ಕೇಶವ ಕೃಪ ಸಂವರ್ಧನಾ ಸಮಿತಿ ವತಿಯಿಂದ ಬಾಚಹಳ್ಳಿದೊಡ್ಡಿ ತಾಂಡ್ಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ

ಕನಕಪುರ : ಬೆಂಗಳೂರಿನ ಕೇಶವ ಕೃಪ ಸಂವರ್ಧನಾ ಸಮಿತಿ ವತಿಯಿಂದ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಕ್ಲಸ್ಟರ್ ವ್ಯಾಪ್ತಿಯ ಬಾಚಹಳ್ಳಿದೊಡ್ಡಿ ತಾಂಡ್ಯದ ಶಾಲಾ ಮಕ್ಕಳಿಗೆ ಉಚಿತವಾಗಿ desk bag kit ಗಳನ್ನು ವಿತರಿಸಿದರು. ಜೊತೆಗೆ ಮಕ್ಕಳಿಗೆ ಕುಡಿಯುವ ನೀರಿನ ಬಾಟಲಿಗಳನ್ನು ನೀಡಿದರು.

ಸಂವರ್ಧನಾ ಸಂಸ್ಥೆಯ 15 ಜನ ಸ್ವಯಂ ಸೇವಕರು ಮಕ್ಕಳೊಡನೆ ಸಂವಾದ ಜೊತೆಗೆ ಪೋಷಕರೊಡನೆ ಬೆರೆತು ಹಲವು ವಿಚಾರಗಳನ್ನು ಹಂಚಿಕೊಂಡರು.

ಈ ಸಂಸ್ಥೆಯು ಈಗಾಗಲೇ ತಾಲ್ಲೂಕಿನ ಹಲವು ಶಾಲೆಗಳಿಗೆ ಈ ರೀತಿಯ ಹಲವು ನೆರವುಗಳನ್ನು ನೀಡಿದೆ. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಆದ ನೇ.ರ.ಪ್ರಭಾಕರ ಸ್ವಾಗತಿಸಿದರು.

ಮಕ್ಕಳಿಗೆ ಗೀತ ಗಾಯನವನ್ನು ಕಲಾವಿದ ಹಾಗೂ CRP ಯವರಾದ ಲಿಂಗರಾಜುರವರು ನಡೆಸಿ ಮಕ್ಕಳ ಮನರಂಜಿಸಿದರು.

ನೀತಿಯುತ ವಿಚಾರಗಳನ್ನು ಶ್ರೀನಿವಾಸ್ ರವರು ನಡೆಸಿದರು.

ಗ್ರಾಮ ಪಂಚಾಯತ್ ಸದಸ್ಯ ರಾಜೀವ್ ಗಾಂಧಿ, SDMC ಅಧ್ಯಕ್ಷ ನಂದೀಶ್ ನಾಯ್ಕ, ಗ್ರಾಮದ ಮುಖಂಡ ಕೃಷ್ಣನಾಯ್ಕ, ಉಪಾಧ್ಯಕ್ಷ ಮುತ್ತುರಾಜ ನಾಯ್ಕ, ಕುಮಾರನಾಯ್ಕ ಅರ್ಜುನ ನಾಯ್ಕ ಹಾಗೂ ಶಿಕ್ಷಕಿಯರಾದ ಸುಮಿತ್ರಾ ಮತ್ತು ಸೌಭಾಗ್ಯ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *