ತೆನೆ ಸಾವಯವ ಬಳಗದ ವೈಬ್‌ ಸೈಟ್‌ (  tenebalaga.com) ಉದ್ಟಾಟನೆ

ರಾಮನಗರ : ತೆನೆ ಸಾವಯವ ಬಳಗದ ವೈಬ್‌ ಸೈಟ್‌ನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಕ್ರಮ್‌ ಉದ್ಟಾಟಿಸಿದರು. ಮತ್ತು ವೈಬ್‌ಸೈಟ್‌ನಲ್ಲಿ ರೂಪಿಸಲಾಗಿರುವ ಮಾವಿನ ಮರ ದತ್ತು ಸ್ವೀಕಾರ ಯೋಜನೆಯ ಮೂಲಕ ಒಂದು ಬಾದಮಿ ಮಾವಿನ ಮರವನ್ನು ಜಿಲ್ಲಾ ಪಂಚಾಯಿತಿ ಹೆಸರಿನಲ್ಲಿ ದತ್ತು ಸ್ವಿಕಾರ ಮಾಡಿದರು.  

ರಾಮನಗರದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ tenebalaga.com ವೆಬ್‌ಸೈಟ್‌ಯನ್ನು ಉದ್ಘಾಟನೆ ಮಾಡಿ, ರೈತರಿಗೆ ಮತ್ತು ಗ್ರಾಹಕರಿಗೆ ಕೊಂಡಿಯಾಗಿರುವ ತೆನೆ ಸಾವಯವ ಬಳಗದ ತೆನೆಬಳಗ.ಕಾಂ. ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು  ಪ್ರಶಂಸೆ ವ್ಯಕ್ತಪಡಿಸಿದರು. ಮೊದಲಿಗೆ ವೈಬ್‌ಸೈಟ್‌ನ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಒಂದು  ಬಾದಮಿ ಮಾವಿನ ಮರವನ್ನು ಜಿಲ್ಲಾ ಪಂಚಾಯತಿ ರಾಮನಗರ ಹೆಸರಿನಲ್ಲಿ ರೂ. 1000 ನೀಡಿ ದತ್ತು ಸ್ವೀಕಾರ ಮಾಡಿಕೊಂಡರು.

ನಂತರ ಮಾತನಾಡಿದ ಅವರು, ಮಾವಿನ ಮರ ದತ್ತು ಸ್ವಿಕಾರ ಯೋಜನೆಯು ತುಂಬಾ ವಿಭಿನ್ನವಾಗಿದೆ. ತೆನೆ ಬಳಗ ಈ ಯೋಜನೆಯನ್ನು ಯಶಸ್ವಿಗೊಳಿಸಲು  ಶ್ರಮಿಸಬೇಕಾಗಿದೆ ಎಂದು ಕಿವಿ ಮಾತು ಹೇಳಿದರು. ತೆನೆ ಬಳಗದ ಈ ಯೋಜನೆಗೆ ನಮ್ಮ ಬೆಂಬಲ ಸದಾ ಇರಲಿದೆ. ಹಾಗೆ ನಮ್ಮ ಜಿಲ್ಲೆಯ ತೋಟಗಾರಿಕಾ ಇಲಾಖೆ ಮತ್ತು ಕೃಷಿ ಇಲಾಖೆಯ ಬೆಂಬಲವೂ ಇರಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮುನೇಗೌಡರು,   ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ್‌  ಮತ್ತು ತೆನೆ ಬಳಗದ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *