ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಪರಿಶೀಲನೆ : ಡಾ.ಜಿ.ವಿ. ಕೃಷ್ಣ ಲೋಹಿ ದಾಸ್
ಹಾಯ್ ರಾಮನಗರ (hairamanagara.in) 24 ಫೆಬ್ರವರಿ 2022
ಚನ್ನಪಟ್ಟಣ : ಗ್ರಾಮೀಣ ಪ್ರದೇಶದಲ್ಲಿ ಸುಮಾರು 70% ರೈತ ವಗ೯ ಇದ್ದರು ಸಹ ನಗರ ಪ್ರದೇಶದಲ್ಲಿ ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೇ , ಗ್ರಾಮೀಣ ಪ್ರದೇಶದ ಜನರು ಸಕಾ೯ರ ರೂಪಿಸಿರುವ ನರೇಗಾ ಯೋಜನೆಯನ್ನು ಉಪಯೋಗಿಸಿ ಕೆಲಸ ಮಾಡಿ ತಾವು ವಾಸಿಸುವ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು ಎಂದು ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಸಚಿವಾಲಯದ NIRDPR- ಕಾರ್ಯಕ್ರಮ ನಿರ್ದೇಶಕರಾದ ಡಾ.ಜಿ.ವಿ. ಕೃಷ್ಣ ಲೋಹಿ ದಾಸ್ ತಿಳಿಸಿದರು.

ತಾಲ್ಲೂಕಿನ ಮುದಗೆರೆ ಗ್ರಾಮ ಪಂಚಾಯತಿಗೆ ಇಂದು ಬೇಟಿ ನೀಡಿ 2015-16 ರಿಂದ 2018-19 ರ ಸಾಲಿನವರೆಗೆ ಮನರೇಗಾ ಯೋಜನೆಯಡಿ ಅನುಷ್ಠಾನವಾಗಿರುವ ವ್ಯಯಕ್ತಿಕ ಕಾಮಗಾರಿಗಳ ಸಂಬಂಧ ಫಲಾನುಭವಿ ಗುಂಪಿಗಳೊಂದಿಗೆ ಚಚೆ೯ ಮಾಡಿ ಯೊಜನೆಯಿಂದ ಆದ ಉಪಯೋಗದ ಬಗ್ಗೆ ಮಾಹಿತಿ ಪಡೆದರು.
ನಂತರ ಮಾತನಾಡಿ ಗ್ರಾಮೋಣ ಪ್ರದೇಶದ ಬಗ್ಗೆ ಯುವ ಜನತೆಗೆ ಇರುವ ದೋರಣಾ ಮನೋಸ್ಥಿತಿ ಕಡಿಮೆಯಾಗಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರ ರೂಪಿಸುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡರೆ ನಗರ ಪ್ರದೇಶಕ್ಕೆ ಸಮನಾಗಿ ಗ್ರಾಮೀಣ ಪ್ರದೇಶ ಸಹ ಅಭಿವೃದ್ಧಿ ಗೊಳ್ಳಲಿದೆ ಎಂದರು.

ಗ್ರಾಮದ ಜನರು ತಮ್ಮ ಸ್ವಾಥ೯ವನ್ನು ಬದಿಗಿಟ್ಟು ಸಕಾ೯ರಿ ಯೋಜನೆಗಳ ಬಗ್ಗೆ ಎಲ್ಲರಿಗೂ ತಿಳಿಸುವ ಮೂಲಕ ಉತ್ತಮ ಫಲಾನುಭವಿ ಗಳೂ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸಕಾ೯ರದ ಯೋಜನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದರು
ಮನರೇಗಾ ವ್ಯಯಕ್ತಿಕ ಕಾಮಗಾರಿಗಳ ಬಗ್ಗೆ ಮನೆ ಮನೆ ಬೇಟಿ ನೀಡಿ ಸವೆ೯ ಮಾಡುವುದರ ಮೂಲಕ ಮಾಹಿತಿ ಪಡೆದರು.ಇಲ್ಲಿ ನಡೆದಿರುವ ವೈಯಕ್ತಿಕ ಕಾಮಗಾರಿಗಳು ರಾಜ್ಯ/ ರಾಷ್ಟ್ರಕ್ಕೆ ಮಾದರಿ ಎಂದರು.

ಈ ಸಂದಭ೯ದಲ್ಲಿ ತಾಲ್ಲೂಕು ಕಾಯ೯ನಿವ೯ಕಾಧಿಕಾರಿ ಚಂದ್ರು , ತಾಲ್ಲೂಕು ಸಹಾಯಕ ನಿರ್ದೇಶಕರು ಲೋಕೇಶ್ , ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೀಮಪ್ಪ , ಗ್ರಾಮಪಂಚಾಯತಿ ಪಿಡಿಓ ದೇವರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷರು, ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ್ ಕುಮಾರ್, ತಾ.ಪಂ ಎಂಐಎಸ್ ಪ್ರಶಾಂತ್, ತಾ.ಪಂ. ಟಿಸಿ ಸಚಿನ್, ತಾ.ಪಂ. ಐಇಸಿ ಸಂಯೋಜಕಿ ಭವ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದರು.
‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/Bd3rUGY5mEx04sz4oN6uZY
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : WhatsApp : 9880439669Mail : rudresh.444@gmail.com