ಮಾರ್ಚ್ 12, 13ರಂದು ಜಾನಪದ ಲೋಕದಲ್ಲಿ ‘ಪ್ರವಾಸಿ ಜಾನಪದ ಲೋಕೋತ್ಸವ’

ರಾಮನಗರ : ಕನ್ನಡ ನಾಡಿನಜಾನಪದ ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ ಆಶಯಗಳನ್ನಾಗಿರಿಸಿಕೊಂಡು ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತು ಕಳೆದ 41ವರ್ಷಗಳಿಂದ ವರ್ಷ ಪೂರ್ತಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರ ಬಳಿ ಇರುವ ಜಾನಪದ ಲೋಕದಲ್ಲಿ 2022ರ ಮಾರ್ಚ್ 12 ಮತ್ತು 13 ಎರಡು ದಿನ ಪ್ರವಾಸಿ ಜಾನಪದ ಲೋಕೋತ್ಸವ-2022 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಘಟಕದ ಅದ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.
ಇಲ್ಲಿನ ಜಾನಪದ ಲೋಕದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ದಿನ ಬೆಳಿಗ್ಗೆ 9 ರಿಂದರಾತ್ರಿ 10 ಗಂಟೆವರೆಗೂರಾಜ್ಯಹಾಗೂ ಹೊರ ರಾಜ್ಯಗಳ ಜಾನಪದಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಜಿಲ್ಲಾಅಧ್ಯಕ್ಷರೊಡನೆ ಸಂವಾದ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಉದ್ಘಾಟನಾಸಮಾರಂಭ :
ದಿನಾಂಕ:12.03.2022ಬೆಳಗ್ಗೆ 10.30 ಗಂಟೆಗೆ ಮಾನ್ಯಇಂಧನ ಹಾಗೂ ಕನ್ನಡ ಮತ್ತ ಸಂಸ್ಕೃತಿ ಸಚಿವರಾದ ವಿ.ಸುನಿಲ್ ಕುಮಾರ್ ಪ್ರವಾಸಿ ಜಾನಪದ ಲೋಕೋತ್ಸವ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಮನಗರ ಜಿಲ್ಲೆಯ ಸಂಸದರು, ವಿಧಾನ ಪರಿಷತ್ ಸದಸ್ಯರುಗಳು, ಶಾಸಕರು, ಜಿಲ್ಲಾ ವರಿಷ್ಠಾಧಿಕಾರಿಗಳು ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಇದೇ ದಿನ ಕರಕುಶಲ ಮೇಳ ಉದ್ಘಾಟನೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಬಿ, ಮಂಜಮ್ಮಜೋಗತಿ ನಡೆಸಿಕೊಡಲಿದ್ದಾರೆ. ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ರಾಮನಗರ ಇವರವತಿಯಿಂದ ಎರಡೂ ದಿನ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಗಳಲ್ಲಿ ಜಾನಪದ ಸಂವರ್ಧನೆ :
ಮಧ್ಯಾಹ್ನ 2.30 ಗಂಟೆಗೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲೆಗಳ ಅಧ್ಯಕ್ಷರುಗಳೊಡನೆ ಸಂವಾದಕಾರ್ಯಕ್ರಮ, ಸ್ಥಳೀಯ ಕಲಾವಿದರಿಂದ ಕೊಂಬು ಕಹಳೆ, ತಮಟೆ ವಾದನ, ಪೂಜಾಕುಣಿತ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ವೀರಗಾಸೆ, ಗೊರವರಕುಣಿತ ಪ್ರದರ್ಶನಗಳಿರುತ್ತವೆ. ವಿಶೇಷವಾಗಿ ಗ್ರಾಮೀಣ ಪರಿಸರದಲ್ಲಿ ಕಾಣಬಹುದಾದ ಬಳೆಗಾರ, ಉರುಮೆ (ಪೆಟ್ಟಿಗೆ ಮಾರಮ್ಮ) ಕಲಾವಿದರು, ದಾಸಪ್ಪ-ಜೋಗಯ್ಯ, ಬುಡಬುಡಕೆಯವರು, ಹಚ್ಚೆ ಕಲಾವಿದರು, ತಂಬೂರಿ, ಏಕತಾರಿ, ಸೋಬಾನೆ ಕಲಾವಿದರು ಹಳ್ಳಿ ನೈಜ್ಯ ವಾತಾವರಣದಅನಾವರಣ ಮಾಡಲಿದ್ದಾರೆ ಎಂದರು.
