ಅಕ್ಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಮಂಜುಳಾ ಅವಿರೋಧ ಆಯ್ಕೆ
ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿ ಅಕ್ಕೂರು ಗ್ರಾಮ ಪಂಚಾಯತಿ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಬಿ.ಆರ್.ಮಂಜುಳಾ ಕೆಂಚಯ್ಯ ಅವರು ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಉಪಾಧ್ಯಕ್ಷೆ ಪುಷ್ಪಲತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಬಿ.ಆರ್.ಮಂಜುಳಾ ಕೆಂಚಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಾಲ್ಲೂಕು ಪಂಚಾಯತಿ ಇಒ ಶಿವಕುಮಾರ್ ಅವರು ಮಂಜುಳಾ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಎಂಟು ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಐವರು ಕಾಂಗ್ರೆಸ್ ಬೆಂಬಲಿತರು ಹಾಗೂ ಮೂವರು ಜೆಡಿಎಸ್ ಬೆಂಬಲಿತ ಸದಸ್ಯರಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಗ್ರಾಪಂ ಅಧ್ಯಕ್ಷ ಎ.ಪಿ.ಹರೀಶ್, ನಿಕಟಪೂರ್ವ ಅಧ್ಯಕ್ಷ ದೊಡ್ಡವೀರಣ್ಣ, ನಿಕಟಪೂರ್ವ ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಬೋರಮ್ಮ, ಗೌರಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಪಿಡಿಒ ಮಹೇಶ್ವರಯ್ಯ, ಕಾರ್ಯದರ್ಶಿ ಶಾರದಮ್ಮ ಹಾಗೂ ಗ್ರಾಪಂ ಸಿಬ್ಬಂದಿ ಚುನಾವಣೆ ಸುಗಮವಾಗಿ ನಡೆಯಲು ಸಹಕಾರ ನೀಡಿದರು.
ಗ್ರಾಪಂ ಅಧ್ಯಕ್ಷ ಎ.ಪಿ.ಹರೀಶ್, ಮಾಜಿ ಅಧ್ಯಕ್ಷೆ ವಸಂತ ಎಚ್. ಹನುಮಯ್ಯ, ಕೆಪಿಸಿಸಿ ಸದಸ್ಯ ಶಿವಲಿಂಗಯ್ಯ, ಮುಖಂಡರಾದ ಪುಟ್ಟಸ್ವಾಮಯ್ಯ,ಎಚ್.ನಂಜೇಗೌಡ, ಬೆಟ್ಟಸ್ವಾಮಿಗೌಡ, ಬಿ.ರವಿ, ಬಸವಯ್ಯ, ಹುಲ್ಲೂರಯ್ಯ, ಎ.ಬಿ.ದೇವರಾಜು, ಹೊಂಬೇಗೌಡನದೊಡ್ಡಿ ಲೋಕೇಶ್, ಶಿವರಾಜು,ಕೆಂಚಯ್ಯ,ಪರಮಶಿವಯ್ಯ,ವಿರುಪಸಂದ್ರ ವರದರಾಜು, ಎಚ್.ನಿಂಗಯ್ಯ, ಚಂದ್ರಶೇಖರ್, ಎಚ್.ವಿ.ಲಿಂಗರಾಜು, ಹಾಗೂ ಗ್ರಾಮಸ್ಥರು ಅಕ್ಕೂರು ಗ್ರಾಪಂ ನೂತನ ಉಪಾಧ್ಯಕ್ಷೆ ಮಂಜುಳಾ ಅವರನ್ನು ಅಭಿನಂದಿಸಿದರು.