ನರೇಗಾದಲ್ಲಿ ಮೀನು ಹೊಂಡ ಲಕ್ಷಕ್ಕೂ ಮೀರಿ ಆದಾಯ : ಕಡಿಮೆ ಜಾಗ-ಸಮಯ ಉಳಿತಾಯ-ಮೀನು ಸಾಕಾಣಿಕೆ ಲಾಭಗಳಿಕೆಗೆ ಸುಲಭ ಮಾರ್ಗ ಎನ್ನುತ್ತಾರೆ ಕಿರಣ್
ಚನ್ನಪಟ್ಟಣ : 10ನೇ ತರಗತಿ ಓದಿರುವ ಕಿರಣ್ ಖಾಸಗಿ ಕಂಪನಿಯನಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ವರ್ಷಗಳಿಂದ ತಮ್ಮ ಗ್ರಾಮದಲ್ಲೆ ನೆಲೆಸಿ ನರೇಗಾ ಯೋಜನೆಯಡಿ 1.3 ಲಕ್ಷ ರೂ. ಅನುದಾನ ಪಡೆದು ಮೀನು ಕೊಳ ನಿರ್ಮಾಣ ಸುಮಾರು 2000 ಕ್ಕೂ ಹೆಚ್ಚು ಮೀನು ಸಾಕಾಣಿಕೆ ಮಾಡಿ 6 ತಿಂಗಳಲ್ಲೆ 600 ಕೆ.ಜಿ ಮೀನು ಮಾರಾಟಮಾಡಿ 90 ಸಾವಿರದಿಂದ 1 ಲಕ್ಷ ರೂ. ಆದಾಯ ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ತೆಗಚಗೆರೆ ಗ್ರಾಮ ಪಂಚಾಯತಿ ನಿವಾಸಿ ಕಿರಣ್ ವೈವಿಧ್ಯ ರೀತಿಯಲ್ಲಿ ಕೆಲಸ ಮಾಡುವ ಉಮ್ಮಸ್ಸು ಹೊಂದಿರುವ ವ್ಯಕ್ತಿಯಾಗಿದ್ದು ಮೀನು ಸಾಕಾಣಿಕೆಗೆ ಹೊಸ ತಂತ್ರಜ್ಞಾನ ಬಳಸಿ 4 ಸಾವಿರ ಮೀನು ಸಾಕಾಣಿಕೆ ಸಾಧ್ಯ ಹಾಗೂ ಇತರ ವ್ಯವಹಾರ ಮಾಡಿರುವ ಇವರಿಗೆ ವ್ಯವಹಾರದಲ್ಲಿ ಲಾಭ ನಷ್ಟದ ಏರುಪೇರು ಹೊಡೆತ ಬಿಳ್ಳುತ್ತಿದ್ದು ಮೀನು ಸಾಕಾಣಿಕೆಯಲ್ಲಿ ಅಂತ ಸಂದಭ9 ಹೆಚ್ಚು ಇರುವುದಿಲ್ಲ ಲಾಭಗಳಿಕೆಯಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಕಿರಣ್.

ಟೈಗರ್ ತಿಲಾಪಿಯಾ, ರೋವು, ಕಾಮನ್ ಕಾಪ್9, ಕಾಟ್ಲಾ, ರೂಪ್ ಚಂದ್ ಹಾಗೂ ಹೈ ಬ್ರೀಡ್ ತಳಿಗಳನ್ನು ವೈಜ್ಞಾನಿಕ ತಂತ್ರಜ್ಞಾನದ ಬಳಕೆ ಮಾಡಿ 2000 ಸಾಕಾಣಿಕೆ ಮಾಡಬಹುದಾಂತ ಕೊಳದಲ್ಲಿ 4000 ಕ್ಕೂ ಹೆಚ್ಚು ಮೀನುಗಳನ್ನು ನೈಸರ್ಗಿಕ ಆಹಾರ ವೀಧಾನ ಬಳಸುತ್ತ ಸಾಕಾಣಿಕೆ ಮಾಡಿ ಹೆಚ್ಚು ಲಾಭಗಳಿಸುತ್ತಿದ್ದಾರೆ.
ಮೀನು ಹೊಂಡದ ನೀರಿನಲ್ಲಿ ಅಮೋನಿಯ ಇರುವುದರಿಂದ ಬೆಳೆಗಳಿಗೆ ಉತ್ತಮ ಪೋಷಕಾಂಶಯುಕ್ತ ನೀರು ಪೂರೈಕೆ ಸಾಧ್ಯವಾಗುತ್ತಿದೆ ಫಲವತ್ತಾದ ಫಸಲು ಸಿಗುತ್ತದೆ ಹಾಗೂ ನೀರಿನಿಂದಲು ತುಂಬ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

ಮೀನುಗಾರಿಕರ ಒಂದೇ ಬಂಡವಾಳ ಒಂದೇ ಇಳುವರಿ ಇರುವುದರಿಂದ ನರೇಗಾ ಯೋಜನೆ ಮೀನುಗಾರಿಕೆಗೆ ಬಂಡವಾಳವಾಗಿ ನಮ್ಮಂತ ಯುವಪೀಳಿಗೆಗೆ ಆರ್ಥಿಕವಾಗಿ ಸದೃಢ ಜೀವನ ರೂಪಿಸಿಕೊಳ್ಳಲು ನೆರವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.