ರಾಜ್ಯ ಹೊರ ರಾಜ್ಯ ಕಲಾವಿದರಿಂದ ಜಾನಪದ ವೈಭವ ಸಂಜೆ 5.00 ಗಂಟೆಗೆ ಮತ್ತುಶ್ರೀ ಕೆರೆಮನೆ ಶಿವನಂದ ಹೆಗಡೆ, ಶ್ರೀ ಇಡಗುಂಜಿ ಮಹಾಗಣಪತಿಯಕ್ಷಗಾನ ಮಂಡಳಿ ಇವರಿಂದ “ಸುಭದ್ರಾಕಲ್ಯಾಣ” ಯಕ್ಷಗಾನಪ್ರದರ್ಶನವಿದೆ ಎಂದರು.
ಬದಲಾದಕಾಲಘಟ್ಟದಲ್ಲಿಜಾನಪದ-ಪರ್ಯಾಯಚಿಂತನೆ,ವಿಚಾರ ಸಂಕಿರಣ :
ದಿನಾಂಕ.13.03.2022 ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ.ತಿಮ್ಮೇಗೌಡಅವರಅಧ್ಯಕ್ಷತೆಯಲ್ಲಿಹಿರಿಯಜಾನಪದ ವಿದ್ವಾಂಸರುಗಳಿಂದ ವಿಚಾರ ಸಂಕಿರಣಏರ್ಪಡಿಸಲಾಗಿದೆ. ಕನ್ನಡ ನಾಡಿನ ಹಿರಿಯ ಜಾನಪದ ವಿದ್ವಾಂಸರಾದ ಡಾ. ಬಿ. ಎ ವಿವೇಕ ರೈ ಅವರು ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಡಾ ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕ ನುಡಿ, ಶ್ರೀ ಶಶಿಧರ ಭಾರಿಘಾಟ್ಜಾನಪದ ಕಲೆ: ಪ್ರಯೋಗ ಮತ್ತು ಪ್ರದರ್ಶನ, ಡಾ.ಬಾನಂದೂರುಕೆಂಪಯ್ಯಜನಪದ ಸಂಗೀತ:ಆಧುನಿಕ ಸ್ಪರ್ಶ, ಶ್ರೀ ಕೆರೆಮನೆ ಶಿವಾನಂದ ಹೆಗಡೆಜನಪದರಂಗಭೂಮಿ ಹೊಸ ಸಾಧ್ಯತೆಗಳು, ಡಾ.ಮೋಹನ ಚಂದ್ರಗುತ್ತಿಜನಪದಆರಾಧನೆ, ಆಚರಣೆಗಳು: ಅಧ್ಯಯನದ ಹೊಸ ಸಾಧ್ಯತೆಗಳು ಕುರಿತು ಮಾತನಾಡಲಿದ್ದಾರೆ ಎಂದರು.
ಹಿರಿಯಜಾನಪದ ವಿದ್ವಾಂಸರು ಮತ್ತುಕಲಾವಿದರಿಗೆ ಪ್ರಶಸ್ತಿ ಪ್ರದಾನ :
ದಿನಾಂಕ.13.03.2022 ರಂದುಸಂಜೆ 5 ಗಂಟೆಗೆ ಜಾನಪದ ಪ್ರಶಸ್ತಿ ಪ್ರದಾನಕಾರ್ಯಕ್ರಮವಿದ್ದು, ಶ್ರೀ ಆದಿಚುಂಚನಗಿರಿ ರಾಮನಗರ ಶಾಖಾ ಮಠಾಧೀಶರಾದ ಶ್ರೀಅನ್ನದಾನೇಶ್ವರನಾಥ ಸ್ವಾಮಿಗಳು ಸಮಾರಂಭದ ದಿವ್ಯಸಾನಿಧ್ಯವನ್ನು ವಹಿಸಲಿದ್ದಾರೆ. ಮಾನ್ಯಉನ್ನತ ಶಿಕ್ಷಣ, ಮಾಹಿತಿತಂತ್ರಜ್ಞಾನ ಸಚಿವರಾದ ಡಾ. ಸಿ.ಎನ್ ಅಶ್ವಥನಾರಾಯಣಅವರುಹಿರಿಯಜಾನಪದವಿದ್ವಾಂಸರು, ಕಲಾವಿದರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾನ್ಯ ಶಾಸಕರಾದಶ್ರೀಮತಿ ಅನಿತಾಕುಮಾರಸ್ವಾಮಿಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜಿಲ್ಲಾವಾರು, ಕಲಾವಾರು ಪ್ರಶಸ್ತಿಗೆ ಆಯ್ಕೆಯಾದಕಲಾವಿದರಿಗೆಒಟ್ಟು27 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದೇಸಂದರ್ಭದಲ್ಲಿ“ರಾಮನಗರ ಜಿಲ್ಲೆಯ ಜನಪದ ಕಲಾವಿದರು” ಮತ್ತು“ಚಿಕ್ಕಮಗಳೂರು ಜಿಲ್ಲಾಜನಪದ ಕಲಾ ಸಾಧಕರು” ಎಂಬ ಎರಡು ಪುಸ್ತಕಗಳ ಬಿಡುಗಡೆಯಾಗಲಿವೆ ಎಂದರು.
