ಬೆಂಗಳೂರಿನಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಿಗೆ ಡಬ್ಲ್ಯೂಇಎಫ್‍ಟಿ ಫೌಂಡೇಷನ್‍ನಿಂದ ವಿಮೆಂಟಾಸಿಸ್ಟಿಕ್ ಆ್ಯಪ್ ಬಿಡುಗಡೆ ಮತ್ತು ಸನ್ಮಾನ

ಬೆಂಗಳೂರು : ಲಾಭರಹಿತ ಸಂಸ್ಥೆ ವಿಮೆನ್ ಆಂತ್ರಪ್ರಿನ್ಯೂರ್ಸ್ ಫಾರ್ ಟ್ರಾನ್ಸ್‍ಫಾರ್ಮೇಷನ್(ಡಬ್ಲ್ಯೂಇಎಫ್‍ಟಿ) ಮಹಿಳೆಯರಿಗೆ ಜಾಲ ನಿರ್ಮಿಸುವ ಮತ್ತು ಬೆಂಬಲಿಸುವ ಸಂಘಟನೆಯಾಗಿದ್ದು ಬೆಂಗಳೂರಿನಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಿಗೆ ಸನ್ಮಾನಿಸಿತು. ಈ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ ಮಹಿಳಾ ಉದ್ಯಮಿಗಳಿಗೆ ಸನ್ಮಾನಿಸಿತು.  

ಸೋಮ್ಯ ಲುಹಾಡಿಯಾ ವರ್ಷದ ಯುವ ಸಾಧಕಿ, ಸುಜ್ಯೋತಿ ಎನ್.ಪ್ರಸಾದ್, ಪುಷ್ಪಲತಾ ಎಂ.ಎಸ್, ಡಾ.ಶ್ರೇಯಾ ಗೋವಿಂದ್, ಗಾಯತ್ರಿ ವಂಸಿ, ಸ್ವಾತಿ ಝಾ, ದೀಪ್ತಿ ಬಾಬು, ಅನುಜಾ ಸೋನಿ, ದೀಪ್ತಿ ಭಂಡಾರಿ, ಡಾ.ಸಮಿನಾ ಎಫ್.ಜಮೀನ್ದಾರ್, ರೂಪಾ ದೇಶ್‍ರಾಜ್, ಶಿಲ್ಪಾ ಕುಲಶ್ರೇಷ್ಠ, ರಶ್ಮಿ ವಿ.ಕುಲಕರ್ಣಿ, ಮಂಜೂಶ್ರೀ ಎನ್., ಸರ್‍ಗಮ್ ಧವನ್ ಭಾವನ, ಸ್ವರ್ಣ ರಾಜ, ಡಿಂಪಲ್ ವರ್ಮಾ, ಸುದಕ್ಷಿಣ ಭಟ್ಟಾಚಾರ್ಯ, ಪ್ರೀತಿ ಕಬ್ರಾ, ಸ್ಮಿತಾ ಆರಾಮಗಲಿ, ಆರ್ತಿ ನೋಟಿಯಾಲ್ ಅವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಡಬ್ಲ್ಯೂಇಎಫ್‍ಟಿ ತನ್ನ ಆ್ಯಪ್ `ವಿಮೆಂಟಾಸ್ಟಿಕ್’ ಮಹಿಳಾ ಉದ್ಯಮಿಗಳಿಗೆ ಸಂಪರ್ಕ ಹೊಂದಲು, ಪರಸ್ಪರ ಜಾಲ ನಿರ್ಮಿಸಿಕೊಳ್ಳಲು, ಮುಕ್ತವಾಗಿ ಮಾತನಾಡಲು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಡಿಜಿಟಲ್ ವೇದಿಕೆಯಾಗಿದೆ. 

ಮಹಿಳಾ ಉದ್ಯಮಿಗಳು ಅಸಂಖ್ಯ ಸವಾಲುಗಳನ್ನು ಎದುರಿಸುತ್ತಾರೆ, ಆದ್ದರಿಂದ ಡಬ್ಲ್ಯೂಇಎಫ್‍ಟಿ ಫೌಂಡೇಷನ್ ಮಹಿಳೆಯರಿಗೆ ಅವರ ಉದ್ಯಮಶೀಲತೆಯ ಕನಸುಗಳಿಗೆ ನೆರವಾಗುವ ಉಪಕ್ರಮವಾಗಿ ಪ್ರಾರಂಭವಾಯಿತು. ಆ್ಯಪ್ ಬಿಡುಗಡೆಯು ಮಹಿಳೆಯರಿಗೆ ತಕ್ಷಣ ಲಭ್ಯತೆ ಮತ್ತು ವಿಸಿಬಿಲಿಟಿ ನೀಡುವ ಸಾಮಾನ್ಯ ವೇದಿಕೆಯಾಗಿದೆ. ವಿಮೆಂಟಾಸ್ಟಿಕ್ ಮಹಿಳಾ ಉದ್ಯಮಿಗಳ ಸಂಪರ್ಕ ಹೊಂದುವ ಮತ್ತು ತಲುಪುವ ಮೂಭೂತ ಅಗತ್ಯಗಳನ್ನು ಪೂರೈಸುತ್ತದೆ.

