ಆನೆ ದಾಳಿ : ಲಂಬಾಣಿದೊಡ್ಡಿ ಗ್ರಾಮದಲ್ಲಿ ತೆಂಗು, ಅಡಿಕೆ, ಬಾಳೆ ತೋಟ ನಾಶ
ರಾಮನಗರ : ತಾಲೂಕಿನ ಕೈಲಾಂಚ ಹೋಬಳಿಯ ಲಂಬಾಣಿದೊಡ್ಡಿಗ್ರಾಮದಲ್ಲಿ ನಾಲ್ಕು ಆನೆಗಳು ಶನಿವಾರ ರಾತ್ರಿ ಕೆ.ಪಿ ದೊಡ್ಡಿಗ್ರಾಮದ ವಾಸು ಪುಟ್ಟಮಾಸ್ತಿಗೌಡ ಎಂಬ ರೈತರ ತೆಂಗು, ಅಡಿಕೆತೋಟ, ಬಾಳೆತೋಟ, ನೀರಾವರಿ ಪೈಪು ನಾಶಪಡಿಸಿವೆ.
ಕಾವೇರಿ ವನ್ಯಜೀವಿಧಾಮದಿಂದ ಬಂದಿರುವ ನಾಲ್ಕು ಆನೆಗಳ ತಂಡ ಹಂದಿಗೊಂದಿಅರಣ್ಯ ಸೇರಿರಾತ್ರಿ ವೇಳೆಯಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಿ ರೈತರ ಫಸಲು ನಾಶಪಡಿಸುತ್ತಿವೆ.

ಕಳೆದ ಮೂರು ದಿನಗಳ ಹಿಂದಷ್ಟೇ ಒಂಟಿ ಆನೆ ಬಾಳೆ ತೋಟಕ್ಕೆ ನುಗ್ಗಿ ಬಾಳೆತೋಟ ನಾಶಪಡಿಸಿತ್ತು. ಶನಿವಾರ ರಾತ್ರಿ ಬಂದ ಆನೆಗಳ ಹಿಂಡು ಬಾಳೆ ತೋಟ, ಅಡಿಕೆ ಸಸಿ, ತೆಂಗಿನ ಮರಗಳನ್ನು ಅಪಾರ ಪ್ರಮಾಣದಲ್ಲಿ ನಾಶಪಡಿಸಿವೆ. ಆನೆಗಳ ದಾಳಿಯಿಂದ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬಾಳೆತೋಟ, ಅಡಿಕೆ ಸಸಿಗಳು ನಾಶವಾಗಿದೆ. ಕೂಡಲೇ ಆನೆಗಳನ್ನು ಅವುಗಳ ಸ್ವಸ್ಥಾನಕ್ಕೆ ಸೇರಿಸಿ ಪದೇ ಪದೇ ಆನೆಗಳು ಹಂದಿಗೊಂದಿ ಅರಣ್ಯಕ್ಕೆ ಬರುವುದನ್ನು ತಪ್ಪಿಸಬೇಕು ಎನ್ನುತ್ತಾರೆ ರೈತ ವಾಸು ಪುಟ್ಟಮಾಸ್ತಿಗೌಡ.