ರಾಜ್ಯ, ಹೊರ ರಾಜ್ಯ ಕಲಾವಿದರಿಂದ ಜಾನಪದ ವೈಭವ :
ಅದೇ ದಿನ ಸಂಜೆ6.00 ಗಂಟೆಯ ನಂತರ ಹೊರರಾಜ್ಯ ಕೇರಳದ ಪನಿಯಾನಿರ್ಧಮ ಮತ್ತು ಕಂಬಾಲನಟ್ಟಿ ನೃತ್ಯ, ಮಹಾರಾಷ್ಟ್ರದ ಸೋಂಗಿ ಮುಖವಟೆ, ತಮಿಳುನಾಡಿನ ಕರಗಂ ಮತ್ತುಕಾವಡಿ, ಆಂಧ್ರಪ್ರದೇಶದ ವೀರನಾಟ್ಯಮ್ ಮತ್ತುಗರಗಲು ಮಧ್ಯಪ್ರದೇಶದ ಬಧಾಯಿಯ ನೃತ್ಯ ಮತ್ತುತೆಲಂಗಾಣದ ಬೊನಾಲು ನೃತ್ಯ ಪ್ರದರ್ಶನಗಳನ್ನು ಜಾನಪದ ಲೋಕಕ್ಕೆ ಬಂದುಕಲಾಪ್ರದರ್ಶನ ನೀಡಲಿದ್ದಾರೆ. ಹಾಸನದ ಪ್ರಸಿದ್ಧ ತೊಗಲುಗೊಂಬೆಕಲಾವಿದ ಶ್ರೀ ಗುಂಡುರಾಜುತಂಡದವರಿಂದತೊಗಲುಗೊಂಬೆ ಮತ್ತು ಸಲಾಕೆ ಗೊಂಬೆ ಪ್ರದರ್ಶನ. ಕರ್ನಾಟಕದ ಕಲೆಗಳಾದಜಗ್ಗಲಿಗೆ ಮೇಳ, ನಂದಿ ಧ್ವಜಕುಣಿತ, ಪೂಜಾಕುಣಿತ, ಚಿಣ್ಣರಜನಪದ ನೃತ್ಯ, ಕಾಡುಗೊಲ್ಲರಕೊರವಂಜಿಕೋಲಾಟ, ಜೇನುಕುರುಬರಅಡಲೆಮರಕುಣಿತ, ಜೋಗತಿ ನೃತ್ಯ, ಹಗಲು ವೇಷ, ಕಣಿ ವಾದನ, ಬೇಡರ ವೇಷ, ಹೆಜ್ಜೆಕುಣಿತಕೋಲಾಟ, ಕರಗಕುಣಿತ, ತೊಗಲು ಗೊಂಬೆ ಕರಿಭಂಟನ ಕಾಳಗ, ಸಲಾಕೆ ಗೊಂಬೆ ಕುಣಿತ, ಪಟಾಕುಣಿತ, ತಮಟೆಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಹಾಡಾನ ಬನ್ನಿ ದನಿ ಎತ್ತಿ, ಜನಪದ ನೃತ್ಯ, ಗಾಯನಇತ್ಯಾದಿ ಕಲೆಗಳು ಪ್ರದರ್ಶನಗೊಳ್ಳಲಿವೆ ಎಂದರು.
ಪ್ರವಾಸಿ ಜಾನಪದ ಲೋಕೋತ್ಸಕ್ಕೆಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತುರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತ್ತಿದ್ದುಎರಡೂ ದಿನ ಸಾರ್ವಜನಿಕರಿಗೆಜಾನಪದ ಲೋಕ ಮತ್ತು ಲೋಕೋತ್ಸವವೀಕ್ಷಣೆಗೆಉಚಿತ ಪ್ರವೇಶವಿರುತ್ತದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತಿ ಮೇನೆಜಿಂಗ್ ಟ್ರಸ್ಟಿ ಆದಿತ್ಯಾನಂಜರಾಜ್ ಇದ್ದರು.

Leave a Reply

Your email address will not be published. Required fields are marked *