ವಿಮೆಂಟಾಸ್ಟಿಕ್ ಅನ್ನು ಇತಿ ರಾವತ್, ಸಂಜಯ್ ಕೌಲ್ ಮತ್ತು ಗೌರವ್ ರಹೇಜಾ ಅವರಿಂದ ಸ್ಥಾಪನೆಯಾಗಿದ್ದು ಸ್ಥಳದಲ್ಲಿಯೇ ಹಲವಾರು ಮಹಿಳೆಯರು ಆ್ಯಪ್ ಡೌನ್‍ಲೋಡ್ ಮಾಡಿಕೊಂಡರು. ಈ ಕಾರ್ಯಕ್ರಮದಲ್ಲಿ ಆ್ಯಪ್ ಸಂಸ್ಥಾಪಕರೊಂದಿಗೆ ರೇಖಾ ಶರ್ಮಾ, ದೀಪಿಕಾ ಟ್ರೆಹಾನ್, ಅಪರ್ಣಾ ವೇದಾಪುರಿ ಸಿಂಗ್, ಅಲಿನಾ ಅಲಂ, ವಂದನಾ ಸುರಿ, ಅನಿಶಾ ಸಿಂಗ್ ಭಾಗವಹಿಸಿದ್ದರು. 

ವೆಫ್ಟ್ ಫೌಂಡೇಷನ್ ಸಂಸ್ಥಾಪಕಿ ಇತಿ ರಾವತ್, “ಈ ಆ್ಯಪ್ ಬಿಡುಗಡೆಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ ನಮಗೆ ಬಹಳ ಸಂತೋಷ ತಂದಿದೆ. ವಿಮೆಂಟಾಸ್ಟಿಕ್ ಮಹಿಳೆಯರಿಗೆ ಈಗಾಗಲೇ ಇರುವ ಆಂತರಿಕ ಸಾಮಥ್ರ್ಯ ಮತ್ತು ಉದ್ಯಮಿಗಳಾಗಿ ಯಶಸ್ವಿಯಾಗಲು ಕೌಶಲ್ಯದ ಫಲಿತಾಂಶ ಎನ್ನುವುದು ನಮ್ಮ ನಂಬಿಕೆಯಾಗಿದೆ. ನೆಟ್‍ವರ್ಕಿಂಗ್ ಉದ್ಯಮಿಯಾಗಲು ಅತ್ಯಂತ ಅಗತ್ಯ ಆಯಾಮವಾಗಿದೆ ಮತ್ತು ನಮ್ಮ ಆ್ಯಪ್ ಅದನ್ನು ಹಿಂದೆಂದಿಗಿಂತಲೂ ಸರಳಗೊಳಿಸಿದೆ. ಒಂದೇ ಗುಂಡಿ ಒತ್ತುವುದರೊಂದಿಗೆ ಬಂಡವಾಳ ಪಡೆಯುವ, ಕಾನೂನು ಆರೋಗ್ಯ ಮತ್ತು ಕೌನ್ಸೆಲಿಂಗ್ ಹಾಗೂ ಇನ್ನಿತರೆ ನೆರವನ್ನು ಸಂಬಂಧಿಸಿದ ಗ್ರೂಪ್‍ಗೆ ಸಲ್ಲಿಸುವ ಮೂಲಕ ಪಡೆಯುವುದನ್ನು ಕಲ್ಪಿಸಿಕೊಳ್ಳಿ. ವಿಮೆಂಟಾಸ್ಟಿಕ್ ಮಹಿಳಾ ಉದ್ಯಮಿಗಳಿಗೆ ಅಗತ್ಯವಿರುವ ಪ್ರತಿಯೊಂದನ್ನೂ ಒಳಗೊಂಡಿರುತ್ತದೆ. ಉದ್ಯೋಗಗಳಿಂದ, ಉದ್ಯಮದ ಅವಕಾಶಗಳು ಇತ್ಯಾದಿ ಒದಗಿಸುತ್ತದೆ. `ಒಟ್ಟಿಗೆ ಶಕ್ತಿಯುತ’ವಾಗುವುದು ನಮ್ಮ ಉದ್ದೇಶವಾಗಿದ್ದು ನಾವು ಮಹಿಳೆಯರ ಸಬಲೀಕರಣಕ್ಕೆ ಉತ್ತೇಜಿಸಲು ಪರಸ್ಪರ ಬೆಂಬಲಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ” ಎಂದರು.

Leave a Reply

Your email address will not be published. Required fields are marked *