲೆಗಳ ಪುನರುಜ್ಜೀವನಗೊಳಿಸುವ ಕೆಲಸವಾಗಬೇಕು ಎಂದರು.
ಉಪನ್ಯಾಸಕ ಎಸ್. ಮಂಜುನಾಥ್ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪರಸ್ಪರ ಅರಿವಿನ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಶ್ರೀನಿವಾಸ್, ಟ್ರಸ್ಟ್ ನ ಬಿ .ಟಿ. ದಿನೇಶ್ ಬಿಳಗುಂಬ, ವಕೀಲ ಮಂಜೇಶ್ ಗೌಡ, ಬಾನಂದೂರು ನಂಜುಂಡಿ ಹಾಗೂ ಪದಮ್ ಚಂದ್, ಸಿದ್ದಲಿಂಗಸ್ವಾಮಿ, ಶಿಕ್ಷಕ ಕೃಷ್ಣಪ್ಪ ಹಾಗು ಶಾಲೆಯ ಶಿಕ್ಷಕವೃಂದ ಹಾಜರಿದ್ದರು.
‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/Bd3rUGY5mEx04sz4oN6uZY
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com