ಶಿಕ್ಷಕ ತಗಚಗೆರೆ ನಾಗರಾಜುಗೆ ನಿವೃತ್ತಿ ಗೌರವ
ಚನ್ನಪಟ್ಟಣ : ತಾಲೂಕಿನ ತಗಚಗೆರೆ ನಾಗರಾಜು ಮೇಷ್ಟ್ರು ನಾಗಣ್ಣ ಎಂದೇ ಖ್ಯಾತಿ ಪಡೆದವರು. ವಯೋನಿವೃತ್ತಿ ಹೊಂದಿರುವ ನಾಗರಾಜುರವರಿಗೆ ಸುಣ್ಣಘಟ್ಟ ಸರ್ಕಾರಿ ಶಾಲೆಯಲ್ಲಿ ಸನ್ಮಾನ ಮಾಡುವ ಮೂಲಕ ಗೌರವ ಸೂಚಿಸಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಸಹ ನಾಗರಾಜು ಸದಾ ಸಾಮಾಜಿಕ ಚಿಂತನೆ ಹಾಗೂ ಸಮಾಜಸೇವೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು.

ಇನ್ನು ನಾಗರಾಜುರವರು ಚನ್ನಪಟ್ಟಣದ ಹರೂರು ಗ್ರಾಮದಲ್ಲಿ 10 ವರ್ಷ, ಸಣಬನಹಳ್ಳಿಯಲ್ಲಿ 3 ವರ್ಷ, ಬಿ.ವಿ.ಹಳ್ಳಿಯಲ್ಲಿ 4 ವರ್ಷ, ಹೊಂಗನೂರು ಕ್ಲಸ್ಟರ್ ಸಿ ಅರ್ ಪಿ (ಕೇಂದ್ರ ಸಂಪನ್ಮೂಲ ವ್ಯಕ್ತಿ) ಯಾಗಿ 5 ವರ್ಷ ಸೇವೆ ಸಲ್ಲಿಸಿ, ಕೊನೆಯದಾಗಿ ಸುಣ್ಣಘಟ್ಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ 6 ವರ್ಷಕ್ಕೂ ಹೆಚ್ಚು ಕಾಲ ಉತ್ತಮ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿದ್ದಾರೆ. ಶಿಕ್ಷಕ ನಾಗರಾಜುರವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಕನ್ನಡರಾಜ್ಯೋತ್ಸವ ಪ್ರಶಸ್ತಿ ಸಹ ಲಭಿಸಿದೆ. ಸುಣ್ಣಘಟ್ಟ ಗ್ರಾಮಸ್ಥರು ಸೇರಿ ಅಪಾರ ಶಿಕ್ಷಕವೃಂದದವರು ನಾಗರಾಜು ಹಾಗೂ ಪತ್ನಿ ಸುಜಯ್ ನಾಗ್ ರವರಿಗೂ ಸಹ ಸನ್ಮಾನ ಮಾಡಿ ಗೌರವಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಭಾವುಕರಾದಾಗ ನಾಗರಾಜು ಹಾಗು ಅವರ ಕುಟುಂಬದ ಸದಸ್ಯರು ಭಾವುಕರಾದರು. ಈ ಸಂದರ್ಭದಲ್ಲಿ ನಾಗರಾಜು ಪುತ್ರಿ ಧನುಶ್ರೀವೆಂಕಟೇಶ್, ಸೊಸೆ ಭಾನುಪ್ರಿಯಮನು ಇದ್ದರು.