ಶಾಂತಿನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ರಾಮನಗರ : ಇಲ್ಲಿನ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಕನ್ನಡ ಪ್ರತಿಭಾ ಪರೀಕ್ಷೆ ನಡೆಸಿ, ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ, ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ದೀಲಿಪ್ ರವರು ಮಹಿಳೆಯರ  ಸಾಧನೆಗೆ ಬೆಲೆಕಟ್ಟಲಾಗದು ಅವರ ಅವಿರತ ಸೇವೆ ಅವಿಸ್ಮರಣೀಯವಾದು. ಎಲ್ಲಾ ವರ್ಗಗಳಲ್ಲೂ ಗಂಡಿನಷ್ಟೆ ಸಮಾನವಾಗಿ ನಿಂತು ಬೆಳಯುತ್ತಿದ್ದಾರೆ. ಅವರಿಗೆ ಸದಾ ಶುಭವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕಿ ಫಾರನ ಮಾತಾಡಿ ಹೆಣ್ಣು ಒಬ್ಬ ಆರ್ಕಿಟೆಕ್ಚರ್ ಅವಳಿಲ್ಲದೆ ಸಂಸಾರಿಕ ಜೀವನ ಅಪೂರ್ಣ ಎಷ್ಟೆ ಕೆಲಸದ ಒತ್ತಡ ಇದ್ದರು ತನ್ನ ಜವಾಬ್ದಾರಿಯನ್ನು ಎಂದಿಗೂ ಮರೆಯದೆ  ಪ್ರಮಾಣಿಕತೆಯಿಂದ  ನಿರ್ವಹಿಸುತ್ತಾಳೆ ಎಂದು ತಿಳಿಸುತ್ತಾ ಪುರುಷರು ಆಯೋಜಿಸಿದ್ದ  ಈ ಕಾರ್ಯಕ್ರಮಕ್ಕೆ ಧನ್ಯವಾದ ತಿಳಿಸಿದರು.  ಕನ್ನಡ ಉಪನ್ಯಾಸಕರಾದ ಯೋಗೇಶ್ ದ್ಯಾವಪಟ್ಟಣ ಮಹಿಳಾ ದಿನಾಚರಣೆ ಕುರಿತು ಕವಿತೆ ವಾಚಿಸಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿಭಾಗಿಯ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *